Veterinary college | ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ, ಕಾರಣವೇನು?

Veterinary

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನಾ ರ‌್ಯಾಲಿಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಎಂಟು ವರ್ಷಗಳಿಂದ ಇಂಟರ್ನಶಿಪ್ ಭತ್ಯೆಯನ್ನು ₹14 ಸಾವಿರ ಪಾವತಿಸಲಾಗುತ್ತಿದೆ. ಅದನ್ನು ₹30 ಸಾವಿರಕ್ಕೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

READ | ಶಿವಮೊಗ್ಗ ವಿಮಾನ‌‌ ನಿಲ್ದಾಣ ಒಳಗಡೆ ಹೇಗಿದೆ? ಇಲ್ಲಿದೆ‌ ಫೋಟೊ ಆಲ್ಬಂ

ಮಾಸಿಕ ₹20 ಸಾವಿರಕ್ಕೂ ಹೆಚ್ಚು ಖರ್ಚು
ಇಂಟರ್ನಶಿಪ್‌ (Internship) ಅನ್ನು ರಾಜ್ಯ ಹಾಗೂ ಹೊರ ರಾಜ್ಯದ ಹಲವಾರು ಜಿಲ್ಲಾ ಆಸ್ಪತ್ರೆಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಮಾಡಬೇಕು. ಮಾಸಿಕ ಊಟ, ವಸತಿ, ಸಾರಿಗೆ, ಓಡಾಟದ ವೆಚ್ಚ ಹಾಗೂ ವ್ಯಾಸಂಗ ಸೇರಿ ₹20 ಸಾವಿರವರೆಗೆ ಖರ್ಚಾಗುತ್ತದೆ. ಇದಲ್ಲದೆ ವಿಶ್ವವಿದ್ಯಾಲಯಕ್ಕೆ ವಾರ್ಷಿಕ ಸುಮಾರು ₹45 ಸಾವಿರ ಶುಲ್ಕವನ್ನು ಪಾವತಿಸಬೇಕು. ಇಂಟರ್ನಶಿಪ್ ಅವಧಿಯಲ್ಲಿ ಮಾಸಿಕ ಭತ್ಯೆ ನೀಡುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ವೇತನ ಸಿಗುವುದಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ‌ ಇಂಟರ್ನಶಿಪ್ ಅವಧಿಯಲ್ಲಿನ ಭತ್ಯೆಯನ್ನು ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

error: Content is protected !!