Gandhi Bazar  | ಶಿವಮೊಗ್ಗದಲ್ಲಿ ಪೊಲೀಸರಿಗೆ ಬೆದರಿಕೆ ಹಾಕಿದ ರೌಡಿಶೀಟರ್

shivamogga city

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾತ್ರಿ ಬೀಟ್’ನಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಬೆದರಿಸಿದ್ದಾನೆ ಎನ್ನಲಾದ ರೌಡಿಶೀಟರ್ ಒಬ್ಬನನ್ನು ಬಂಧಿಸಿದ್ದು, ಇನ್ನಿಬ್ಬರ ಹುಡುಕಾಟ ನಡೆದಿದೆ.

READ | ಅಕ್ರಮ ಮರಳು ದಂಧೆ ನಿಯಂತ್ರಣಕ್ಕೆ ಡಿಸಿ ಖಡಕ್ ವಾರ್ನಿಂಗ್, ಜಿಲ್ಲಾಧಿಕಾರಿ ನೀಡಿದ ಎಚ್ಚರಿಕೆಗಳೇನು?

ಕುಂಬಾರಗುಂಡಿ ನಿವಾಸಿ ವಿನೋದ್(28) ಎಂಬಾತನನ್ನು ಬಂಧಿಸಲಾಗಿದೆ. ರಾತ್ರಿ ಗಾಂಧಿ ಬಜಾರಿನ ಬಟ್ಟೆ ಮಾರ್ಕೆಟ್ ಹಿಂಭಾಗದ ಅಂಗಡಿಯೊಂದರ ಮುಂದೆ ಅಡ್ಡಾಡುತ್ತಿದ್ದಾಗ ಬೀಟ್ ಪೊಲೀಸರು ಬಂದಿದ್ದಾರೆ. ಅಲ್ಲಿಂದ ಹೋಗುವಂತೆ ಸೂಚನೆ ನೀಡಿದ್ದಕ್ಕೆ ಅವರಿಗೆ ಆವಾಜ್ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಆತನ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

error: Content is protected !!