ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದಿಂದ ಚೆನ್ನೈ(Chennai)ಗೆ ಸಂಪರ್ಕ ಕಲ್ಪಿಸುವ ರೈಲು ಸೇವೆಯನ್ನು ಮಾರ್ಚ್’ವರೆಗೆ ವಿಸ್ತರಿಸಲಾಗಿದೆ.
READ | ಸಕ್ರೆಬೈಲಿಗೆ ಹೊಸ ಅತಿಥಿಯ ಆಗಮನ, ಕುಂತಿಗೆ 4ನೇ ಮರಿಯ ಖುಷಿ, ನಾಮಕರಣ ಹುಟ್ಟಿಸಿದ ಕೌತುಕ
ಶಿವಮೊಗ್ಗ(SMET)ದಿಂದ ಎಂಜಿಆರ್ ಚೆನ್ನೈ ಸೆಂಟ್ರಲ್-Chennai Central Bi-weekly Express Special (ರೈಲು ಸಂಖ್ಯೆ 06223)ಗೆ ನಡುವೆ ವಾರಕ್ಕೆ ಎರಡು ಸಲ ಸಂಚರಿಸುತ್ತಿರುವ ವಿಶೇಷ ರೈಲು ಈ ಮೊದಲೇ ನಿರ್ಧರಿಸಿದಂತೆ ಡಿಸೆಂಬರ್ 27ರ ವರೆಗೆ ಸಂಚರಿಸುವ ಬಗ್ಗೆ ಮೊದಲೇ ತಿಳಿಸಲಾಗಿತ್ತು. ಆದರೆ, ಈ ರೈಲಿನ ಸೇವೆಯನ್ನು 2023ರ ಜನವರಿ 1ರಿಂದ ಮಾರ್ಚ್ 28ರ ವರೆಗೆ ವಿಸ್ತರಿಸಲಾಗಿದೆ.
ಅದೇ ರೀತಿ ಎಂಜಿಆರ್ ಚೆನ್ನೈ ಸೆಂಟ್ರಲ್- ಶಿವಮೊಗ್ಗ (ರೈಲು ಸಂಖ್ಯೆ 06224) ವಿಶೇಷ ರೈಲು ಡಿ.28ರ ವರೆಗೆ ಸೇವೆ ನೀಡಬೇಕಿತ್ತು. ಅದನ್ನು ಸಹ 2023ರ ಜನವರಿ 2ರಿಂದ ಮಾಚ್ 29ರ ವರೆಗೆ ವಿಸ್ತರಿಸಲಾಗಿದೆ.
ದಕ್ಷಿಣ ಮಧ್ಯೆ ರೈಲ್ವೆ ವಲಯ ಪ್ರಯಾಣಿಕರ ಒತ್ತಡದ ಹಿನ್ನೆಲೆಯಲ್ಲಿ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ಇದ್ದು, ವಿಸ್ತರಿಸಲಾಗಿದೆ.
https://suddikanaja.com/2022/12/15/mp-by-raghavendra-raised-an-issue-of-arecanut-at-parliment-session/