ಪುಲ್ವಾಮಾ ದಾಳಿ ಪ್ರಕರಣ | ಹುತಾತ್ಮರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್, ಮುಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಪುಲ್ವಾಮಾ ದಾಳಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿ ದೇಶದ್ರೋಹ ಆರೋಪದಡಿ ಬಂಧನಕ್ಕೆ ಒಳಪಟ್ಟಿದ್ದ ವಿದ್ಯಾರ್ಥಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಸಿಸಿಬಿ ಪೊಲೀಸರು ವಿದ್ಯಾರ್ಥಿಯನ್ನು ದೇಶದ್ರೋಹ ಆರೋಪದಡಿ ರಷೀದ್ ಎಂಬಾತನಿಗೆ ಬಂಧಿಸಿದ್ದರು. ಈತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 51ನೇ ಹೆಚ್ಚುವರಿ ಸಿಟಿ ಸಿವಿಲ್ ಆಂಡ್ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಆರ್.ಎಚ್. ವೆಂಕಟೇಶ್ ಅವರು ಜಾಮೀನು ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ | ಹೊಸ ವರ್ಷದಲ್ಲಿ ಮದ್ಯ ಪ್ರಿಯರಿಗೆ ನಿರಾಸೆ!

ಬಂಧನಕ್ಕೀಡಾದ ರಷೀದ್ ಕಾಚರಕನಹಳ್ಳಿ ನಿವಾಸಿಯಾಗಿದ್ದು, ಬಿಇ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್ ಓದುತ್ತಿದ್ದಾನೆ.
ಯಾವಾಗ ಪೋಸ್ಟ್: 2019ರ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ 40 ಮಂದಿ ಸಿಆರ್‍ಪಿಎಫ್ ಭದ್ರತಾ ಪಡೆಯ ಬಗ್ಗೆ ರಷೀದ್ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ. ಈ ಸಂಬಂಧ ಸಿಸಿಬಿ ಪೊಲೀಸರು 2019ರ ಫೆಬ್ರವರಿ 18ರಂದು ಆರೋಪಿ ಯುವಕನನ್ನು ಬಂಧಿಸಿದ್ದರು.

ಇದನ್ನೂ ಓದಿ | ಗ್ರಾಪಂ ಸದಸ್ಯರಿಗೆ ಟ್ರೈನಿಂಗ್

ಈತನ ವಿರುದ್ಧ ಐಪಿಸಿ ಸೆಕ್ಷನ್ 153 ಎ, 124ಎ, 201 ಹಾಗೂ ಯುಎಪಿಎ ಸೆಕ್ಷನ್ 16 ಅಡಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ 2019ರಲ್ಲಿಯೇ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಮತ್ತೆ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದು, ಸದರಿ ಪ್ರಕರಣದಲ್ಲಿ ತಾನು ಸಂಪೂರ್ಣ ಅಮಾಯಕನಾಗಿದ್ದು, ವೃದ್ಧ ತಂದೆ ತಾಯಿಯ ಜವಾಬ್ದಾರಿಯೂ ತನ್ನ ಮೇಲಿದೆ. ಆದ್ದರಿಂದ ಜಾಮೀನು ನೀಡುವಂತೆ ಕೋರಿದ್ದ.

error: Content is protected !!