ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ದಸರಾ (shimoga dasara) ಅನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಂಬೂ ಸವಾರಿ ಇದಕ್ಕೆ ಇನ್ನಷ್ಟು ಮೆರಗು ನೀಡಲಿದೆ.
ಈಗಾಗಲೇ ನವರಾತ್ರಿ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಹಾನಗರ ಪಾಲಿಕೆ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದೆ. ವಿಜಯ ದಶಮಿಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ಇಡೀ ನಗರ ಮದುವಣಗಿತ್ತಿಯಂತೆ ತಯಾರಾಗಿದೆ. ವಿದ್ಯುತ್ ದೀಪಗಳಿಂದ ನಗರದ ರಸ್ತೆ, ವೃತ್ತಗಳು ಮತ್ತು ಸರಕಾರಿ ಕಚೇರಿಗಳನ್ನು ಶೃಂಗರಿಸಲಾಗಿದೆ.
READ | ಶಿವಮೊಗ್ಗ – ಹೈದರಾಬಾದ್, ಗೋವಾ, ತಿರುಪತಿ ವಿಮಾನ ಹಾರಾಟ ಇನ್ನಷ್ಟು ವಿಳಂಬ
ಮೆರವಣಿಗೆ ರಸ್ತೆ ಮಾರ್ಗ
ಜಂಬೂ ಸವಾರಿಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ- ರಮಣ ಶೆಟ್ಟಿ ಪಾರ್ಕ್- ಗಾಂಧಿ ಬಜಾರ್ ಮುಖ್ಯ ರಸ್ತೆ- ಶಿವಪ್ಪ ನಾಯಕ ಸರ್ಕಲ್- ಅಮೀರ್ ಅಹ್ಮದ್ ಸರ್ಕಲ್- ಗೋಪಿ ಸರ್ಕಲ್ ದುರ್ಗಿಗುಡಿ ಮುಖ್ಯ ರಸ್ತೆ- ಜೈಲ್ ಸರ್ಕಲ್- ಲಕ್ಷ್ಮಿ ಥಿಯೇಟರ್ ಸರ್ಕಲ್- ಫ್ರೀಡಂ ಪಾರ್ಕ್’ಗೆ ತಲುಪಲಿದೆ.
ಇಂದು ಮೆರವಣಿಗೆ ಪೂರ್ವ ತಾಲೀಮು
ಸೋಮವಾರ ಮಧ್ಯಾಹ್ನ 3.30 ಗಂಟೆಗೆ ವಾಸವಿ ಪಬ್ಲಿಕ್ ಸ್ಕೂಲ್’ನಿಂದ ಫ್ರೀಡಂ ಪಾರ್ಕ್’ವರೆಗೆ ಶಿವಮೊಗ್ಗ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ. ಪೊಲೀಸ್ ವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ನಮ್ಮ ಜೊತೆ ಸಹಾಯಕ್ಕೆ ಇರುತ್ತದೆ.
ಈ ಮೂಲಕ ನಾಳೆಯ ದಸರಾ ಅಂಬಾರಿ ಉತ್ಸವ ಮೆರವಣಿಗೆಯಲ್ಲಿ ಸಾರ್ವಜನಿಕರು, ಅಂಗಡಿ ಮುಗ್ಗಟ್ಟುಗಳ ಮಾಲೀಕರು, ವರ್ತಕರು ಸಹಕರಿಸಲು ಹಾಗೂ ಜಾಗೃತಿ ಮೂಡಿಸುವುದರ ಬಗ್ಗೆ ಪತ್ರಿಕಾ ಮಾಧ್ಯಮದವರಿಗೆ ಸ್ವಾಗತವನ್ನು ಬಯಸುತ್ತೇವೆ.