ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನೆಹರೂ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಮಾ.9 ರಂದು ಬೆಳಗ್ಗೆ 10.30ಕ್ಕೆ ಪೆಟ್ ಶಾಪ್ ನವರಿಗೆ ತರಬೇತಿಯನ್ನು ಆಯೋಜಿಸಲಾಗಿದೆ.
READ | ಶಿವಮೊಗ್ಗದಲ್ಲಿ ಮೂರು ದಿನ ಕರೆಂಟ್ ಇರಲ್ಲ, ಯಾವ್ಯಾವ ಪ್ರದೇಶಗಳಲ್ಲಿ ಕಟ್?
ಜಿಲ್ಲಾ ಪ್ರಾಣಿದಯಾ ಸಂಘದಿಂದ ಜಿಲ್ಲೆಯಲ್ಲಿನ ಪೆಟ್ಶಾಪ್ ಮಾಲೀಕರಿಗೆ ರೂಲ್ 2018ರ ಕುರಿತು ಅರಿವು ಮೂಡಿಸಲು ಹಾಗೂ ಪೆಟ್ಶಾಪ್ ನಡೆಸಲು ಪಾಲಿಸಬೇಕಾದ ಕ್ರಮಗಳು ಮತ್ತು ನಿಯಮಗಳ ಬಗ್ಗೆ ತಿಳಿಸಲು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸುವ ಕುರಿತಂತೆ ಮಾಸ್ಟರ್ ತರಬೇತಿದಾರರಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲ ಪೆಟ್ ಶಾಪ್ ಮಾಲೀಕರು ಈ ತರಬೇತಿಗೆ ಹಾಜರಾಗುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222969 ಅನ್ನು ಸಂಪರ್ಕಿಸುವುದು.