Clash | ಶಿಕಾರಿಪುರದಲ್ಲಿ ಗೋಮಾಂಸ ಸಾಗಣೆ ತಡೆದಿದ್ದಕ್ಕೆ ಕೋಮುಗಳ‌ ನಡುವೆ ಮಾತಿನ ಚಕಮಕಿ, ಈಗ ಹೇಗಿದೆ ಸ್ಥಿತಿ?

cattle

 

 

ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ತಾಲೂಕಿನ ಮಳಲಿಕೊಪ್ಪ‌ ಕ್ರಾಸ್ ಬಳಿ ಗೋಮಾಂಸ ಸಾಗಣೆ ಮಾಡುತ್ತಿದ್ದಾಗ ವಾಹನವನ್ನು ತಡೆದು ಗ್ರಾಮಾಐ ಠಾಣೆಗೆ ಒಪ್ಪಿಸಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಎರಡು ಕೋಮುಗಳ‌ ನಡುವೆ ಮಾತಿನ ಚಕಮಕಿ ನಡೆದು ಶುಕ್ರವಾರ ರಾತ್ರಿ‌ ಪೊಲೀಸ್ ಠಾಣೆ ಎದುರುಗಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

READ | ಶಿವಮೊಗ್ಗದಿಂದ ನಾಲ್ಕು ಹೊಸ‌‌ ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅನುಮತಿ, ಯಾವ ಮಾರ್ಗಗಳಲ್ಲಿ ಸಂಚಾರ?

ಗೋಮಾಂಸ ಸಾಗಣೆಯನ್ನು ತಡೆದಿದ್ದಕ್ಕೆ ಒಂದು ಗುಂಪು ವಿರೋಧಿಸಿತ್ತು. ಮತ್ತೊಂದು ಯುವಕರ ಗುಂಪು ಅಲ್ಲಿಗೆ ಆಗಮಿಸಿದ್ದೆ ತುಸು ಹೊತ್ತು ಪರಿಸ್ಥಿತಿ ಉದ್ವಿಗ್ನವಾಗಿತ್ತು. ಅದನ್ನು‌‌ ಹತೋಟಿಗೆ ತರಲು ಪೊಲೀಸರು ಪ್ರಯತ್ನಿಸಿದರು. ಸ್ಥಳಕ್ಕೆ ದೌಡಾಯಿಸಿದ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಸಂಸದ ಬಿ.ವೈ.ರಾಘವೇಂದ್ರ ಸಹ ಭೇಟಿ ನೀಡಿ ಯುವಕರೊಂದಿಗೆ ಮಾತನಾಡಿದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಆರೋಪಿಗಳ ವಿರುದ್ಧ ಪ್ರಕರಣ ದಾಖಲು, ಪರಿಸ್ಥಿತಿ ಕಂಟ್ರೋಲ್
ರಾತ್ರಿ ಸುಮಾರು 100-150 ಜನ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸೇರಿದ್ದರು. ಅವರಿಗೆ ಗೋಹತ್ಯೆ ಕಾಯ್ದೆ ಬಗ್ಗೆ ತಿಳಿಹೇಳಿ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಗೋಹತ್ಯೆ ವಿರೋಧಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಅವರು ವಾಟ್ಸಾಪ್ ನಲ್ಲಿ ಸಂದೇಶದಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಇನ್ಮುಂದೆ ಗೋಹತ್ಯೆ ವಿರುದ್ಧ ಖಡಕ್ ಕ್ರಮ, ಏನೆಲ್ಲ ಚರ್ಚಿಸಲಾಯಿತು ಇಲ್ಲಿದೆ ಮಾಹಿತಿ

error: Content is protected !!