ಶಿವಮೊಗ್ಗ ತಾಲೂಕಿನ 40 ಗ್ರಾಮ ಪಂಚಾಯಿತಿ, ತೀರ್ಥಹಳ್ಳಿಯ 38 ಮತ್ತು ಭದ್ರಾವತಿಯ 35 ಪಂಚಾಯಿತಿಗಳಿಗೆ ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ, ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಶಿವಮೊಗ್ಗ ತಾಲೂಕು ವ್ಯಾಪ್ತಿಯ ಮಸ್ಟರಿಂಗ್ ಅನ್ನು ನಗರದ ಎನ್.ಇ.ಎಸ್.ನಲ್ಲಿ ಮಾಡಲಾಗಿತ್ತು. ಸೋಮವಾರ ಬೆಳಗ್ಗೆಯಿಂದಲೇ ಇಲ್ಲಿ ಚುನಾವಣೆ ವಾತಾವರಣ ಮನೆ ಮಾಡಿತ್ತು. ಚುನಾವಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾದರು.
ಮತದಾರರ ಪಟ್ಟಿಯಲ್ಲಿ ಮತದಾರರ ಚಿತ್ರ ಸರಿಯಾಗಿ ಕಾಣದಿರುವುದು, ಗ್ರಾಪಂ ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡ ಕೆಲವರು ವಿಳಂಬವಾಗಿ ಬಂದಿದ್ದು, ಹೀಗೆ ಕೆಲವು ಗೊಂದಲಗಳ ನಡುವೆಯೇ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. 50 ರೂಟ್ಗೆ 47 ಬಸ್, 7 ಜೀಪ್: ಶಿವಮೊಗ್ಗ ತಾಲೂಕಿಗೆ 50 ಮಾರ್ಗಗಳನ್ನು ಗುರುತಿಸಲಾಗಿದೆ. ಅದರಲ್ಲಿ 43 ಬಸ್ ಮಾರ್ಗಗಳಿದ್ದು, 47 ಬಸ್ಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ, 8 ಮಾರ್ಗಗಳಿಗೆ 7 ಜೀಪ್ ನೀಡಲಾಗಿದೆ. ಅಧಿಕಾರಿಗಳ ಓಡಾಟಕ್ಕೆ ಜೀಪ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್ನಲ್ಲಿ ಸಿಬ್ಬಂದಿ ಮತ್ತು ಬ್ಯಾಲೆಟ್ ಪೇಪರ್, ಬಾಕ್ಸ್ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ.
ಬಿಗಿ ಭದ್ರತೆ: ಮಾಸ್ಟರಿಂಗ್ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೆ, ಇಡೀ ರಾತ್ರಿ ಪಂಚಾಯಿತಿಯಲ್ಲೇ ಚುನಾವಣೆ ಸಿಬ್ಬಂದಿ ಇರಬೇಕಾಗಿರುವುದರಿಂದ ಅಲ್ಲಿ ಹೋಂ ಗಾಡ್ರ್ಸ್ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ: ತಾಲೂಕಿನ ಕೂಡ್ಲಿಗೆರೆ 66/11 ಕೆವಿ ವಿದ್ಯುತ್ ವಿತರಣೆ ಕೇಂದ್ರದ ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯ ಇರುವುದರಿಂದ ಜುಲೈ 11 ಮತ್ತು 12ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ […]
ಸುದ್ದಿ ಕಣಜ.ಕಾಂ | SHIMOGA CITY | 25 OCT 2022 ಶಿವಮೊಗ್ಗ(shivamogga): ತಾಳಗುಪ್ಪ(talaguppa)- ಶಿವಮೊಗ್ಗ (ರೈಲು ಸಂಖ್ಯೆ 07349) ರೈಲಿನಲ್ಲಿ 40-45 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಗುರುತು ಪತ್ತೆಯಾಗಿಲ್ಲ. READ […]
ಸುದ್ದಿ ಕಣಜ.ಕಾಂ | KARNATAKA | ARECANUT RATE ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ದರವು ಸ್ಥಿರವಾಗಿದೆ. ರಾಶಿ ಅಡಿಕೆ ಬೆಲೆಯು ಸಿದ್ದಾಪುರದಲ್ಲಿ ಅತ್ಯಧಿಕವಿದ್ದು, ಇನ್ನುಳಿದ ಎಲ್ಲ ಮಾರುಕಟ್ಟೆಗಳ ಮಾಹಿತಿ ಕೆಳಗಿನಂತಿದೆ. ರಾಜ್ಯದ ವಿವಿಧ […]