Arrest | ದೇವಸ್ಥಾನ ಆವರಣದಲ್ಲಿ ಮಹಿಳೆ ಮರ್ಡರ್, ಕುಂದಾಪುರ ಮೂಲದ ವ್ಯಕ್ತಿ ಅರೆಸ್ಟ್

bhadravathi arrest

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಮಹಿಳೆಯೊಬ್ಬರ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಭದ್ರಾವತಿ ಪೊಲೀಸರು ಸಫಲರಾಗಿದ್ದಾರೆ.
ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣದಹಳ್ಳಿ ಗ್ರಾಮದ ಶಂಕ್ರಮ್ಮ(70) ಎಂಬುವವರ ಕೊಲೆ ಪ್ರಕರಣದ ಆರೋಪಿ ಉಡುಪಿ ಜಿಲ್ಲೆಯ ಕುಂದಾಪುರದ ದುಗ್ಗದ ಮನೆ ನಿವಾಸಿ ಕರುಣಾಕರ ದೇವಾಡಿಗ(24) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದದ್ದಾರೆ.

READ | ಸತತ ಎರಡನೇ ದಿನವೂ ಅಡಿಕೆ ಧಾರಣೆ ಏರಿಕೆ, 17/12/2022ರ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ದರ?

ನಡೆದಿದ್ದೇನು?
ಶಂಕ್ರಮ್ಮ ಅವರು ಸುಣ್ಣದಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದ ಹಣ ಬೇಡಿ ಅದರಿಂದಲೇ ಜೀವನ ಸಾಗಿಸುತ್ತಿದ್ದರು. ರಾತ್ರಿ ವೇಳೆಯಲ್ಲಿ ದೇವಸ್ಥಾನದ ಎದುರುಗಡೆಯ ಅಂತರಘಟ್ಟಮ್ಮ ದೇವರ ಗುಡಿಯ ಕಾಂಪೌಂಡ್ ನ ಒಳಭಾಗ ಮಲಗುತ್ತಿದ್ದರು. ಅಲ್ಲಿ ಮಲಗಿದ್ದಾಗ ಇತ್ತೀಚೆಗೆ ಕೊಲೆ ಮಾಡಲಾಗಿತ್ತು. ಚಿನ್ನದ ಕಿವಿ ಓಲೆ ಮತ್ತು ಮೂಗು ಬಟ್ಟನ್ನು ಕಿತ್ತುಕೊಳ್ಳಲಾಗಿತ್ತು. ಈ ಬಗ್ಗೆ ದೂರು ಸಹ ದಾಖಲಾಗಿತ್ತು.
ತನಿಖಾ ತಂಡದ ಕಾರ್ಯಾಚರಣೆ
ಪ್ರಕರಣ ದಾಖಲಿಸಿಕೊಂಡು ಭದ್ರಾವತಿಯ ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ ದಯಾಮ ಮಾರ್ಗದರ್ಶನದಲ್ಲಿ ಪೇಪರ್ ಟೌನ್ ಠಾಣೆಯ ಪಿಐ ಮಂಜುನಾಥ್ ನೇತೃತ್ವದಲ್ಲಿ, ಪಿಎಎಸ್.ಐ ಶಿಲ್ಪಾ ನಾಯನೇಗಲಿ, ಸಿಬ್ಬಂದಿ ರತ್ನಾಕರ, ವಾಸುದೇವ, ಚಿನ್ನನಾಯ್ಕ, ಹನಮಂತ ಅವಟಿ, ಆದರ್ಶ ಶೆಟ್ಟಿ, ಮೌನೇಶ ಶೀಖಲ್, ಆರ್.ಅರುಣ್, ವಿಕ್ರಮ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ.
14 ಸಾವಿರ ಮೌಲ್ಯದ ಚಿನ್ನ ಸೀಜ್
ಶಂಕ್ರಮ್ಮ ಅವರ ಮೈಮೇಲಿಂದ ಕಿತ್ತುಕೊಂಡಿದ್ದ ಅಂದಾಜು 14,000 ರೂ. ಮೌಲ್ಯದ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಮೂಗುತಿಯನ್ನು ಸೀಜ್ ಮಾಡಲಾಗಿದೆ. ಎಸ್.ಪಿ. ಮಿಥುನ್ ಕುಮಾರ್ ಅವರು ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://suddikanaja.com/2022/12/17/16-check-post-at-shimoga/

error: Content is protected !!