Anna bhagya | ಅನ್ನ ಭಾಗ್ಯ ಯೋಜನೆ ಅಡಿ ಅಕ್ಕಿ ಅಲ್ಲ ಹಣ ಸಿಗಲಿದೆ, ಸಂಪುಟದಲ್ಲಿ‌ ಮಹತ್ವದ ನಿರ್ಧಾರ, ಯಾರಿಗೆಷ್ಟು ಹಣ?

Fortified rice

 

 

ಸುದ್ದಿ‌ ಕಣಜ.ಕಾಂ ಬೆಂಗಳೂರು
BENGALURU: ವಿಧಾನಸೌಧದಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ‌ನೀಡಲು ನಿರ್ಧರಿಸಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ ಅಕ್ಕಿಯ ಬದಲಿಗೆ ಹಣ ಜಮಾ ಮಾಡಲಾಗುವುದು. ಇದು ಜುಲೈ 1ರಿಂದಲೇ ಅನ್ವಯವಾಗಲಿದೆ.

READ | ಯುವತಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್, ಮೂವರ ಬಂಧನ

ಆಹಾರ ಸಚಿವ ‌ಕೆ.ಎಚ್.ಮುನಿಯಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಒಂದು ಕೆಜಿ ಅಕ್ಕಿಗೆ ₹34 ಬೆಲೆ ನಿಗದಿಪಡಿಸಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಅಕ್ಕಿ ಬದಲು ಹಣವನ್ನು ನೇರವಾಗಿ ಕುಟುಂಬದ ಯಜಮಾನಿಯ ಖಾತೆಗೆ ವರ್ಗಾಯಿಸಲಾಗುವುದು.‌ ಅಕ್ಕಿ ಕೊರತೆಯಿಂದಾಗಿ‌ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಯಾರಿಗೆಷ್ಟು ಹಣ ಸಿಗಲಿದೆ?
ಈ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ ನೀಡಲು ನಿರ್ಧರಿಸಿದ್ದು, ಕೆಜಿಗೆ ₹34ರಂತೆ ಒಟ್ಟು ₹170 ಕೊಡಲಾಗುವುದು.
ಕುಟುಂಬದಲ್ಲಿ ಒಬ್ಬರಿದ್ದರೆ ಅವರಿಗೆ ಐದು ಕೆಜಿ(₹170), ಇಬ್ಬರಿದ್ದರೆ ಹತ್ತು ಕೆಜಿ(₹340), ಐದು ಜ‌ನರಿದ್ದರೆ 25 ಕೆಜಿ (850) ಅಕ್ಕಿಯನ್ನು ನಿಗದಿಪಡಿಸಲಾಗಿದೆ.

Teachers Transfer | ರಾಜ್ಯದಲ್ಲಿ ಶೀಘ್ರ 25 ಸಾವಿರ ಶಿಕ್ಷಕರ ವರ್ಗಾವಣೆ, ಖಾಲಿ ಹುದ್ದೆಗಳ ನೇಮಕಾತಿ ಬಗ್ಗೆ ಮಧು ಬಂಗಾರಪ್ಪ ಹೇಳಿದ್ದೇನು?

error: Content is protected !!