Job Webportal | ಉದ್ಯೋಗ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಎಲ್ಲ ಉದ್ಯೋಗಗಳ‌ ಒಂದೇ ಪೋರ್ಟಲ್, ಒಂದು‌ ವೇದಿಕೆಯಲ್ಲಿ ನೂರಾರು‌ ಕಂಪೆನಿ

Skill connect webportal Job

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಉದ್ಯೋಗದ ನೆರವಿಗಾಗಿ ಅಧಿಕೃತವಾಗಿ ವೆಬ್‍ ಪೋರ್ಟಲ್ https://skillconnect.kaushalkar.com ಅನ್ನು ಅನಾವರಣಗೊಳಿಸಿದೆ.

READ | ಶಿವಮೊಗ್ಗ ಬಗ್ಗೆ ನಡೆಯಲಿದೆ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ಸರ್ವೇ, ನೀವೂ ಓಟ್ ಮಾಡಬಹುದು

ಈ ವೆಬ್‍ ಪೋರ್ಟಲ್‍ನಲ್ಲಿ ಪ್ರತಿಷ್ಠಿತ ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಉದ್ಯೋಗಾಕಾಂಕ್ಷಿಗಳ ಬಯೋಡೇಟಾವನ್ನು ವೀಕ್ಷಿಸಿ ಉದ್ಯೋಗಕ್ಕೆ ಪರಿಗಣಿಸುವುದರಿಂದ ತಮ್ಮ ವಿದ್ಯಾರ್ಹತೆ, ಕೌಶಲ ಹಾಗೂ ಅನುಭವವನ್ನು ನೋಂದಾಯಿಸಿಕೊಂಡು ಈ ವೆಬ್‍ ಪೋರ್ಟಲ್‍ನ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಎಂ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳ ಕಚೇರಿ, ನಂ.303/528, ಶಾಂತಲ ಟವರ್ಸ್, 2ನೇ ಮಹಡಿ, 3ನೇ ಅಡ್ಡರಸ್ತೆ, ನೆಹರು ರಸ್ತೆ, ಗಾರ್ಡನ್ ಏರಿಯಾ, ಶಿವಮೊಗ್ಗ. ದೂ.ಸಂ.: 8197176710 ಅನ್ನು ಸಂಪರ್ಕಿಸುವುದು.

error: Content is protected !!