Sakrebyle elephant camp | ವಿದ್ಯಾರ್ಥಿಯನ್ನು ಬಲಿ ಪಡೆದ, ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ‘ಅಭಿಮನ್ಯು’ಗೆ ರಿಲೀಸ್!

Abhimanyu Elephant

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಅಂದು ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹ ಹೊಕ್ಕರೂ ಭೇದಿಸಲು ಸಾಧ್ಯವಾಗಲಿಲ್ಲ. ಆದರೆ, ಈ ಅಭಿಮನ್ಯು ಎಂಬತ್ತು ದಿನಗಳ ಕಾಲ ಚಕ್ರವ್ಯೂಹದಲ್ಲಿದ್ದು ಅದನ್ನು ಭೇದಿಸಿಕೊಂಡು ಹೊರಬಂದಿದ್ದಾನೆ!

VIDEO REPORT 

ಎಂಬತ್ತು ದಿನಗಳ ಚಕ್ರವ್ಯೂಹದಂತಿದ್ದ “ಕ್ರಾಲ್” (Crawl) ನಿಂದ ಇಂದು ಅಭಿಮನ್ಯು (Abhimanyu) ಹೊರಬಂದಾಗ ಎಲ್ಲರ ಮೊಗದಲ್ಲೂ ಸಂತಸ ಮನೆ ಮಾಡಿತ್ತು. ಕ್ರಾಲ್’ನಿಂದ ಹೊರಬಂದ ಅಭಿಮನ್ಯು ಯಾರು ಗೊತ್ತಾ? ಈ ಕುರಿತ ವರದಿ ಇಲ್ಲಿದೆ.

READ | ಶಿವಮೊಗ್ಗದಲ್ಲಿ ಮತ್ತೆ ಪೊಲೀಸರ ಪಿಸ್ತೂಲ್ ಸದ್ದು, ಆರೋಪಿಯ ಕಾಲಿಗೆ ಬಿತ್ತು ಗುಂಡು

Abhimanyu elephant 1
ಅಭಿಮನ್ಯುವಿಗೆ ಕ್ರಾಲ್ ನಿಂದ ಬಿಡುಗಡೆ

ಚಕ್ರವ್ಯೂಹದಿಂದ ಹೊರಬಂದ ಅಭಿಮನ್ಯು
ಒಬ್ಬ ಮಹಿಳೆ ಮತ್ತು ಮಗುವಿನ ಪ್ರಾಣ ತೆಗೆದಿದ್ದ ಹಾಗೂ ವನ್ಯಜೀವಿ ವೈದ್ಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕಾಡಾನೆಯನ್ನು ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದ ಕ್ರಾಲ್’ನಲ್ಲಿ ಇರಿಸಲಾಗಿತ್ತು.
ಎಂಬತ್ತು ದಿನಗಳ ಕಾಲ ಕ್ರಾಲ್ ನಲ್ಲಿ ಒಂದೇ ಸ್ಥಳದಲ್ಲಿ ಬಂಧಿüಯಾಗಿದ್ದ ಕಾಡಾನೆಯನ್ನು ಏಕಾಏಕಿ ಕ್ರಾಲ್ ನಿಂದ ಹೊರತಂದಾಗ ಎಲ್ಲರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಒಂಟಿ ಸಲಗಕ್ಕೆ ಸ್ವಾತಂತ್ರ ಸಿಕ್ಕಷ್ಟು ಖುಷಿಯಿಂದ ಹೊರಬಂತು.
ಬಲಿಪಡೆದಿದ್ದ ಕಾಡಾನೆ ಇಂದು ಸೈಲೆಂಟ್
ಚನ್ನಗಿರಿ ಮತ್ತು ಹೊನ್ನಾಳಿ ಗಡಿಭಾಗದ ಗ್ರಾಮಗಳ ಹೊಲಗದ್ದೆಗಳಲ್ಲಿ ಬೀಡುಬಿಟ್ಟು ಬೆಳೆಹಾನಿ ಮಾಡುತ್ತಿದ್ದ ಕಾಡಾನೆ ಒಬ್ಬ ಮಹಿಳೆ ಮತ್ತು ಮಗುವನ್ನು ಬಲಿ ಪಡೆದಿತ್ತು. ಕಾಡಾನೆಯನ್ನು ಸೆರೆಹಿಡಿಯಬೇಕೆಂಬ ಕೂಗು ಸ್ಥಳೀಯರಿಂದ ವ್ಯಕ್ತವಾದ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಕಾಡಾನೆ ಸೆರೆಗೆ ಮುಂದಾಗಿದ್ದರು. ಚನ್ನಗಿರಿ ಗಡಿಭಾಗದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ವನ್ಯಜೀವಿ ವೈದ್ಯ ಡಾ.ವಿನಯ್ ಮೇಲೆ ದಾಳಿ ಮಾಡಿತ್ತು. ಗಂಭೀರ ಗಾಯಗೊಂಡ ವೈದ್ಯರನ್ನು ಎಕ್ಮಾ ಟ್ರೀಟ್ ಮೆಂಟ್ ಮೂಲಕ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ರವಾನಿಸಲಾಗಿತ್ತು. ಇತ್ತ ಕಾಡಾನೆಯನ್ನು ಸಕ್ರೆಬೈಲು ಬಿಡಾರಕ್ಕೆ ಅದೇ ಕರೆತರಲಾಗಿತ್ತು. ಕ್ರಾಲ್ ನಲ್ಲಿ ಹಾಕಿದ ಕಾಡಾನೆ ವಾರಗಟ್ಟಲೆ ಘೀಳಿಟ್ಟರೂ, ಅದನ್ನು ಶಾಂತಸ್ವರೂಪಕ್ಕೆ ತರುವಲ್ಲಿ ಮಾವುತ ಕಾವಾಡಿಗಳು ಯಶಸ್ವಿಯಾಗಿದ್ದಾರೆ.

READ | ಬೈಕಿನಲ್ಲೇ 33 ರಾಜ್ಯ, 3 ದೇಶ ಪ್ರಯಾಣ, ಸವಾಲುಗಳ ನಡುವೆ ಸಾಗಿದ ದಾರಿಯೇ ರೋಮಾಂಚಕ, ಇದಕ್ಕೇನು ಕಾರಣ?

ಆರಗ ಜ್ಞಾನೇಂದ್ರದಿಂದ ನಾಮಕರಣ
ಸತತ ಎಂಬತ್ತು ದಿನಗಳ ಕಾಲ ಆನೆಯ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಜಮೇದಾರ್ ಖುದ್ರತ್ ಪಾಶಾ ಮಂಜು ಮತ್ತು ತಂಡ ಹೊತ್ತಿಕೊಂಡಿತ್ತು. ಹಗಲು ರಾತ್ರಿ ಆನೆಯತ್ತ ಬೀಡುಬಿಟ್ಟು ಅದರ ವಿಶ್ವಾಸಗಳಿಸುವಲ್ಲಿ ಮಾವುತ ಕಾವಾಡಿಗಳು ನಡೆದ ಹಗಲು ರಾತ್ರಿಯ ಪರಿಶ್ರಮ ಯಶಸ್ವಿಯಾಗಿದೆ. ಕಾಡಾನೆಗೆ ಇತ್ತೀಚ್ಚೆಗೆ ಮಾಜಿ ಗೃಹ ಸಚಿವ ಆರಗಾ ಜ್ಞಾನೇಂದ್ರ ಅಭಿಮನ್ಯು ಎಂದು ನಾಮಕರಣ ಮಾಡಿದ್ದದರು.
ಹೀಗಾಗಿ ಸಂಪೂರ್ಣವಾಗಿ ಮಾವುತರಿಂದ ಪಳಗಿದ ಹಾಗೂ ತರಬೇತಿ ಪಡೆದ ಅಭಿಮನ್ಯುವನ್ನು ಸೋಮವಾರ ಕ್ರಾಲ್ ನಿಂದ ಹೊರಗೆ ತರಲಾಯಿತು. ಯಾವುದೇ ಅಹಿತಕರ ಘಟನೆಯಾಗದಂತೆ ಕುಮ್ಕಿ ಆನೆಗಳನ್ನು ಬಳಸಲಾಗಿತ್ತು.
ಅಭಿಮನ್ಯುವನ್ನು ಕ್ರಾಲಿನಿಂದ ಹೊರತೆಗೆಯುವ ಮುನ್ನ ಪೂಜಾ ಕಾರ್ಯ ನೆರವೇರಿಸಲಾಯಿತು. ಅಭಿಮನ್ಯು ಸೊರಗಿದಂತೆ ಕಂಡರೂ, ವನ್ಯಜೀವಿ ವೈದ್ಯರು ತರಬೇತಿ ಸಂದರ್ಭದಲ್ಲಿ ತೂಕ ಕಡಿಮೆಯಾಗುವುದು ಸಾಮಾನ್ಯ. ಅಭಿಮನ್ಯು ಆರೋಗ್ಯ ಉತ್ತಮವಾಗಿದೆ. ದೇಹದಲ್ಲಿ ಉಣ್ಣೆಗಳಿದ್ದು, ಅವೆಲ್ಲವನ್ನು ತೆಗೆಯಲಾಗಿದೆ ಎಂದು ವನ್ಯಜೀವಿ ವೈದ್ಯ ಮುರುಳಿ ಮನೋಹರ್ ಹೇಳಿದ್ದಾರೆ.

Blood Donor Day | ಯಾರು ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ? ರಕ್ತದ ಮಹತ್ವವೇನು? ರಕ್ತದಾನ ಪ್ರಯೋಜನಗಳೇನು?

error: Content is protected !!