Karnataka cabinet | ಕರ್ನಾಟಕ ಕ್ಯಾಬಿನೆಟ್ ರಚನೆ, ಯಾರಿಗೆ ಯಾವ ಖಾತೆ ಹಂಚಿಕೆ, ಮಧುಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Vidhan saudha

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರಿ ಕುತೂಹಲ ಸೃಷ್ಟಿಸಿದ್ದ ಖಾತೆ ಹಂಚಿಕೆ ವಿಚಾರಕ್ಕೆ ತೆರೆಬಿದ್ದಿದೆ. ಮೇ 20ರಂದು ಎಂಟು ಜನರು ಪ್ರಮಾಣ ವಚನ ಸ್ವೀಕರಿಸಿದ್ದರು. 27ರಂದು 24 ಜನ ಪದಗ್ರಹಣ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸೇರಿ ಒಟ್ಟು 34 ಸದಸ್ಯ ಬಲದ ಕ್ಯಾಬಿನೆಟ್ (karnataka state cabinet ministers portfolios) ರಚನೆಯಾಗಿದೆ.  ಅಧಿಕೃತ ಘೋಷಣೆ (official announcement) ಯೊಂದೇ ಬಾಕಿ ಇದೆ.

Madhu Bangarappa
ಮಧು ಬಂಗಾರಪ್ಪ

READ | ಶಿವಮೊಗ್ಗ ಜಿಲ್ಲೆಗೆ ಒಲಿದ ಸಚಿವ ಸ್ಥಾನ. ಮಧು ಬಂಗಾರಪ್ಪಗೆ ಮಂತ್ರಿ ಸ್ಥಾನ ಸಿಗಲು ಕಾರಣಗಳೇನು?

ಯಾರಿಗೆ ಯಾವ ಖಾತೆ ಹಂಚಿಕೆ?

  1. ಸಿದ್ದರಾಮಯ್ಯ- (ಮುಖ್ಯಮಂತ್ರಿ) ಹಣಕಾಸು, ಆಡಳಿತ ಸುಧಾರಣೆ, ಗುಪ್ತಚರ, ವಾರ್ತಾ ಇಲಾಖೆ ಮತ್ತು ಹಂಚಿಕೆಯಾಗದೇ ಉಳಿದ ಖಾತೆಗಳು
  2. ಡಿಕೆ ಶಿವಕುಮಾರ್- (ಉಪ ಮುಖ್ಯಮಂತ್ರಿ) ಜಲಸಂಪನ್ಮೂಲ, ಬೆಂಗಳೂರು ನಿಗಮ ಅಭಿವೃದ್ಧಿ
  3. ಡಾ.ಜಿ.ಪರಮೇಶ್ವ -ಗೃಹ (ಗುಪ್ತಚರ ಹೊರತುಪಡಿಸಿ)
  4. ಎಚ್‌.ಕೆ.ಪಾಟೀಲ್‌- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
  5. ಕೆ.ಎಚ್‌.ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ
  6. ಕೆ.ಜೆ.ಜಾರ್ಜ್‌- ಇಂಧನ
  7. ಎಂ.ಬಿಪಾಟೀಲ್‌- ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಐಟಿ & ಬಿಟಿ
  8. ರಾಮಲಿಂಗಾರೆಡ್ಡಿ- ಸಾರಿಗೆ
  9. ಸತೀಶ್‌ ಜಾರಕಿಹೊಳಿ- ಲೋಕೋಪಯೋಗಿ
  10. ಪ್ರಿಯಾಂಕ್‌ ಖರ್ಗೆ- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
  11. ಜಮೀರ್‌ ಅಹ್ಮದ್‌ ಖಾನ್‌- ವಸತಿ, ವಕ್ಫ್‌ ಮತ್ತು ಅಲ್ಪಸಂಖ್ಯಾತ
  12. ಕೃಷ್ಣ ಬೈರೇಗೌಡ- ಕಂದಾಯ (ಮುಜರಾಯಿ ಹೊರತುಪಡಿಸಿ)
  13. ದಿನೇಶ್‌ ಗುಂಡೂರಾವ್‌- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  14. ಎನ್‌.ಚಲುವರಾಯಸ್ವಾಮಿ- ಕೃಷಿ
  15. ಕೆ.ವೆಂಕಟೇಶ್‌- ಪಶು ಸಂಗೋಪನೆ ಮತ್ತು ರೇಷ್ಮೆ
  16. ಎಚ್‌.ಸಿ.ಮಹದೇವಪ್ಪ- ಸಮಾಜ ಕಲ್ಯಾಣ
  17. ಈಶ್ವರ್‌ ಖಂಡ್ರೆ- ಅರಣ್ಯ, ಜೈವಿಕ ಮತ್ತು ಪರಿಸರ
  18. ಕೆ.ಎನ್‌.ರಾಜಣ್ಣ- ಸಹಕಾರ
  19. ಶರಣಬಸಪ್ಪ ದರ್ಶನಾಪುರ್‌- ಸಣ್ಣ ಕೈಗಾರಿಕೆ, ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆ
  20. ಶಿವಾನಂದ ಪಾಟೀಲ್‌- ಟೆಕ್ಸ್‌ಟೈಲ್‌, ಸಕ್ಕರೆ, ಕೃಷಿ ಮಾರುಕಟ್ಟೆ
  21. ಆರ್‌.ಬಿ. ತಿಮ್ಮಾಪುರ- ಅಬಕಾರಿ, ಮುಜರಾಯಿ
  22. ಎಸ್‌.ಎಸ್‌.ಮಲ್ಲಿಕಾರ್ಜುನ್‌- ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ
  23. ಶಿವರಾಜ ಎಸ್‌.ತಂಗಡಗಿ- ಹಿಂದುಳಿದ ವರ್ಗ ಮತ್ತು ಎಸ್‌ಸಿ, ಎಸ್‌ಟಿ ಕಲ್ಯಾಣ
  24. ಶರಣ್‌ ಪ್ರಕಾಶ್‌ ಪಾಟೀಲ್‌- ಉನ್ನತ ಶಿಕ್ಷಣ
  25. ಮಂಕಾಳ್‌ ವೈದ್ಯಮೀನುಗಾರಿಕೆ, ಬಂದರು ಮತ್ತು ಒಳ ಸಾರಿಗೆ
  26. ಲಕ್ಷ್ಮೀ ಹೆಬ್ಬಾಳ್ಕರ್‌- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ, ಹಿರಿಯರ ಕಲ್ಯಾಣ
  27. ರಹೀಂ ಖಾನ್‌- ಹಜ್‌, ಪೌರಾಡಳಿತ
  28. ಡಿ.ಸುಧಾಕರ್‌- ಮೂಲಸೌಕರ್ಯ ಅಭಿವೃದ್ಧಿ, ಸಾಂಖ್ಯಿಕ ಮತ್ತು ಯೋಜನೆ
  29. ಸಂತೋಷ್‌ ಲಾಡ್‌- ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ
  30. ಎನ್‌.ಎಸ್‌.ಬೋಸರಾಜು- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
  31. ಬೈರತಿ ಸುರೇಶ್‌- ನಗರಾಭಿವೃದ್ಧಿ ಮತ್ತು ನಗರ ಯೋಜನೆ (ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ, ಬಿಎಂಆರ್‌ಸಿಎಲ್‌ ಹೊರತುಪಡಿಸಿ)
  32. ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  33. ಡಾ.ಎಂ.ಸಿ.ಸುಧಾಕರ್‌- ವೈದ್ಯಕೀಯ ಶಿಕ್ಷಣ
  34. ಬಿ.ನಾಗೇಂದ್ರ- ಯುವಜನ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ

UPSC Result | ಎರಡನೇ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಶಿವಮೊಗ್ಗದ ಮೇಘನಾ ಪಾಸ್, ಸಾಧನೆಯ ಗುಟ್ಟೇನು?

error: Content is protected !!