Agniveer | ಅಗ್ನಿವೀರ್ ನೇಮಕಾತಿಗೆ ನೋಂದಣಿ ಆರಂಭ, ಯಾವಾಗಿಂದ ನೇಮಕಾತಿ?

IMG 20220517 232257 102

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023-24 ನೇ ಸಾಲಿಗೆ ಭಾರತ ಸರ್ಕಾರವು ಅಗ್ನಿವೀರ್ ನೇಮಕಾತಿ ಯೋಜನೆಯಡಿ ಸಶಸ್ತ್ರ ಪಡೆಗೆ ನೇಮಕಾತಿ ಮಾಡಿಕೊಳ್ಳಲು ಆನ್‍ಲೈನ್ ನೋಂದಣಿಯನ್ನು ಆರಂಭಿಸಿದ್ದು, ಮಾರ್ಚ್ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

READ | ಹೆಲ್ತ್ ಆ್ಯಂಡ್ ವೆಲ್ ನೆಸ್ ಸೆಂಟರ್ ಗಳಲ್ಲಿ ಉದ್ಯೋಗ, ಎಲ್ಲೆಲ್ಲಿ ಅವಕಾಶ?

ಅಗ್ನಿವೀರ್ ನೇಮಕಾತಿಯ ಪರೀಕ್ಷೆಗಳು ಏಪ್ರಿಲ್ 17 ರಿಂದ ಆರಂಭವಾಗಲಿದ್ದು ಫೇಸ್-1 ರಲ್ಲಿ ಆನ್‍ಲೈನ್ ಕಂಪ್ಯೂಟರ್ ಆಧಾರಿತ ಸಾಮಾನ್ಯ ಪ್ರವೇಶ ಪರೀಕ್ಷೆ(ಆನ್‍ಲೈನ್ ಸಿಇಇ) ಮತ್ತು ಫೇಸ್-2 ರಲ್ಲಿ ನೇಮಕಾತಿ ರ‌್ಯಾಲಿ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಆನ್‍ಲೈನ್ ನೋಂದಣಿ ಮತ್ತು ಪರೀಕ್ಷೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ www.joinindianarmy.nic.in ಗೆ ಭೇಟಿ ನೀಡಿ ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.

error: Content is protected !!