ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಬುಧವಾರ ಮತ್ತೆ ಅಲ್ಪ ಪ್ರಮಾಣದ ಏರಿಕೆಯಾಗಿದೆ. ಮಂಗಳವಾರ 872ಕ್ಕೆ ಇಳಿಕೆಯಾಗಿದ್ದ ಪ್ರಕರಣಗಳು 901ಕ್ಕೆ ಹೆಚ್ಚಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಿಲ್ಲೆಯಲ್ಲಿ ಕೇವಲ 185 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 140 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮೂರು ಜನ ಮೃತಪಟ್ಟಿದ್ದಾರೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 133 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್ಸಿ 86, ಕೋವಿಡ್ ಕೇರ್ ಸೆಂಟರ್ ನಲ್ಲಿ 171, ಖಾಸಗಿ ಆಸ್ಪತ್ರೆಯಲ್ಲಿ 113, ಹೋಮ್ ಐಸೋಲೇಷನ್ ನಲ್ಲಿ 349 ಹಾಗೂ ಟ್ರಿಯೇಜ್ ಕೇಂದ್ರದಲ್ಲಿ 49 ಸೋಂಕಿತರಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 3,226 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 4,048 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ತಾಲೂಕುವಾರು ವರದಿ | ಶಿವಮೊಗ್ಗ 92, ಭದ್ರಾವತಿ 33, ಶಿಕಾರಿಪುರ 6, ತೀರ್ಥಹಳ್ಳಿ 16, ಸೊರಬ 10, ಹೊಸನಗರ 3, ಸಾಗರ 10, ಬಾಹ್ಯ ಜಿಲ್ಲೆಯ 9 ಸೋಂಕಿತರಿದ್ದಾರೆ.