Shivamogga ZP | ರಾಜ್ಯದಲ್ಲಿ‌ 2ನೇ ಸ್ಥಾನ ಪಡೆದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಕಾರಣವೇನು?

Shivamogga zilla panchayat

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ(shivamogga zilla panchayat)ಯು ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದೆ.
2022-23ನೇ ಸಾಲಿನ ಮಹಾತ್ಮಗಾಂಧಿ ನರೇಗಾ (NAREGA) ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಜಿಲ್ಲಾ ಪಂಚಾಯಿತಿ ಪ್ರಶಸ್ತಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿಗೆ ದ್ವಿತೀಯ ಹಾಗೂ ಅತ್ಯುತ್ತಮ ತಾಲ್ಲೂಕು ಪಂಚಾಯತಿ ವಿಭಾಗದಲ್ಲಿ ಭದ್ರಾವತಿ ತಾಲ್ಲೂಕಿಗೆ ತೃತೀಯ ಬಹುಮಾನ ಲಭಿಸಿದೆ.

READ | ಮಲೆನಾಡಿಗರೇ ಎಚ್ಚರ! ಎಲ್ಲೆಡೆ ಶುರುವಾಗಿದೆ ಕಾಳಿಂಗ ಸರ್ಪಗಳ ಮಿಲನ, ಇಲ್ಲಿದೆ ಇಂಟರೆಸ್ಟಿಂಗ್ ಲೇಖನ

ಕೃಷಿ ಸ್ನೇಹಿ ಪಂಚಾಯಿತಿ ಪುರಸ್ಕಾರ ವಿಭಾಗದಲ್ಲಿ ಸೊರಬ (sorab) ತಾಲ್ಲೂಕಿನ ಕೃಷಿ ಇಲಾಖೆ (agriculture department)ಗೆ ಅತ್ಯುತ್ತಮ ತಾಲ್ಲೂಕು ಮಟ್ಟದ ಅರಣ್ಯ ಇಲಾಖೆ ಪ್ರಶಸ್ತಿ, ಜಲ ಸಂಜೀವಿನಿ ಪಂಚಾಯಿತಿ ಪುರಸ್ಕಾರ ವಿಭಾಗದಲ್ಲಿ ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದೆ.
24ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪುರಸ್ಕಾರ
ಪ್ರಶಸ್ತಿ ಪುರಸ್ಕೃತರಿಗೆ ಮಾ.24ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಗಾಂಧಿ ಗ್ರಾಮ ಪುರಸ್ಕಾರ’ ಮತ್ತು ‘ನರೇಗಾ ಹಬ್ಬ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಪಂ ಸಿಇಓ ಎನ್.ಡಿ.ಪ್ರಕಾಶ್ (ND Prakash) ತಿಳಿಸಿದ್ದಾರೆ.

Power cut | ಮಾ.18ರಂದು ಶಿವಮೊಗ್ಗದ ಕೆಲವೆಡೆ ಕರೆಂಟ್ ಇರಲ್ಲ

error: Content is protected !!