Narendra modi | ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ, ಈ ರಸ್ತೆಗಳಲ್ಲಿ ಸಂಚಾರ ಬಂದ್, ಪರ್ಯಾಯ ಮಾರ್ಗ ವ್ಯವಸ್ಥೆ

Shivamogga airport Modi

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 7ರಂದು ಆಯನೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ಹಿತ ದೃಷ್ಟಿಯಿಂದ ಅಂದು ಈ ಕೆಳಕಂಡಂತೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಿದೆ.

READ | ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ದಿನಾಂಕ ವಿಸ್ತರಣೆ, ಎಲ್ಲಿಯವರೆಗೆ ನೀರು ಹರಿವು

1) ಸಾಗರದಿಂದ ಶಿವಮೊಗ್ಗ ಕಡೆಗೆ ಬರುವ ಲಘು ವಾಹನಗಳು: ಆನಂದಪುರ ಎಡೆಹಳ್ಳಿ ಸರ್ಕಲ್ – ಚೊರಡಿ – ಕುಂಸಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಎಡಕ್ಕೆ ತಿರುಗಿ ಹಾರ್ನಳ್ಳಿ – ಬೈರನಕೊಪ್ಪ -ಹಿಟ್ಟೂರು ಕ್ರಾಸ್ ಬಲಕ್ಕೆ ತಿರುಗಿ ಶಿವಮೊಗ್ಗಕ್ಕೆ ಬಂದು ಸೇರುವುದು.
2) ಸಾಗರದಿಂದ ಶಿವಮೊಗ್ಗದ ಕಡೆಗೆ ಬರುವ ಭಾರಿ ಮತ್ತು ಸರಕು ವಾಹನಗಳು: ಆನಂಪುರ – ಶಿಕಾರಿಪುರ – ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
3) ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಲಘು ವಾಹನಗಳು: ಶಿವಮೊಗ್ಗದಿಂದ ಸೋಮಿನಕೊಪ್ಪ – ಗೆಜ್ಜೇನಹಳ್ಳಿ – ಮುದುವಾಲ – ಹಾರ್ನಳ್ಳಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಬಲಕ್ಕೆ ತಿರುಗಿ ಸಾಗರಕ್ಕೆ ಹೋಗುವುದು.
4) ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಭಾರಿ ಮತ್ತು ಸರಕು ವಾಹನಗಳು: ಶಿವಮೊಗ್ಗದಿಂದ ಹೊನ್ನಾಳಿ – ಶಿಕಾರಿಪುರ – ಆನಂದಪುರ ಮೂಲಕ ಸಾಗರಕ್ಕೆ ಹೋಗುವುದು.
5) ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಭಾರಿ ಮತ್ತು ಲಘು ವಾಹನಗಳು: ಶಿವಮೊಗ್ಗದಿಂದ ಹೊನ್ನಾಳಿ ಮೂಲಕ ಶಿಕಾರಿಪುರಕ್ಕೆ ಹೋಗುವುದು.
6) ಶಿಕಾರಿಪುರ ದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು; ಶಿಕಾರಿಪುರ ದಿಂದ ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.
7) ಶಿವಮೊಗ್ಗದಿಂದ ರಿಪ್ಪನ್ ಪೇಟೆ ಹಾಗೂ ಹೊಸನಗರ ಕಡೆಗೆ ಹೋಗುವ ಭಾರಿ ಮತ್ತು ಲಘು ವಾಹನಗಳು:
ಶಿವಮೊಗ್ಗದಿಂದ ಮಂಡಗದ್ದೆ – ಕೋಣಂದೂರು – ರಿಪ್ಪನಪೇಟೆ ಮೂಲಕ ಹೊಸನಗರಕ್ಕೆ ಹೋಗುವುದು.
8) ರಿಪ್ಪನಪೇಟೆ ಹೊಸನಗರದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು: ಕೋಣಂದೂರು – ಸಿ. ಕೆ. ರಸ್ತೆ – ಮಂಡಗದ್ದೆ – ಮಾಳೂರು ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.

Assembly election | ಚುನಾವಣೆ ಪ್ರಚಾರದಲ್ಲಿ ಮಕ್ಕಳ ಬಳಕೆ, ಇಬ್ಬರು ಅಭ್ಯರ್ಥಿಗಳ ವಿರಿದ್ಧ ಎಫ್.ಐ.ಆರ್, ಯಾರ‌ ಮೇಲೆ ಕೇಸ್?

error: Content is protected !!