Helicopter inspection | ಬಿ.ಎಸ್.ಯಡಿಯೂರಪ್ಪ ಹೆಲಿಕಾಪ್ಟರ್ ಪರಿಶೀಲನೆ, ಕಾರಣವೇನು?

BS Yediyurappa helipad

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಮಂಗಳವಾರ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದು, ಅವರ ಹೆಲಿಕಾಪ್ಟರ್ ಅನ್ನು ಚು‌ನಾವಣಾಧಿಕಾರಿ ಪರಿಶೀಲಿಸಿದರು.

READ | ಮುಂದುವರಿದ ಶಿವಮೊಗ್ಗ ಸಿಟಿ ಟಿಕೆಟ್ ಸಸ್ಪೆನ್ಸ್, ಮೂರನೇ ಲಿಸ್ಟ್’ನಲ್ಲೂ ಹೆಸರಿಲ್ಲ!

ಹೆಲಿಕಾಪ್ಟರ್ ನಿಂದ ಯಡಿಯೂರಪ್ಪ ಕೆಳಗಿಳಿದಿದ್ದೇ ಅಧಿಕಾರಿಗಳು ಹೆಲಿಪ್ಯಾಡ್ ಗೆ ಆಗಮಿಸಿ ಹೆಲಿಕಾಪ್ಟರ್ ನ ಒಳಗಡೆ ತಪಾಸಣೆ ನಡೆಸಿದರು. ಲಗೇಜ್ ಕ್ಯಾಬಿನ್ ಪರಿಶೀಲಿಸಲಾಯಿತು. ಯಡಿಯೂರಪ್ಪ ಅವರನ್ನು ಕರೆಯಲು ಬಂದಿದ್ದ ಕಾರಿನ ಪರಿಶೀಲ‌ನೆ ಮಾಡಲಾಯಿತು. ಈ ಎಲ್ಲ ಪ್ರಕ್ರಿಯೆ ಚಿತ್ರೀಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮಂಗಳವಾರ ರಾತ್ರಿಯೇ ಶಿವಮೊಗ್ಗ ನಗರ ಮತ್ತು ಮಾನ್ವಿ‌ ಟಿಕೆಟ್ ಘೋಷಣೆ ಆಗಲಿದೆ. ವಿಳಂಬಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ ಎಂದರು.

Property details | ವಿಜಯೇಂದ್ರ, ಮಧು, ಕುಮಾರ, ಬೇಳೂರು ಆಸ್ತಿ ಎಷ್ಟು? ಬಹುಕೋಟಿ ಒಡೆಯರಿವರು

error: Content is protected !!