ಸುದ್ದಿ ಕಣಜ.ಕಾಂ ಸಾಗರ
SHIVAMOGGA: ಜೋಗ ಜಲಪಾತ(Jog falls)ಕ್ಕೆ ಮತ್ತೆ ಜೀವಕಳೆ ಬಂದಿದೆ. ಮಳೆ ಇಲ್ಲದೇ ಸೊರಗಿದ್ದ ನಾಲ್ಕು ಕವಲುಗಳಲ್ಲಿ ಮತ್ತೆ ನೀರು ಧುಮುಕ್ಕುತ್ತಿದ್ದು, ಸೌಂದರ್ಯ ಕಳೆಗಟ್ಟಿದೆ.
READ | ಗಾಜನೂರು ಡ್ಯಾಂ ತುಂಬಲು 1 ಅಡಿ ಬಾಕಿ, ಇಂದು ಗೇಟ್ ಓಪನ್ ಸಾಧ್ಯತೆ, ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟವೆಷ್ಟಿದೆ?
ಶರಾವತಿ ಕಣಿವೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಮಳೆ ಸುರಿಯುತ್ತಿದ್ದು, ಜಲಪಾತ ನಯನ ಮನೋಹರವಾಗಿ ಕಾಣುತ್ತಿದೆ. ಮಲೆನಾಡಿನಲ್ಲಿ ಮುಂಗಾರು ವಿಳಂಬವಾಗಿದ್ದರಿಂದ ಜೋಗ ಜಲಪಾತದಲ್ಲಿ ನೀರು ಇಲ್ಲವಾಗಿತ್ತು. ಜೋಗ ಪರಿಸರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮಂಜು ಮುಸುಕಿದ ಜೋಗವನ್ನು ವೀಕ್ಷಿಸುವುದೇ ಮನೋಲ್ಲಾಸ ನೀಡುತ್ತಿದೆ.
ಮತ್ತೆ ಕಳೆಗಟ್ಟಲಿದೆ ಜೋಗ
ಈ ಹಿಂದೆ ಜೋಗದಲ್ಲಿ ನೀರು ಇಲ್ಲದ್ದರಿಂದ ಪ್ರವಾಸಿಗರ ಸಂಖ್ಯೆಯೂ ಕುಸಿದಿತ್ತು. ಇಲ್ಲಿಗೆ ಆಗಮಿಸುವವರ ಸಂಖ್ಯೆ ವಿರಳವಾಗಿತ್ತು. ಆದರೆ, ಈಗ ಜೋಗ ಪ್ರಪಾತದಲ್ಲಿ ರಾಜ, ರೋರರ್, ರಾಕೆಟ್ ಮತ್ತು ರಾಣಿಯ ವೈಯ್ಯಾರ ಕಾಣಿಸುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಪ್ರವಾಸಿಗರನ್ನೇ ನಂಬಿಕೊಂಡಿರುವ ಇಲ್ಲಿಯ ಫೋಟೊಗ್ರಾಫರ್’ಗಳು ಹಾಗೂ ಅಂಗಡಿಯವರಿಗೂ ಅನುಕೂಲವಾಗಲಿದೆ.
Rain in shimoga | ಆಗುಂಬೆ, ಶರಾವತಿ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ, ಎಲ್ಲಿ ಹೇಗಿದೆ ಸ್ಥಿತಿ?