ಹಳಿತಪ್ಪಿದ ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ರೈಲು, ತಪ್ಪಿದ ಭಾರಿ ಅನಾಹುತ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹೊಸ ವರ್ಷದ ಹೊಸ್ತಿಲಿನಲ್ಲಿ ಆಗಬಬಹುದಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿಯೇ ತಪ್ಪಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಮತ್ತು ಆನಂದಪುರ ನಡುವಿನ ಸೂಡೂರು ಬಳಿ ಬೆಂಗಳೂರು- ತಾಳಗುಪ್ಪ ರೈಲು ಗುರುವಾರ ರಾತ್ರಿ ಹಳಿ ತಪ್ಪಿದೆ.

Talaguppa intercity trainಶಿವಮೊಗ್ಗ, ಭದ್ರಾವತಿಯಲ್ಲಿ ಎಸಿಬಿ ದಾಳಿ

ಬೆಂಗಳೂರಿನಿಂದ ಹೊರಟು ಶಿವಮೊಗ್ಗ ಮೂಲಕ ತಾಳಗುಪ್ಪಕ್ಕೆ ಹೊರಟಿದ್ದ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲು ಹಳಿ ತಪ್ಪಿದೆ. ಇದರಿಂದಾಗಿ, ಕೆಲಹೊತ್ತು ಪ್ರಯಾಣಿಕರು ಗಾಬರಿಗೆ ಒಳಗಾಗಿದ್ದಾರೆ. ಏನಾಯಿತೆಂಬುವುದೇ ಅರ್ಥವಾಗಿಲ್ಲ. ತಕ್ಷಣ ನೋಡಿದಾಗ ರೈಲ್ವೆ ಎಂಜಿನ್ ಹಳಿಯಿಂದ ಕೆಳಗೆ ಇಳಿದಿರುವುದು ಗೊತ್ತಾಗಿದೆ. ಇಲಾಖೆಗೆ ಮಾಹಿತಿ ನೀಡಿದ್ದೇ ಶಿವಮೊಗ್ಗದಿಂದ ಅಧಿಕಾರಿಗಳು ಮತ್ತು ಎಂಜಿನಿಯರ್‍ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೂ ಸಾರ್ವಜನಿಕರನ್ನು ವಿಚಾರಿಸಲಾಗುತ್ತಿದೆ. ಅಧಿಕಾರಿಗಳು ಈಗಲೂ ಸ್ಥಳದಲ್ಲೇ ಇದ್ದಾರೆ.

ರಿಪೇರಿಗೆಂದು ಹೋದ ಕಾರು 10 ತಿಂಗಳಾದರೂ ಮನೆಗೆ ಬರಲಿಲ್ಲ! ಕೊನೆಗೆ ಸಿಕ್ಕಿದ್ದೆಲ್ಲಿ ಗೊತ್ತಾ?

ಬೆಂಗಳೂರು ತಲುಪುವುದು ವಿಳಂಬ: ಬೆಂಗಳೂರಿನಿಂದ ತಾಳಗುಪ್ಪಕ್ಕೆ ಬಂದು ಇಲ್ಲಿಂದ ರಾತ್ರಿ 10.30ಕ್ಕೆ ಮತ್ತೆ ಈ ರೈಲು ವಾಪಸ್ ತೆರಳಬೇಕಿತ್ತು. ಆದರೆ, ರೈಲು ಹಳಿ ತಪ್ಪಿದ್ದ ಅದನ್ನು ಸರಿಪಡಿಸುವುದು ವಿಳಂಬ ಆಗುವುದರಿಂದ ರೈಲು ಬೆಂಗಳೂರಿಗೆ ಹೋಗುವುದೂ ತಡವಾಗಲಿದೆ. ಆದರೆ, ಅದೆಷ್ಟು ವಿಳಂಬವಾಗುತ್ತದೆಂಬುವುದು ಸದ್ಯಕ್ಕೆ ಹೇಳಲಾಗದು.

error: Content is protected !!