Shimoga Rain | ಶಿವಮೊಗ್ಗದಲ್ಲಿ ಯೆಲ್ಲೋ ಅಲರ್ಟ್, ಭಾರೀ ಮಳೆ ಮುನ್ಸೂಚನೆ, ಎಲ್ಲಿ ಎಷ್ಟಾಗಿದೆ ಮಳೆ, ಜಲಾಶಯದಲ್ಲಿ ನೀರಿನ ಮಟ್ಟವೆಷ್ಟಿದೆ?

Rain

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ಸೋನೆ ಮಳೆ ಸುರಿಯುತ್ತಿದ್ದು, ಕೃಷಿಕರ ಮೊಗದಲ್ಲಿ ತುಸು ನಗು ಮೂಡಿದೆ. ಆದರೆ, ಜಲಾಶಯಗಳು ಬಹುತೇಕ ಖಾಲಿಯಾಗಿದ್ದು, ಕುಡಿಯುವುದಕ್ಕೆ ನೀರಿಲ್ಲ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಇಷ್ಟೊತ್ತಿಗಾಗಲೇ ಭಾರಿ ಮಳೆ ಬರಬೇಕಿತ್ತು. ಆದರೆ, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

sharavathi back water
ಬರಿದಾದ ಶರಾವತಿ ಹಿನ್ನೀರು.

ರಾಜ್ಯದಾದ್ಯಂತ ಜು.3ರಿಂದ ಐದು ದಿನಗಳ ಕಾಲ ಮುಂಗಾರು ಆರ್ಭಟ ಜೋರಾಗಲಿದೆ ಎಂದು ಹವಾಮಾನ ಇಲಾಖೆ (KSNDMC) ಮುನ್ಸೂಚನೆ ನೀಡಿದೆ. ಜು.3ರಿಂದ 7ರ ವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್ (Orange alert) ನೀಡಲಾಗಿದೆ. ಜು.3 ಮತ್ತು 5ರಂದು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow alert) ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜು.3ರಿಂದ 5ರವರೆಗೆ ವ್ಯಾಪಕ ಮಳೆ ನಿರೀಕ್ಷೆ ಎಂದು ಎಚ್ಚರಿಸಲಾಗಿದೆ.

READ | ಶಿವಮೊಗ್ಗದವರಿಗೆ ಶುಭ ಸುದ್ದಿ, ಚೆನ್ನೈ ವಿಶೇಷ ರೈಲು ಸಂಚಾರ ವಿಸ್ತರಣೆ, ರಾಜ್ಯದಲ್ಲಿ ಇನ್ನಷ್ಟು ರೈಲುಗಳಿಗೂ ಅನ್ವಯ

ಜಿಲ್ಲೆಯಲ್ಲಿ ಮಳೆಯ ಪ್ರಮಾಣ?
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 110.20 ಎಂಎಂ ಮಳೆಯಾಗಿದ್ದು, ಸರಾಸರಿ 15.74 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಎಂಎಂ ಇದ್ದು, ಇದುವರೆಗೆ ಸರಾಸರಿ 32.81 ಎಂಎಂ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆಯ ವಿವರ (ಎಂಎಂಗಳಲ್ಲಿ)
ಶಿವಮೊಗ್ಗ 4.50, ಭದ್ರಾವತಿ 4.20, ತೀರ್ಥಹಳ್ಳಿ 21.10, ಸಾಗರ 33.60, ಶಿಕಾರಿಪುರ 08.10, ಸೊರಬ 16.40 ಹಾಗೂ ಹೊಸನಗರ 22.30 ಮಳೆಯಾಗಿದೆ.
ಜಲಾಶಯಗಳಲ್ಲಿ ನೀರಿನ ಮಟ್ಟ (ಅಡಿ ಮತ್ತು ಕ್ಯೂಸೆಕ್ಸ್ ಗಳಲ್ಲಿ)
ಲಿಂಗನಮಕ್ಕಿ (Linganamakki): 1819 (ಗರಿಷ್ಠ), 1741.20 (ಇಂದಿನ ಮಟ್ಟ), 5461.00 (ಒಳಹರಿವು), 1009.0 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1757.70
ಭದ್ರಾ (Bhadra): 186 (ಗರಿಷ್ಠ), 136.10 (ಇಂದಿನ ಮಟ್ಟ), 59.00 (ಒಳಹರಿವು), 209.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 154.30.
ತುಂಗಾ (Tunga): 588.24 (ಗರಿಷ್ಠ), 586.11 (ಇಂದಿನ ಮಟ್ಟ), 1948.00 (ಒಳಹರಿವು), 50.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ (Mani): 595 (ಎಂಎಸ್.ಎಲ್.ಗಳಲ್ಲಿ), 570.50 (ಇಂದಿನ ಮಟ್ಟ ಎಂಎಸ್.ಎಲ್.), 646 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್) ಕಳೆದ ವರ್ಷ ನೀರಿನ ಮಟ್ಟ 571.18 (ಎಂಎಸ್.ಎಲ್.).
ಪಿಕ್ ಅಪ್ (Pickup dam): 563.88 (ಎಂಎಸ್.ಎಲ್.ಗಳಲ್ಲಿ), 561.62 (ಇಂದಿನ ಮಟ್ಟ), 316 (ಒಳಹರಿವು), 265.00(ಹೊರಹರಿವು ಕ್ಯೂಸೆಕ್ಸ್), ಕಳೆದ ವರ್ಷ ನೀರಿನ ಮಟ್ಟ 562.20.
ಚಕ್ರ (Chakra): 580.57 (ಎಂಎಸ್.ಎಲ್.ಗಳಲ್ಲಿ), 564.24 (ಇಂದಿನ ಮಟ್ಟ), 94.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 572.40.
ಸಾವೆಹಕ್ಲು (Savehaklu): 583.70 (ಗರಿಷ್ಠ ಎಂಎಸ್.ಎಲ್.ಗಳಲ್ಲಿ), 572.10 (ಇಂದಿನ ಮಟ್ಟ), 0.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 575.52.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!