ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಶನಿವಾರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, 11 ಮರಳು ತುಂಬಿದ ಮತ್ತು 2 ಜಲ್ಲಿಕಲ್ಲು ತುಂಬಿದ್ದ ಒಟ್ಟು 13 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರ ಸೂಚನೆಯ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಅಧೀಕ್ಷಕ ಗಜಾನನ ವಾಮನ ಸುತರ, ತಹಶೀಲ್ದಾರ್ ಅಮೃತ್ ಅತ್ರೇಶ್ ಮಾರ್ಗದರ್ಶನದಲ್ಲಿ 3 ತಂಡಗಳು ಪ್ರತ್ಯೇಕ ದಾಳಿ ನಡೆಸಿ, ಒಟ್ಟು 11 ಮರಳು ತುಂಬಿದ ಮತ್ತು 2 ಜಲ್ಲಿಕಲ್ಲು ತುಂಬಿದ್ದ ಒಟ್ಟು 13 ವಾಹನಗಳನ್ನು ವಶ ಪಡೆಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
READ | ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ, ಶಿವಮೊಗ್ಗದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ
ಎಲ್ಲೆಲ್ಲಿ ಎನೇನು ಸೀಜ್?
- ತಂಡ-1 ಮಾಳೂರು ವೃತ್ತದ ಪಿಐ ಪ್ರವೀಣ್ ನೀಲಮ್ಮ ಮೇಲ್ವಿಚಾರಣೆಯಲ್ಲಿ ಆಗುಂಬೆ ಠಾಣೆ ಪೊಲೀಸ್ ಉಪ ನಿರೀಕ್ಷಕ ಶಿವಕುಮಾರ್, ಆರ್.ಐ ಮೇಘರವಳ್ಳಿ ಯಶವಂತ್, ಹೊನ್ನೆತಾಳು ಪಿಡಿಓ ಕುಮಾರ್ ನೇತೃತ್ವದ ತಂಡವು ಅರೇಹಳ್ಳಿ, ಮಳಲೂರು, ಬಗ್ಗೋಡಿಗೆ ಮತ್ತು ಆಗುಂಬೆಯಲ್ಲಿ ಜಂಟಿ ದಾಳಿ ನಡೆಸಿ 3 ಮರಳು ತುಂಬಿದ ಮತ್ತು 2 ಜಲ್ಲಿಕಲ್ಲು ತುಂಬಿದ್ದ ಒಟ್ಟು 5 ವಾಹನಗಳನ್ನು ವಶ ಪಡಿಸಿಕೊಂಡಿರುತ್ತಾರೆ.
- ತಂಡ-2 ಮಾಳೂರು ಪೊಲೀಸ್ ವೃತ್ತ ನಿರೀಕ್ಷಕ ಪ್ರವೀಣ್ ನೀಲಮ್ಮ ಮೇಲ್ವಿಚಾರಣೆಯಲ್ಲಿ ಮಾಳೂರು ಠಾಣೆಯ ಪೊಲೀಸ್ ಉಪ ನಿರೀಕ್ಷಕ ನವೀನ್ ಮಠಪತಿ, ಡಿ.ಶಿವಾನಂದ್, ಮತ್ತೂರು ಆರ್.ಐ ಸುಗುಣೇಶ್, ಕನ್ನಂಗಿ ಪೊಡಿಓ ಸುರೇಶ್ ನೇತೃತ್ವದ ತಂಡವು ಜಂಟಿ ದಾಳಿ ನಡೆಸಿ ಮುಡುಬಾ ಬಳಿ 7 ಮರಳು ತುಂಬಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
- ತಂಡ-3 ತೀರ್ಥಹಳ್ಳಿ ಠಾಣೆ ಪಿಐ ಅಶ್ವತ್ ಗೌಡ ಮೇಲ್ವಿಚಾರಣೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಉಪ ನಿರೀಕ್ಷಕ ಸಾಗರ್ ಅತರವಾಲ್, ಕುರುವಳ್ಳಿ ವಿ ಮೌನೀಶ್, ಆರಗ ವೃತ್ತದ ವಿಎ ಸಿದ್ಧಾರೂಡ, ದೇವಂಗಿ ಪಿಡಿಓ ರೇಣುಕಾರಾಧ್ಯ ನೇತೃತ್ವದ ತಂಡವು ಜಂಟಿ ದಾಳಿ ನಡೆಸಿ ಬಕ್ಲಾಪುರದ ಹತ್ತಿರ ಮರಳು ತುಂಬಿದ ವಾಹನವನ್ನು ವಶಕ್ಕೆ ಪಡೆದಿದೆ.
Nomination | ಶಿವಮೊಗ್ಗದಲ್ಲಿ ಇಂದು ಸಲ್ಲಿಕೆಯಾದ ನಾಮಪತ್ರಗಳೆಷ್ಟು? ಎಲ್ಲಿ ಎಷ್ಟು ಸಲ್ಲಿಕೆ?