Assembly election | ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯಿಂದ ನಾಳೆ ನಾಮಪತ್ರ ಸಲ್ಲಿಕೆ, ಎಲ್ಲಿಂದ ಹೊರಡಲಿದೆ ಮೆರವಣಿಗೆ

Assembly election 23

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರೀ‌ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಅನ್ನು ಘೋಷಿಸಲಾಗಿದೆ.
ಏ.20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇನ್ನೇನು ನಾಳೆಯೇ ಟಿಕೆಟ್ ಘೋಷಿಸಬಹುದು ಎನ್ನಲಾಗುತ್ತಿತ್ತು. ಆದರೆ, ಯಾರಿಗೆ ಟಿಕೆಟ್ ನೀಡುತ್ತಾರೆಂಬ ಕುತೂಹಲ ಮುಂದುವರಿದಿತ್ತು. ಕೊನೆಗೂ ಟಿಕೆಟ್ ಘೋಷಣೆಯಾಗಿದ್ದು, ಮಹಾನಗರ ಪಾಲಿಕೆ ಆಡಳಿತ ಪಕ್ಷದ ಮುಖಂಡರಾಗಿರುವ ಎಸ್.ಎನ್. ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ಘೋಷಿಸದೇ ತಯಾರಿಗೆ ನೀಡಲಾಗಿತ್ತು ಸೂಚನೆ
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತಮ್ಮನ್ನೇ ಆಯ್ಕೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಹೆಸರು ಘೋಷಿಸದೇ ನಾಮಪತ್ರ ಸಲ್ಲಿಸುವುದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಪಕ್ಷ ತಿಳಿಸಿತ್ತು.

READ | ಆರಗ ಜ್ಞಾನೇಂದ್ರ ಆಸ್ತಿ ಮೂರು ಪಟ್ಟು ಹೆಚ್ಚಳ, ಕಿಮ್ಮನೆ ಆಸ್ತಿಯಷ್ಟೇ ಸಾಲ

ನಾಮಪತ್ರ ಸಲ್ಲಿಕೆಗೆ ಮುಹೂರ್ತ
ನಾಮಪತ್ರ ಸಲ್ಲಿಕೆಗೆ ಬೃಹತ್ ಮೆರವಣಿಗೆ ಹೊರಡಲಿದೆ. ಗುರುವಾರ ಬೆಳಗ್ಗೆ 10.30 ಗಂಟೆಗೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಪೂಜೆಯ ಬಳಿಕ ಕೋಟೆ ರಸ್ತೆ, ಗಾಂಧಿ ಬಜಾರ್ ಮಾರ್ಗವಾಗಿ ಎನ್‍.ಡಿ.ವಿ ವಸತಿ ಗೃಹಕ್ಕೆ ತಲುಪಿ, ಪಾಲಿಕೆಯ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಾಗುವುದು.
ಟಿಕೆಟ್ ವಿಚಾರವಾಗಿ ಟ್ರೋಲ್
ಇಂದು, ನಾಳೆ, ನಾಡಿದ್ದು… ಹೀಗೆ ಟಿಕೆಟ್ ವಿಚಾರ ನಿರಂತರವಾಗಿ ಚರ್ಚೆ ನಡೆಯುತ್ತಲೇ ಇದೆ. ಪಕ್ಷದ ಮುಖಂಡರು ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಿಸುವ ಬಗ್ಗೆ ಹೇಳಿದ್ದರು. ಆದರೆ, ಈ ಕುತೂಹಲ ಕೊನೆಯ ಗಳಿಗೆಯವರೆಗೆ ಮುಂದುವರಿದಿತ್ತು. ಅದಕ್ಕೆ ಬ್ರೇಕ್ ಬಿದ್ದಿದೆ.

Cricket betting | ಶಿವಮೊಗ್ಗ, ಭದ್ರಾವತಿಯ ಬೆಟ್ಟಿಂಗ್ ಕಿಂಗ್’ಪಿನ್ ಅರೆಸ್ಟ್, ಖಾತೆಯಲ್ಲಿತ್ತು ಲಕ್ಷ ಲಕ್ಷ ರೂಪಾಯಿ

error: Content is protected !!