ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ಹಲವೆಡೆ ಡಿ.4 ಮತ್ತು 5ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
READ | ಭದ್ರಾವತಿಯಿಂದ ರೈಲಿನಲ್ಲಿ ಹೊರಟಿದ್ದ ಮಹಿಳೆಗೆ ಶಾಕ್, ಖಾಕಿ ಕರ್ತವ್ಯ ಪ್ರಜ್ಞೆಗೆ ಸೆಲ್ಯೂಟ್
ಎಲ್ಲಿ, ಯಾವತ್ತು ವಿದ್ಯುತ್ ವ್ಯತ್ಯಯ?
ಆಲ್ಕೋಳ ಮೆಸ್ಕಾಂ ವಿ.ವಿ.ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಡಿ.4 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಎ.ಎಫ್-8 ಫೀಡರ್ ವ್ಯಾಪ್ತಿಯ ಪೊಲೀಸ್ ಚೌಕಿ, ಸೂಡಾ ಕಚೇರಿ, ದಯಾನನ ಪ್ರಿಂಟರ್ಸ್, ಕೆಂಚಪ್ಪ ಲೇಔಟ್, ಎನ್.ಎಂ.ಸಿ.ಕಾಂಪೌಂಡ್, ಕುವೆಂಪು ಬಡಾವಣೆ, ಲಕ್ಷ್ಮೀಪುರ, ಕಲ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ.5 ರಂದು ವಿದ್ಯುತ್ ವ್ಯತ್ಯಯ
SHIMOGA: ಶಿವಮೊಗ್ಗ ಎಂ.ಆರ್.ಎಸ್ 110/11 ಕೆವಿ ವಿವಿ ಕೇಂದ್ರದ ಎಫ್-7 ಪಿಳ್ಳಂಗಿರಿ ಎನ್.ಜೆ.ವೈ ಮತ್ತು ಎಫ್-8 ಜಾವಳ್ಳಿ ಐ ಪಿ ಮಾರ್ಗಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.5 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಂ.ಆರ್.ಎಸ್. ಮೆಸ್ಕಾಂ ವಿ.ವಿ.ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಡಿ.5 ರಂದು ಬೆಳಗ್ಗೆ 9.30 ರಿಂದ ಸಂಜೆ 5 ರವರೆಗೆ ಎಫ್-5 ಫೀಡರ್ ವ್ಯಾಪ್ತಿಯ ವಾಟರ್ ಸಪ್ಲೈ, ಎಂ.ಆರ್.ಎಸ್.ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಎಫ್-3 ಫೀಡರ್ ವ್ಯಾಪ್ತಿಯ ಜ್ಯೋತಿನಗರ, ವಿದ್ಯಾನಗರ, ಕಂಟ್ರಿಕ್ಲಬ್ ರಸ್ತೆ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Arecanut shell | ಅಡಿಕೆ ಬೆಳೆಗಾರರಿಗೆ ಶುಭಸುದ್ದಿ, ಶಬ್ದ ನಿರೋಧಕವಾಗಿಯೂ ಅಡಿಕೆ ಸಿಪ್ಪೆ ಬಳಕೆ!