Hanagerekatte, sigandur | ಹಣಗೆರೆಕಟ್ಟೆ, ಸಿಗಂದೂರು ಚೌಡೇಶ್ವರಿ ದೇವಸ್ಥಾನ ಫುಲ್ ರಶ್, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು, ಪೂಜೆ ಸಲ್ಲಿಸಲು ನೂಕುನುಗ್ಗಲು

sharavathi launch

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ/ ಸಾಗರ
THIRTHAHALLI/ SAGAR: ಮಣ್ಣೆತ್ತಿನ ಅಮಾವಾಸ್ಯೆಯಿಂದಾಗಿ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ಸ್ಥಳಗಳಿಗೆ ಆಗಮಿಸಿದ್ದರು. ಶ್ರೀಕ್ಷೇತ್ರ ಸಿಗಂದೂರು ದೇವಸ್ಥಾನ (sigandur temple) ಮತ್ತು ರಾಜ್ಯದ ಪ್ರಸಿದ್ಧ ಸೌಹಾರ್ದ ಧಾರ್ಮಿಕ ಕೇಂದ್ರವಾದ ಹಣಗೆರೆಕಟ್ಟೆಗೆ (hanagere katte temple) ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.

READ | ನೀರಾವರಿ ಇಲಾಖೆ ಇಇ ಪತ್ನಿ ಅನುಮಾನಾಸ್ಪದ ಸಾವು

ಹಣಗೆರೆಕಟ್ಟೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದು ವಿಶೇಷವಾಗಿತ್ತು. ಶನಿವಾರ ರಾತ್ರಿಯಿಂದಲೇ ಭಕ್ತರು ಹಣಗೆರೆಕಟ್ಟೆಯ ಹಜರತ್ ಸೈಯದ್ ಸಾದತ್ ದರ್ಗಾ, ಭೂತರಾಯ, ಚೌಡೇಶ್ವರಿ ದೇವಸ್ಥಾನ ಬಳಿ ನೆರೆದಿದ್ದರು. ಹರಕೆಯನ್ನು ಈಡೇರಿಸಲು ಜನರು ಭಾರಿ ಸಂಖ್ಯೆಯಲ್ಲಿ ಬಂದಿದ್ದರು. ಪರಿಣಾಮ, ಧಾರ್ಮಿಕ ಕೇಂದ್ರದ ಬಳಿ ನೂಕುನುಗ್ಗಲಾಯಿತು.

Hanagerekatte Temple 1
ಲಾಂಚ್ ನಲ್ಲಿ ಸೀಮಿತ ಜನರ ಪ್ರಯಾಣ
ಶರಾವತಿ ಹಿನ್ನೀರು ಇಳಿಕೆಯಾಗಿದ್ದರಿಂದ ಲಾಂಚ್ ನಲ್ಲಿ ಸೀಮಿತ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯಲಾಯಿತು. ಪ್ರವಾಸಿಗರು ತಮ್ಮ ವಾಹನಗಳನ್ನು ಅಂಬಾರಗೋಡ್ಲುವಿನ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಲಾಂಚ್ ನಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು.
ವಾಹನ ಸೌಲಭ್ಯವಿಲ್ಲದೇ ಪರದಾಟ
ಹೊಳೆಬಾಗಿಲು ದಡಕ್ಕೆ ತಲುಪಿದ ಭಕ್ತರು ದೇವಸ್ಥಾನಕ್ಕೆ ಬರಲು ಸೂಕ್ತ ವಾಹನ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಪರದಾಡಿದರು. ಸೂಕ್ತ ಶೌಚಾಲಯವಿಲ್ಲದೇ ಅಂಬಾರುಗೋಡ್ಲು ಮತ್ತು ಹೊಳೆಬಾಗಿಲು ನಿಲ್ದಾಣದಲ್ಲಿ ಜನರು ಪರದಾಡಿದರು.

NES | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ವಸಿಷ್ಠ ಸಿಂಹ, ಗಂಗಾವತಿ ಪ್ರಾಣೇಶ್, ಡಾ.ವೀರೇಂದ್ರ ಹೆಗ್ಗಡೆ, ವಿಶೇಷ ಕಾರ್ಯಕ್ರಮಗಳೇನು?

error: Content is protected !!