ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದೇಶಿಸಿದ್ದಾರೆ.
ರೈಲುಗಳು ರದ್ದು
ರೈಲು ಸಂಖ್ಯೆ 07349/ 07350 ಶಿವಮೊಗ್ಗ ಟೌನ್ – ತಾಳಗುಪ್ಪ- ಶಿವಮೊಗ್ಗ ಟೌನ್ ಪ್ಯಾಸೆಂಜರ್ (Talaguppa – shimoga town passanger train) ರೈಲುಗಳನ್ನು ಜುಲೈ 7ರಂದು ಇಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಬೆಳಗ್ಗೆ 1130 ರಿಂದ ಮಧ್ಯಾಹ್ನ 3.30ರವರೆಗೆ ಶಿವಮೊಗ್ಗ ಮತ್ತು ಕುಂಸಿ ವಿಭಾಗಗಳ ನಡುವೆ ರದ್ದುಗೊಳಿಸಲಾಗುತ್ತಿದೆ.
READ | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ 2023’, ಯಾವ ರೀತಿ ಅರಣ್ಯ ಸಂಹಾರ? ತಜ್ಞರು ಹೇಳಿದ್ದೇನು?
ಭಾಗಶಃ ರದ್ದು
ಮಿಲವಿಟ್ಟನ್-ಟುಟಿಕೋರಿನ್ ವಿಭಾಗದ ನಡುವಿನ ಜೋಡಿ ಮಾರ್ಗದ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲು ದಕ್ಷಿಣ ರೈಲ್ವೆಯು ಸೂಚನೆ ನೀಡಿದೆ.
- ಜುಲೈ 10 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16236 ಮೈಸೂರು- ಟುಟಿಕೋರಿನ್ ಎಕ್ಸ್ಪ್ರೆಸ್ ರೈಲನ್ನು ವಂಚಿ ಮಣಿಯಾಚಿ- ಟುಟಿಕೋರಿನ್ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
- ಜುಲೈ 11 ರಂದು ಟುಟಿಕೋರಿನ್ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16235 ಟುಟಿಕೋರಿನ್ – ಮೈಸೂರು ಎಕ್ಸ್ಪ್ರೆಸ್ ರೈಲನ್ನು ಟುಟಿಕೋರಿನ್ – ವಂಚಿ ಮಣಿಯಾಚಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಪ್ರಾಯೋಗಿಕ ನಿಲುಗಡೆಗೆ ಅವಕಾಶ
ಪ್ರಾಯೋಗಿಕ ಆಧಾರದ ಮೇಲೆ ಈ ಕೆಳಗಿನ ರೈಲು ನಿಲ್ದಾಣಗಳಿಗೆ ನಿಲುಗಡೆ ಮಾಡಲು ದಕ್ಷಿಣ ಮಧ್ಯ ರೈಲ್ವೆಯು ಸೂಚನೆ ನೀಡಿದೆ.
- ಜುಲೈ 5 ರಂದು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12295 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ – ದಾನಪುರ ಸಂಘಮಿತ್ರ ಎಕ್ಸ್ಪ್ರೆಸ್ ರೈಲು ರಾಮಗುಂಡಂ ನಿಲ್ದಾಣಕ್ಕೆ(02:09/02:10AM) ಆಗಮಿಸಿ/ ನಿರ್ಗಮಿಸಲಿದೆ.
- ಜುಲೈ 7 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12578 ಮೈಸೂರು – ದರ್ಭಾಂಗ ಭಾಗಮತ್ ಎಕ್ಸ್ಪ್ರೆಸ್ ರೈಲು ರಾಮಗುಂಡಂ ನಿಲ್ದಾಣಕ್ಕೆ (06:44/06:45AM) ಆಗಮಿಸಿ/ ನಿರ್ಗಮಿಸಲಿದೆ.
- ಜುಲೈ 6 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17212 ಯಶವಂತಪುರ – ಮಚಿಲಿಪಟ್ಟಣಂ ಎಕ್ಸ್ಪ್ರೆಸ್ ರೈಲು ಕುಂಬಮ್ ನಿಲ್ದಾಣಕ್ಕೆ (00:04/00:05AM) ಆಗಮಿಸಿ/ ನಿರ್ಗಮಿಸಲಿದೆ.
- ಜುಲೈ 7 ರಂದು ಯಶವಂತಪುರದಿಂದ (Yashwanthapur) ಪ್ರಾರಂಭವಾಗುವ ರೈಲು ಸಂಖ್ಯೆ 16569 ಯಶವಂತಪುರ – ಕಾಚಿಗುಡಾ ಎಕ್ಸ್ಪ್ರೆಸ್ ರೈಲು ಶ್ರೀರಾಮನಗರ, ಜಡ್ಚರ್ಲಾ ಮತ್ತು ಶಾದ್ನಗರ ನಿಲ್ದಾಣಗಳಿಗೆ ಕ್ರಮವಾಗಿ (11:44/11:46PM, 01:17/01:18AM ಮತ್ತು 01:43/01:44AM) ಆಗಮಿಸಿ/ ನಿರ್ಗಮಿಸಲಿದೆ.
- ಜುಲೈ 5 ರಂದು ಯಶವಂತಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17604 ಯಶವಂತಪುರ – ಕಾಚಿಗುಡಾ ಎಕ್ಸ್ಪ್ರೆಸ್ ರೈಲು ಶಾದ್ನಗರ ನಿಲ್ದಣಕ್ಕೆ(03:25/03:26 AM) ಆಗಮಿಸಿ/ ನಿರ್ಗಮಿಸಲಿದೆ.