ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಂತೂ ಬಹು ದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಕೋವಿಡ್ ಕಾಯಿಲೆಗೆ ವಿರುದ್ಧ ಹೋರಾಡಬಲ್ಲ ಲಸಿಕೆ ಕೈಸೇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಹೊಸ ವರ್ಷಕ್ಕೆ ಈ ಮುಹೂರ್ತ ಒದಗಿಬಂದಿದೆ.
ಈಗಾಗಲೇ ಚಿತ್ರದುರ್ಗದ ಪ್ರಾದೇಶಿಕ ಲಸಿಕೆ ಉಗ್ರಾಣಕ್ಕೆ ಬಂದು ತಲುಪಿರುವ ವ್ಯಾಕ್ಸಿನ್ ತಲುಪಿದ್ದು, ಜನವರಿ 15ರ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಶಿವಮೊಗ್ಗಕ್ಕೆ ಬರಲಿದೆ.
ಇದನ್ನೂ ಓದಿ । ಲಕ್ಷಾಂತರ ಜನರಿಗೆ ಪಿಡುಗಾಗಿ ಕಾಡುತ್ತಿರುವ ಹಕ್ಕಿ ಜ್ವರ ಕಂಪ್ಲೀಟ್ ರಿಪೋರ್ಟ್
ಇಲ್ಲಿಗೆ ತರಲಾದ ಲಸಿಕೆಯನ್ನು ಸಂಗ್ರಹಿಸುವುದಕ್ಕಾಗಿ ನಾಲ್ಕು ಸ್ಟೋರೇಜ್ ಗಳನ್ನು ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ ಮೂರು ಕಡೆ ಕಡೆ ಹಾಗೂ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿಕಾರಿಪುರದಲ್ಲಿ ಒಂದು ಸೇರಿ ಒಟ್ಟು ನಾಲ್ಕನ್ನು ಗುರುತಿಸಲಾಗಿದೆ.
91 ಬೂತ್ ಸಿದ್ಧ: ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 91 ಬೂತ್ ಗಳನ್ನು ಲಸಿಕೆ ನೀಡುವುದಕ್ಕೆ ಈಗಾಗಲೇ ಗುರುತಿಸಲಾಗಿದೆ. ಅದರಲ್ಲಿ ಶಿವಮೊಗ್ಗ ನಗರದಲ್ಲಿ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ತುಂಗಾ ನಗರದ ನಗರ ಆರೋಗ್ಯ ಕೇಂದ್ರ, ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು.
ಇದನ್ನೂ ಓದಿ । ರಾಕಿ ಭಾಯ್ಗೆ ಆರೋಗ್ಯ ಇಲಾಖೆ ನೋಟಿಸ್, ಸೋಶಿಯಲ್ ಮೀಡಿಯಾದಲ್ಲಿ ಜನ ಏನಂತಾರೆ?
ಮೊದಲ ಹಂತದಲ್ಲಿ 900 ಜನರಿಗೆ ವ್ಯಾಕ್ಸಿನ್: ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆಗೆ ಚಾಲನೆ ನೀಡುತ್ತಿದ್ದಂತೆಯೇ ಎಲ್ಲ ಕಡೆಗಳಲ್ಲಿ ಲಸಿಕೆ ನೀಡುವ ಕಾರ್ಯಾರಂಭವಾಗಲಿದೆ. 16ರಂದು ಮೊದಲ ಹಂತದಲ್ಲಿ 9 ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುವುದು. ಪ್ರತಿ ಕೇಂದ್ರದಲ್ಲಿ ನೂರರಂತೆ ಒಟ್ಟು 900 ಜನರು ಇದರ ಲಾಭ ಪಡೆಯಲಿದ್ದಾರೆ.
ಶಿವಮೊಗ್ಗಕ್ಕೆ 45 ಸಾವಿರ ಡೋಸ್: ಶಿವಮೊಗ್ಗದಲ್ಲಿ ಪ್ರಸ್ತುತ 23,232 ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಸಿದ್ದಾರೆ. ಅವರೆಲ್ಲರ ಮೊಬೈಲ್ ಸಂಖ್ಯೆಗೆ ಯಾವ ಜಾಗದಲ್ಲಿ ಲಸಿಕೆ ಪಡೆಯಬೇಕು ಎಂಬ ಮಾಹಿತಿ ಕಳುಹಿಸಲಾಗುವುದು. ಫ್ರಂಟ್ ಲೈನ್ ನಲ್ಲಿದ್ದು ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗುವುದು.