Night rounds | ಚುಮುಚುಮು ಚಳಿಯಲ್ಲೇ ಪಾಲಿಕೆ ಆಯುಕ್ತರಿಂದ ಬೈಕಿನಲ್ಲೇ ನೈಟ್ ರೌಂಡ್ಸ್, ತೆರವು ಕಾರ್ಯಾಚರಣೆ ವೀಕ್ಷಣೆ

mayanna gowda

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಹಾನಗರ ಪಾಲಿಕೆ ಆಯುಕ್ತ‌ ಮಾಯಣ್ಣಗೌಡ ಅವರು ಬುಧವಾರ ರಾತ್ರಿ ತಮ್ಮ ಬೈಕಿನಲ್ಲೇ ನೈಟ್ ರೌಂಡ್ಸ್ ಮಾಡಿದ್ದು ವಿಶೇಷವಾಗಿತ್ತು.
ಎಲ್ಲೆಲ್ಲಿ‌ ತೆರವು ಕಾರ್ಯಾಚರಣೆ ನಡೆದಿದೆಯೋ ಅಂತಹ ಕಡೆಗೆ ಭೇಟಿ ನೀಡಿ ಪರಿಶೀಲಿಸಿದರು.‌‌ ಪಾದಾಚಾರಿ ರಸ್ತೆಯ ಮೇಲೆ ವ್ಯಾಪಾರ ಮಾಡುತ್ತಿದ್ದವರಿಗೆ ಎಚ್ಚರಿಕೆ‌ ನೀಡಿದರು.

READ | ಗೂಗಲ್ ಗುರು, ಸ್ವಿಗ್ಗಿಯನ್ನು ಅಮ್ಮನಾಗಿಸಿದ ಕೋವಿಡ್!

ಎಲ್ಲೆಲ್ಲಿ‌ ತೆರವು ಕಾರ್ಯಾಚರಣೆ
ಬುಧವಾರ ಬೆಳಗ್ಗೆ ಶಿವಮೊಗ್ಗ ನಗರದ, ಬಿ.ಎಚ್.ರಸ್ತೆ, ಪ್ರವಾಸಿ ಮಂದಿರ, ಮಲನಾಡಸಿರಿ, ಆಯನೂರು ಗೇಟ್, ದ್ವಾರಕ ಕನ್ವೆನ್ಸಲ್ ಹಾಲ್ ಎದುರು, ಭಾರ್ಗವಿ ಪೆಟ್ರೋಲ್ ಬಂಕ್, ಎಪಿಎಂಸಿ, ಆಲ್ಕೋಳ ಸರ್ಕಲ್, ಹೊಸಮನೆ ಇನ್ನೂ ಹಲವು ಕಡೆ ಪಾಲಿಕೆ ಸಿಬ್ಬಂದಿಯಿಂದ ಪುಟ್ ಪಾತ್ ಹಾಗೂ ರಸ್ತೆ ಅಕ್ರಮಿಸಿಕೊಂಡವರ ತೆರವು ಕಾರ್ಯಾಚರಣೆ ಮುಂದುವರೆದಿದೆ.
ಪಾಲಿಕೆ ಸಿಬ್ಬಂದಿ ತೆರವು ಮಾಡಿ ಹೋದ ನಂತರ ಹಾಗೂ ಮಧ್ಯಾಹ್ನ ಅವರ ಕರ್ತವ್ಯ ಮುಗಿದ ನಂತರ ಪುನಃ ಸಂಜೆಯ ಮೇಲೆ ತಮ್ಮ ಸಾಮಗ್ರಿಯ ರಸ್ತೆಗೆ ಹರಡಿ ವ್ಯಾಪಾರ ಮಾಡತೊಡಗಿದರ ವೀಕ್ಷಣೆಗೆ ಸ್ವತಃ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು, ರಾತ್ರಿಯ ವೇಳೆ ಸಾಮಾನ್ಯ ನಾಗರಿಕರಂತೆ ಬೈಕ್ ನಲ್ಲಿ ನಗರದ ಎಲ್ಲ ಕಡೆ ಸುತ್ತುತ್ತಾ ರಸ್ತೆಗೆ ಹರಡಿ ವ್ಯಾಪಾರ ಮಾಡುತ್ತಿರುವರನ್ನು ಕಂಡು ರಾತ್ರಿಯು ಪಾಲಿಕೆ ಸಿಬ್ಬಂದಿಗಳನ್ನು ಕರಸಿ ಅಂಗಡಿಯ ಮಾಲೀಕರ ಲೈಸೆನ್ಸ್ ರದ್ದು ಮಾಡಲು ಹಾಗೂ ಬೀದಿಬದಿ ವ್ಯಾಪಾರಗಳ ಸಾಮಗ್ರಿಯ ವಶಪಡಿಸಿಕೊಳ್ಳಲು ತಿಳಿಸಿದರು.
ಆಯುಕ್ತರು‌ ನೀಡಿದ ಸಲಹೆಗಳೇನು?

  • ವ್ಯಾಪಾರಿಗಳು ನಗರದ ಸ್ವಚ್ಛತೆ ಕಾಪಾಡ ಬೇಕು. ತ್ಯಾಜ್ಯವನ್ನು ಗಂಟೆಗಾಡಿಗೆ ಹಾಕಿ, ವ್ಯಾಪಾರದ ಸ್ಥಳ ಸದಾ ಸ್ವಚ್ಛತೆ ಇರಬೇಕು.
  • ರಾತ್ರಿ ಹತ್ತರ ಒಳಗೆ ವ್ಯಾಪಾರ ವಹಿವಾಟು ಬಂದು ಮಾಡಬೇಕು. ಏಫ್ರಾನ್ ಧರಿಸಬೇಕು.
  • ಬೀದಿಬದಿಯ ಗುರುತಿನ ಚೀಟಿ ಹಾಗೂ ಆಹಾರ ಸುರಕ್ಷತೆ ಪ್ರಮಾಣ ಪತ್ರ, ಅಧಿಕಾರಿಗಳಿಗೆ ಕಾಣುವಂತೆ ಇಡಬೇಕು.
  • ಕಾರ್ಡ್ ನಲ್ಲಿ ಇರುವ ವ್ಯಾಪಾರಿ ಮಾತ್ರ ಪಾಲಿಕೆ ನೀಡಿದ ಸ್ಥಳದಲ್ಲಿ ವ್ಯಾಪಾರ ಮಾಡಬೇಕು. ಪುಟ್ ಪಾತ್ ಆಕ್ರಮಿಸಿಕೊಳ್ಳಬಾರದು.

error: Content is protected !!