Shoot out | ಬಲಿಪಾಢ್ಯಮಿ ದಿನವೇ ಪೊಲೀಸ್ ಗುಂಡಿನ ಸದ್ದು, ಮಹಜರು ವೇಳೆ ಖಾಕಿ ಮೇಲೆಯೇ ಅಟ್ಯಾಕ್

arrest shootout

 

 

HIGHLIGHTS

  • ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ವಿಜಯ್ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳಲ್ಲಿ ಮೂವರ ಬಂಧನ
  • ವಿಜಯ್ ಕೊಲೆಗೈದು ಆತನ ಬಳಿ ಇದ್ದ ಚಿನ್ನದ ಸರವನ್ನು ದೋಚಿದ್ದ ಆರೋಪಿಗಳು
  • ಕೊಲೆಗೆ ಬಳಸಿದ ಚಾಕುವನ್ನು ಹರ್ಷ ದ ಫರ್ನ್ ಹಿಂಭಾಗದ ಚಾನೆಲ್ ಹತ್ತಿರ ಬಚ್ಚಿಟ್ಟಿದ್ದ ಆರೋಪಿಗಳು, ಮಹಜರು ವೇಳೆ ಜಬಿ ಪೊಲೀಸರ ಮೇಲೆ ಅಟ್ಯಾಕ್

ಸುದ್ದಿ ಕಣಜ.ಕಾಂ | DISTRICT | 26 OCT 2022
ಶಿವಮೊಗ್ಗ: ವೆಂಕಟೇಶನಗರ ಕೊಲೆ ಪ್ರಕರಣ ಸಂಬಂಧ ಮಹಜರು ಮಾಡುವುದಕ್ಕಾಗಿ ಆರೋಪಿಯನ್ನು ಕರೆದುಕೊಂಡು ಹೋದಾಗ ಚಾಕುವಿನಿಂದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದು, ಆಗ ರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ವೆಂಕಟೇಶನಗರದ ಅನಕೃ ರಸ್ತೆಯಲ್ಲಿ ವಿಜಯ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

READ | ವೆಂಕಟೇಶ ನಗರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್, ವಿಚಾರಣೆ ವೇಳೆ‌ ತಿಳಿದುಬಂದ ವಿಚಾರಗಳಿವು

ಬಂಧಿತ ಆರೋಪಿಗಳ್ಯಾರು ಅವರ ಮೇಲಿರುವ ಕೇಸ್’ಗಳೇನು?

  • ಆರೋಪಿ ನಂ.1– ಜಬಿ(23) ಎಂಬಾತನನ್ನು ಬಂಧಿಸಲಾಗಿದೆ. ಈತನ ಮೇಲೆ ಈ ಹಿಂದೆ ಸುಲಿಗೆ, ಡರೋಡೆ, ಕೊಲೆ ಯತ್ನ, ಗಾಂಜಾ ಮತ್ತು ಇತರೆ ಪ್ರಕರಣಗಳು ಸೇರಿ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತವೆ.
  • ಆರೋಪಿ ನಂ.2– ದರ್ಶನ್(21) ಮೇಲೆ ಈ ಹಿಂದೆ ಸುಲಿಗೆ, ದರೋಡೆ ಮತ್ತಿತರೆ ಪ್ರಕರಣಗಳು ಸೇರಿ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತವೆ.
  • ಆರೋಪಿ ನಂ.3– ಕಾರ್ತಿಕ್ ಅಲಿಯಾಸ್ ಕಟ್ಟೆ ಕಾರ್ತಿಕ್(21) ಎಂಬಾತನ ಮೇಲೆ ಈ ಹಿಂದೆ 3 ಪ್ರಕರಣಗಳು ದಾಖಲಾಗಿರುತ್ತವೆ. ಅವರುಗಳನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪತ್ತೆ ಕಾರ್ಯ ನಡೆದಿದೆ.

ಅಂದು ನಡೆದಿದ್ದೇನು? ಆಯುಧ ಎಲ್ಲಿ ಬಚ್ಚಿಟ್ಟಿದ್ದರು
ವಿಜಯ್ ಕೊಲೆಯು ಸುಲಿಗೆ ಮಾಡುವ ಸಮಯದಲ್ಲಿ ನಡೆದಿದ್ದು, ಆರೋಪಿಗಳು ಚುಚ್ಚಿ ಕೊಲೆ ಮಾಡಿ, ನಂತರ ಮೃತನ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುತ್ತಾರೆ.
ಬುಧವಾರ ಬೆಳಗ್ಗೆ ಕೊಲೆಗೆ ಉಪಯೋಗಿಸಿದ ಆಯುಧವನ್ನು ವಶಕ್ಕೆ ಪಡೆಯಲು ಆರೋಪಿಯು ಆಯುಧವನ್ನು ಬಚ್ಚಿಟ್ಟ ಸ್ಥಳವಾದ ಹರ್ಷ ಫರ್ನ್ ಹೋಟೆಲ್ ಹಿಂಭಾಗದ ಚಾನೆಲ್ ಹತ್ತಿರ ಆರೋಪಿ ಜಬಿಯನ್ನು ಕರೆದುಕೊಂಡು ಹೋದಾಗ, ಜಬಿಯು ಕೃತ್ಯಕ್ಕೆ ಬಳಸಿದ ಆಯುಧವನ್ನು ತೆಗೆದುಕೊಂಡು, ಬೆಂಗಾವಲು ಕರ್ತವ್ಯದಲ್ಲಿದ್ದ ಸಿಬ್ಬಂದ ರೋಷನ್ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.

READ | ದೀಪಾವಳಿ ಹಿನ್ನೆಲೆ ಶಿವಮೊಗ್ಗ-ಯಶವಂತಪುರ ನಡುವೆ ಹೊಸ ರೈಲು ಸಂಚಾರ, ವೇಳಾಪಟ್ಟಿ ಇಲ್ಲಿದೆ

ರೋಷನ್ ಅವರು ತಪ್ಪಿಸಿಕೊಂಡಿದ್ದು ಅವರಿಗೆ ಈ ವೇಳೆ ಗಾಯವಾಗಿರುತ್ತದೆ. ಈ ಸಂದರ್ಭದಲ್ಲಿ ಕುಂಸಿ ಪೊಲೀಸ್ ಠಾಣೆ ಪಿಐ ಹರೀಶ್ ಕೆ.ಪಟೇಲ್ ತಮ್ಮ ಮತ್ತು ಸಿಬ್ಬಂದಿಯ ರಕ್ಷಣೆಗಾಗಿ ಆರೋಪಿ ಜಬಿಯ ಕಾಲಿಗೆ ಗುಂಡು ಹಾರಿಸಿರುತ್ತಾರೆ. ನಂತರ ಗಾಯಗೊಂಡ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

https://suddikanaja.com/2022/10/25/three-accused-arrested-in-bharmapura-attack-case-at-shivamogga-two-were-absconded/

Leave a Reply

Your email address will not be published. Required fields are marked *

error: Content is protected !!