ಸುದ್ದಿ ಕಣಜ.ಕಾಂ ಶಿವಮೊಗ್ಗ: ಶಿವಮೊಗ್ಗ ತಾಲೂಕಿನಲ್ಲಿ ಬುಧವಾರ 9 ಜನರಿಗೆ ಕೊರೊನಾ ಸೋಂಕು ತಗಲಿದೆ. ಇನ್ನುಳಿದಂತೆ, ಭದ್ರಾವತಿಯಲ್ಲಿ 1, ಸಾಗರ 4 ಹಾಗೂ ಬೇರೆ ಜಿಲ್ಲೆಯ 2 ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಇಂದು ಹೊಸದಾಗಿ 16 ಪ್ರಕರಣಗಳು ದೃಢಪಟ್ಟಿವೆ. 10 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಂದು ಕೂಡ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ ಕೊರೊನಾರ ಜಿಲ್ಲೆಯಲ್ಲಿ 348 ಜನರ ಪ್ರಾಣ ಹರಣ ಮಾಡಿದೆ.
102 ಸಕ್ರಿಯ ಪ್ರಕರಣ: ನಗರದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 30 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಪ್ರಸಕ್ತ 9 ಜನ ದಾಖಲಾಗಿದ್ದಾರೆ. ಮನೆ ಆರೈಕೆಯಲ್ಲಿ 63 ಜನರಿದ್ದಾರೆ. ಒಟ್ಟು 102 ಸಕ್ರಿಯ ಪ್ರಕರಣಗಳು ಇವೆ.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಾಜಿ ಸಚಿವರೂ ಆದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನದ ಆಕಾಂಕ್ಷೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು, ‘ನಾನೀಗ ಸಚಿವನಾಗುವ ಆಸೆ ಬಿಟ್ಟಿದ್ದೇನೆ, […]
ಸುದ್ದಿ ಕಣಜ.ಕಾಂ | KARNATAKA | HEALTH NEWS ಬೆಂಗಳೂರು: ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್ ಟ್ಯೂಮರ್ ತಗೆದು ಪ್ರಾಣ ಉಳಿಸಿದ ವೈದ್ಯರುಗಳಿಗೆ 70 ವರ್ಷದ ರೋಗಿಯೊಬ್ಬರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲಾಡಳಿತವು ಸೋಮವಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಭದ್ರಾವತಿ ಇನ್ನುಳಿದ ಎಲ್ಲ ತಾಲೂಕುಗಳನ್ನು ಸೋಂಕಿನಲ್ಲಿ ಹಿಂದಿಕ್ಕಿದೆ. ಭಾನುವಾರದವರೆಗೆ ಶಿವಮೊಗ್ಗ ತಾಲೂಕು ಪಾಸಿಟಿವಿಟಿಯಲ್ಲಿ ಮುಂದಿತ್ತು. ಆದರೆ, ಇದೇ ಮೊದಲ […]