Theft | ಸಂಬಂಧಿಕರ ಮನೆಗೆ ತೆರಳಿದ್ದ ನಿವೃತ್ತ ಪೊಲೀಸ್ ಅಧಿಕಾರಿಯ ಮನೆಗೇ ಕನ್ನ

Theft in home

 

 

ಸುದ್ದಿ ಕಣಜ.ಕಾಂ | TALUK | 24 OCT 2022
ಹೊಸನಗರ: ತಾಲೂಕಿನ ರಿಪ್ಪನಪೇಟೆಯಲ್ಲಿ ನಿವೃತ್ತ ಎಎಸ್‍ಐ ಮನೆಗೆ ಕನ್ನ ಹಾಕಿದ ಘಟನೆ ಭಾನುವಾರ ಹಾಡಹಗಲೇ ನಡೆದಿದೆ.
ನಿವೃತ್ತ ಎಎಸ್‍ಐ ಈಶ್ವರಪ್ಪ ಅವರು ಪತ್ನಿಯ ಸಂಬಂಧಿಕರ ಮನೆಗೆ ತೆರಳಿದ್ದಾಗ ಮನೆಯ ಹಿಂಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

READ | ಆಯನೂರು ಬಳಿ ಭೀಕರ ಅಪಘಾತ, ಒಬ್ಬ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

ಹೋಗಿ ಬರುವ ಹೊತ್ತಿಗೆ ಕಳ್ಳತನ
ಈಶ್ವರಪ್ಪ ಅವರು ಪತ್ನಿಯೊಂದಿಗೆ ಬೆಳಗ್ಗೆ 9ರ ಸುಮಾರಿಗೆ ತೀರ್ಥಹಳ್ಳಿ ತಾಲೂಕಿನ ಗುಂಡಿಬೈಲಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ವಾಪಸ್ ಮನೆಗೆ ಬಂದಿದ್ದಾರೆ. ಅಷ್ಟೊತ್ತಿಗೆ ಕಳ್ಳರು ತಮ್ಮ ಕೈಚಳ ತೋರಿಸಿದ್ದಾರೆ.
ಬೀರುವಿನಲ್ಲಿದ್ದ 190 ಗ್ರಾಂ ಚಿನ್ನ, ಬೆಳ್ಳಿಯ ಆಭರಣ, 17 ಸಾವಿರ ರೂಪಾಯಿ ನಗದು ದೋಚಿದ್ದಾರೆ. ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

https://suddikanaja.com/2022/10/23/attack-on-a-person-at-malalikoppa-shivamogga/

Leave a Reply

Your email address will not be published. Required fields are marked *

error: Content is protected !!