Boycott vote | ಜೋರಾಯ್ತು ಒಳ ಮೀಸಲಾತಿ ಕಿಚ್ಚು, ತಾಂಡಾಗಳಲ್ಲಿ ಮತದಾನ ಬಹಿಷ್ಕಾರ‌ ಎಚ್ಚರಿಕೆ, ಎಲ್ಲಿ ಏನಾಯ್ತು?

Banjara protest

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸದ್ಯಕ್ಕೆ ಒಳ‌ ಮೀಸಲಾತಿ ಕಿಚ್ಚು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಶಿಕಾರಿಪುರದಿಂದ ಆರಂಭಗೊಂಡ ಪ್ರತಿಭಟನೆಗಳ ಕಾವು ಈಗ ಜಿಲ್ಲೆಯ ಹಲವೆಡೆ ವಿಸ್ತರಣೆಗೊಂಡಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಂಚೇನಹಳ್ಳಿ ತಾಂಡಾದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬೆಂಕಿ‌ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯನ್ನು ತಡೆಯಲಾಗಿತ್ತು.
ಮತದಾನ ಬಹಿಷ್ಕಾರದ ಬಿಸಿ
ಕುಸ್ಕೂರು ತಾಂಡಾದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಧಾರವನ್ನು ವಿರೋಧಿಸಿ, ಇದು ರಾಜಕೀಯ ಗಿಮಿಕ್ ಆಗಿದೆ ಎಂದು ಬಂಜಾರ ಸಮುದಾಯದ ಪ್ರಮುಖರು ಆರೋಪಿಸಿದ್ದಾರೆ.

READ | ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮೇಲೆ‌ೆ ಕಲ್ಲು ತೂರಾಟ, ಇದುವರೆಗೆ ದಾಖಲಾದ ಪ್ರಕರಣಗಳೆಷ್ಟು?

“ನಮ್ಮ ತಾಂಡಕ್ಕೆ ಯಾವುದೇ ರಾಜಕೀಯ ಮುಖಂಡರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂಬ  ಫಲಕಗಳ ಅಳವಡಿಕೆಗೆ ’ಶಿಕಾರಿಪುರದ ಕುಸ್ಕೂರು ತಾಂಡಾದ ಗ್ರಾಮಸ್ಥರು ನಿರ್ಧರಿಸಿದ್ದಾರೆ.”
2023ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಒಳಮೀಸಲಾತಿ ಹಿಂಪಡೆಯಲು ಆಗ್ರಹಿಸಿಲಾಗಿದೆ. ಅಲ್ಲದೇ, ಫಲಕದಲ್ಲಿ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂದು ಕೂಡ ಬರೆಯಲಾಗಿದೆ.
ಕುಸ್ಕೂರು ತಾಂಡಾದಲ್ಲಿ ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಕಟ್ಟಿದ್ದ ಬಿಜೆಪಿ ಧ್ವಜಗಳನ್ನ ತೆರವು ಮಾಡಿರುವ ಸಮುದಾಯದ ಯುವಕರು ತಮ್ಮ ತಾಂಡದೊಳಗೆ ಬರಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

Deportation | ಭದ್ರಾವತಿಯ ಮೂವರು ರೌಡಿಶೀಟರ್’ಗಳ ಗಡಿಪಾರು ಆದೇಶ, ಕಾರಣವೇನು?

error: Content is protected !!