ಸುದ್ದಿ ಕಣಜ.ಕಾಂ ಶಿವಮೊಗ್ಗ: ಗುರುಪುರದಲ್ಲಿ ಇದ್ದಕ್ಕಿದ್ದಂತೆ ಮನೆಯ ಸಮೀಪ ನಿಲ್ಲಿಸಿದ್ದ ಬಸ್ ಧಗ ಧಗನೆ ಉರಿದು ಸುಟ್ಟು ಕರಕಲಾದ ಘಟನೆ ಸಂಭವಿಸಿದೆ. ಆದರೆ, ಬಸ್ಗೆ ಬೆಂಕಿ ತಗಲಲು ಕಾರಣವೇನೆಂದು ತಿಳಿದುಬಂದಿಲ್ಲ.
ರವಿಕುಮಾರ್ ಎಂಬಾತ ಮನೆಯ ಸಮೀಪ ತನಗೆ ಸೇರಿದ್ದ ಬಸ್ ನಿಲ್ಲಿಸಿದ್ದ. ಒಳಗಡೆ ಡೀಸೆಲ್ ಮತ್ತು ಬ್ಯಾಟರಿ ಇಲ್ಲದಿದ್ದರೂ ಅನುಮಾನಾಸ್ಪದವಾಗಿ ಬಸ್ ಹೊತ್ತಿ ಉರಿದಿದೆ. ಕೆಲವೇ ಹೊತ್ತಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಸಂಚರಿಸುತ್ತಿದ್ದ ಬಸ್ ಅನ್ನು ಕೊರೊನಾದಿಂದಾಗಿ ಕೆಲವು ದಿನಗಳಿಂದ ಓಡಿಸುತ್ತಿರಲಿಲ್ಲ. ವಾಹನದ ಚಾವಣಿ, ಕಿಟಕಿ, ಗಾಜು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ: ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಬೆಂಕಿ ನೊಂದಿಸಿದ್ದಾರೆ. ಇದರಿಂದಾಗಿ, ಬಸ್ನ ಟೈಯರ್ಗಳಿಗೆ ಹಾನಿಯಾಗಿಲ್ಲ.
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದ ಬೆನ್ನಲ್ಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಇದಾದ ಬೆನ್ನಲ್ಲೇ ನಗರ ಸುತ್ತಮುತ್ತಲಿನ ವಸತಿ ಶಾಲೆ ಮತ್ತು […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕ್ಯಾಸನೂರು ಫಾರೆಸ್ಟ್ ಡಿಸೀಸ್ (kyasanur forest disease- ಕೆಎಫ್.ಡಿ)ಗೆ 18 ವರ್ಷದ ಯುವತಿಯೊಬ್ಬಳು ಸೋಮವಾರ ಮೃತಪಟ್ಟಿದ್ದಾಳೆ. ಹೊಸನಗರ (Hosanagara) ತಾಲೂಕಿನ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರಲ್ಲಿ ಯುವತಿಗೆ […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: 17 ವರ್ಷದ ಬಾಲಕಿಯ ಪ್ರಾಣ ರಕ್ಷಿಸುವ ಮೂಲಕ ಪೊಲೀಸ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. READ | ಶಿವಮೊಗ್ಗದಿಂದ ಹೊರಡುವ […]