DCC Bank | ಇದೇ ತಿಂಗಳು‌ ನಡೆಯಲಿದೆ ಡಿಸಿಸಿ‌ ಬ್ಯಾಂಕ್ ಪರೀಕ್ಷೆ, ಹಾಲ್ ಸಿಕ್ಕಿಲ್ಲವೇ? ಹೀಗೆ ಮಾಡಿ, ಎಲ್ಲೆಲ್ಲಿ ನಡೆಯಲಿದೆ‌ ಎಕ್ಸಾಂ?

DCC Bank shivamogga

 

 

ಸುದ್ದಿ‌ ಕಣಜ.ಕಾಂ | Job Junction
ಶಿವಮೊಗ್ಗ(Shivamogga): ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ)ನಲ್ಲಿ ಖಾಲಿ ಇರುವ ಕಿರಿಯ ಸಹಾಯಕರು, ನಗದು ಗುಮಾಸ್ತರು, ಕ್ಷೇತ್ರಾಧಿಕಾರಿಗಳು, ವಾಹನ ಚಾಲಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನವೆಂಬರ್ 12 ಹಾಗೂ 13ರಂದು ನಡೆಸಲಾಗುತ್ತಿದೆ.

JOBS FB Link

READ | ಆಟೋ ಚಾಲಕರಿಗೆ ಪೊಲೀಸರ ಖಡಕ್ ವಾರ್ನಿಂಗ್, ಎಸ್‍ಪಿ ನೀಡಿದ 7 ಸೂಚನೆಗಳಿವು

ಪ್ರವೇಶ ಪತ್ರ ತಲುಪಿಲ್ಲವೇ?
ಈ ಕುರಿತು ಪ್ರವೇಶ ಪತ್ರವನ್ನು ಕಳುಹಿಸಲಾಗಿದ್ದು, ಪ್ರವೇಶ ಪತ್ರ ತಲುಪದಿದ್ದ ಅಭ್ಯರ್ಥಿಗಳು ಅರ್ಜಿಯ ಸ್ವೀಕೃತಿ ಪತ್ರ, ಕೋರಿಕೆ ಪತ್ರ, ಮೂಲ ಆಧಾರ ಕಾರ್ಡ್ ಹಾಗೂ ಜೆರಾಕ್ಸ್ ಪ್ರತಿ, 2 ಭಾವಚಿತ್ರದೊಂದಿಗೆ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನವೆಂಬರ್ 10ರಂದು ಸಂಪರ್ಕಿಸಿದ್ದಲ್ಲಿ ನಕಲು ಪ್ರವೇಶ ಪತ್ರವನ್ನು ನೀಡಲಾಗುವುದು.
ಅರ್ಜಿ ತಿರಸ್ಕೃತಗೊಂಡ ಎಲ್ಲ ಹುದ್ದೆಗಳ ಅರ್ಜಿದಾರರ ವಿವರವನ್ನು ಬ್ಯಾಂಕಿನ ಪ್ರಧಾನ ಕಚೇರಿಯ ನೋಟಿಸ್ ಬೋರ್ಡ್‌ ನಲ್ಲಿ ಹಾಗೂ ಬ್ಯಾಂಕಿನ ವೆಬ್‍ಸೈಟ್ www.shimogadccbank.com ರಲ್ಲಿ ಪ್ರಕಟಿಸಲಾಗಿದೆ ಎಂದು ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ದಿನ, ಯಾವ ಪರೀಕ್ಷೆ?
ನವೆಂಬರ್ 12ರಂದು ವಾಹನ ಚಾಲರ ಹುದ್ದೆಗಾಗಿ ಮಧ್ಯಾಹ್ನ 2 ರಿಂದ 3.30ರ ವರೆಗೆ ಆಚಾರ್ಯ ತುಳಸಿ ಕಾಲೇಜು ಆಫ್ ಕಾಮರ್ಸ್, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣ ಬಾಲರಾಜ್ ಅರಸ್ ರಸ್ತೆ, ನ.13ರಂದು ಅಟೆಂಡರ್ ಹುದ್ದೆಗಾಗಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಕಿರಿಯ ಸಹಾಯಕರು, ನಗದು ಗುಮಾಸ್ತರು, ಕ್ಷೇತ್ರಾಧಿಕಾರಿಗಳ ಹುದ್ದೆಗಳಿಗಾಗಿ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣ, ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜು, ಕಸ್ತೂರಬಾ ಪ್ರೌಢಶಾಲೆ ಆವರಣ ಹಾಗೂ ಡಿ.ವಿ.ಎಸ್. ಕಾಲೇಜು ಆವರಣದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-222396 ಅನ್ನು ಸಂಪರ್ಕಿಸುವುದು.

READ | ಬೇಕರಿ, ಹೋಟೆಲ್ ಮಾಲೀಕರೇ ಎಚ್ಚರ! ಇದು ಫೇಕ್ ಫುಡ್ ಆಫಿಸರ್ ಕಥೆ

error: Content is protected !!