PERIODICITY EXTENSION | ಶಿವಮೊಗ್ಗದವರಿಗೆ ಶುಭ ಸುದ್ದಿ, ಚೆನ್ನೈ ವಿಶೇಷ ರೈಲು ಸಂಚಾರ ವಿಸ್ತರಣೆ, ರಾಜ್ಯದಲ್ಲಿ ಇನ್ನಷ್ಟು ರೈಲುಗಳಿಗೂ ಅನ್ವಯ

shimoga chennai train

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಿಂದ ಚೆನ್ನೈಗೆ ಸಂಚರಿಸುವ ವಿಶೇಷ ರೈಲಿನ ಓಡಾಟವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಿ ಆದೇಶಿಸಲಾಗಿದೆ.
ಶಿವಮೊಗ್ಗ ಟೌನ್- ಎಂಜಿಆರ್ ಚೆನ್ನೈ ಸೆಂಟ್ರಲ್ ವಿಶೇಷ ರೈಲು (ರೈಲು ಸಂಖ್ಯೆ 06223) ( Shivamogga Town – MGR Chennai Central Bi – Weekly Express) ಹಾಗೂ ಎಂಜಿಆರ್ ಚೆನ್ನೈ ಸೆಂಟ್ರಲ್- ಶಿವಮೊಗ್ಗ ಟೌನ್ (ರೈಲು ಸಂಖ್ಯೆ 06224) ವಿಶೇಷ ರೈಲು ಕಳೆದ ಜೂನ್ 27ಕ್ಕೆ ಸಂಚಾರ ಅವಧಿ ಮುಕ್ತಾಯವಾಗಿತ್ತು. ಅದನ್ನು ಮುಂದಿನ ಸೆಪ್ಟೆಂಬರ್ 26ರ ವರೆಗೆ ವಿಸ್ತರಿಸಲಾಗಿದೆ.

READ | ಮಲೆನಾಡಿನಲ್ಲಿ ಭಾರೀ ಮಳೆ‌ಕೊರತೆ, ಶಿವಮೊಗ್ಗದಲ್ಲಿ ಎಷ್ಟು ಮಳೆಯಾಗಿದೆ? ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

ಶಿವಮೊಗ್ಗ-ತಮಿಳುನಾಡಿಗೆ ಸಂಪರ್ಕ
ಆಂಧ್ರ ಪ್ರದೇಶ, ತಮಿಳುನಾಡಿನ ಪ್ರವಾಸಿ ತಾಣಗಳಿಗೆ ಈ ರೈಲು ಸಂಪರ್ಕಿಸಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ರೈಲು ಶಿವಮೊಗ್ಗ ಟೌನ್- ಭದ್ರಾವತಿ- ತರೀಕೆರೆ, ಬೀರೂರು ಜಂಕ್ಷನ್, ಅಜ್ಜಂಪುರ, ಹೊಸದುರ್ಗ ರಸ್ತೆ- ಚಿಕ್ಕಜಾಜೂರು- ಚಿತ್ರದುರ್ಗ- ಚಳ್ಳಕೆರೆ- ಮೊಳಕಾಲ್ಮೂರು- ರಾಯದುರ್ಗ- ಬಳ್ಳಾರಿ ಜಂಕ್ಷನ್- ಗುಂಟಕಲ್ ಜಂಕ್ಷನ್- ಗೂಟಿ ಜಂಕ್ಷನ್- ತಾಡಿಪತ್ರಿ- ಯೆರ್ರಾಗಂಟ್ಲು ಜಂಕ್ಷನ್- ಕಡಪ- ರಾಜಂಪೇಟ- ರೇಣಿಗುಂಟ ಜಂಕ್ಷನ್- ಅರಕ್ಕೊಣಂ ಜಂಕ್ಷನ್- ಪೇರಂಬೂರು- ಪುರಟ್ಟಿ ತಲೈವರ್ ಡಆ.ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣ.
ಇನ್ನ್ಯಾವ ರೈಲುಗಳ ಸೇವೆ ವಿಸ್ತರಣೆ?

  • ಬೆಳಗಾವಿ- ಮಂಗಳೂರು ಡೈಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 07335) ರೈಲನ್ನು 2023ರ ಜುಲೈ 1ರಿಂದ ಸೆಪ್ಟೆಂಬರ್ 30ರ ವರೆಗೆ ಸಂಚರಿಸಲು ಅವಕಾಶ ನೀಡಲಾಗಿದೆ.
  • ಮಂಗಳೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 07336) – Belagavi – Manuguru Daily Express Special ರೈಲನ್ನು ಅಕ್ಟೋಬರ್ 1, 2023ರ ವರೆಗೆ ವಿಸ್ತರಿಸಲಾಗಿದೆ.
  • ಶಿವಮೊಗ್ಗ ಟೌನ್-ಎಂಜಿಆರ್ ಚೆನ್ನೈ ಸೆಂಟ್ರಲ್ ಬೈ ವೀಕ್ಲಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06223) ರೈಲನ್ನು ಸೆಪ್ಟೆಂಬರ್ 26ರ ವರೆಗೆ ವಿಸ್ತರಿಸಲಾಗಿದೆ.
  • ಎಂಜಿಆರ್ ಚೆನ್ನೈ ಸೆಂಟ್ರಲ್- ಶಿವಮೊಗ್ಗ ಟೌನ್ ಬೈ ವೀಕ್ಲಿ ಎಕ್ಸ್ ಪ್ರೆಸ್ (06224) ರೈಲನ್ನು ಸೆಪ್ಟೆಂಬರ್ 27ರ ವರೆಗೆ ವಿಸ್ತರಿಸಲಾಗಿದೆ.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!