HAL | ಐಟಿಐ ಪಾಸ್ ಆದವರಿಗೆ ಹೆಚ್‍ಎಎಲ್ ನಲ್ಲಿ ಅಪ್ರೆಂಟಿಸ್ ಅವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಹುದು?

HAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಬೆಂಗಳೂರು ಇಲ್ಲಿ ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗಾಗಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಲು ಅವಕಾಶ?
ಎಸ್‍ಎಸ್‍ಎಲ್‍ಸಿ ಯಲ್ಲಿ ಶೇ.70+ ಐಟಿಐ(ಸಿಟಿಎಸ್) ಶೇ.30 ಅಂಕ ಪಡೆದ ಫಿಟ್ಟರ್, ಟರ್ನರ್, ಮಷಿನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿಒಪಿಎ, ಫೌಂಡ್ರಿಮನ್, ಶೀಟ್ ಮೆಟಲ್‍ವರ್ಕರ್, ಕ್ರಾಫ್ಟ್ಸ್‍ಮೆನ್, ಟ್ರೈನಿಂಗ್ ಸ್ಕೀಮ್ ಸಿಟಿಎಸ್‍ನಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

READ | ತುಂಗಾ ಎಡದಂಡೆ ಕಾಲುವೆ ನೀರಿನ ಹರಿವು ಕಡಿಮೆ ಸಂಭವ, ಜಿಲ್ಲೆಯಲ್ಲಿ‌ ಎಷ್ಟು ಮಳೆಯಾಗಿದೆ?

ಅರ್ಜಿ ಸಲ್ಲಿಸಲು ಕೊನೆ ದಿನ
ಅರ್ಜಿ ಸಲ್ಲಿಸಲು ಆ. 25 ಕಡೆಯ ದಿನವಾಗಿರುತ್ತದೆ. ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ಪೋರ್ಟಲ್ ರಿಜಿಸ್ಟ್ರೇಷನ್ ಸಂಖ್ಯೆ, ಎಂಪ್ಲಾಯ್‍ಮೆಂಟ್ ಕಾರ್ಡ್, ಪಾಸ್‍ಪೋರ್ಟ್ ಸೈಜಿನ 4 ಫೋಟೋಗಳು ಈ ಎಲ್ಲಾ ದಾಖಲೆಗಳ ಮೂಲ ಪ್ರತಿ ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ಗುತ್ಯಪ್ಪ ಕಾಲೋನಿ, ಪಂಪಾ ನಗರ, 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಶಿವಮೊಗ್ಗ, ದೂ.ಸಂ: 08182-255293, 9380663606 ನ್ನು ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Theft case | ಪ್ರಾಜೆಕ್ಟ್ ಮ್ಯಾನೇಜರ್ ಬಳಿಯೇ ಹಣ ಕಳವು ಮಾಡಿದ ಕಾರು ಚಾಲಕ ಅರೆಸ್ಟ್, ₹7 ಲಕ್ಷ ಸೀಜ್

error: Content is protected !!