ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾಡಳಿತವು ಸೋಮವಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಭದ್ರಾವತಿ ಇನ್ನುಳಿದ ಎಲ್ಲ ತಾಲೂಕುಗಳನ್ನು ಸೋಂಕಿನಲ್ಲಿ ಹಿಂದಿಕ್ಕಿದೆ.
ಭಾನುವಾರದವರೆಗೆ ಶಿವಮೊಗ್ಗ ತಾಲೂಕು ಪಾಸಿಟಿವಿಟಿಯಲ್ಲಿ ಮುಂದಿತ್ತು. ಆದರೆ, ಇದೇ ಮೊದಲ ಸಲ ಭದ್ರಾವತಿಗಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ.
https://www.suddikanaja.com/2021/06/06/corona-case-increase-in-three-taluk/
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 52 ಪ್ರಕರಣಗಳು ಪತ್ತೆಯಾಗಿದ್ದು, ಭದ್ರಾವತಿಯಲ್ಲಿ 72 ಜನರಲ್ಲಿ ಸೋಂಕು ಕಂಡುಬಂದಿದೆ. ಇನ್ನುಳಿದಂತೆ, ತೀರ್ಥಹಳ್ಳಿ 9, ಶಿಕಾರಿಪುರ 17, ಸಾಗರ 23, ಹೊಸನಗರ 9, ಸೊರಬ 3, ಬಾಹ್ಯ ಜಿಲ್ಲೆಯ 8 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ.
193 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 15 ವಿದ್ಯಾರ್ಥಿಗಳಿದ್ದಾರೆ. 458 ಜನ ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣದಲ್ಲಿ ನಿರಂತರ ಇಳಿಕೆ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 282, ಡಿಸಿಎಚ್ಸಿನಲ್ಲಿ 135, ಕೋವಿಡ್ ಕೇರ್ ಸೆಂಟರ್ನಲ್ಲಿ 688, ಖಾಸಗಿ ಆಸ್ಪತ್ರೆಯಲ್ಲಿ 399, ಹೋಮ್ ಐಸೋಲೇಷನ್ ನಲ್ಲಿ 502, ಟ್ರಿಯೇಜ್ ನಲ್ಲಿ 347 ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ 2,353 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,328 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 3,816 ವರದಿಗಳು ನೆಗೆಟಿವ್ ಬಂದಿವೆ.
https://www.suddikanaja.com/2021/05/06/covid-outbreak-in-bhadravathi/