One click many news | ₹25 ಪಾವತಿಸಿ ಮನೆ ಬಾಗಿಲಿಗೆ ಬರಲಿದೆ‌ ತ್ರಿವರ್ಣ ಧ್ವಜ, ಪ್ರಶಸ್ತಿಗೆ ಅರ್ಜಿ ಆಹ್ವಾನ, ಮ್ಯಾರಥಾನ್ ಸ್ಪರ್ಧೆ

NEWS Bulletin

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳು, ಕರೆಯಲಾದ ಅರ್ಜಿ, ಜನರಿಗೆ ಅನುಕೂಲವಾಗುವ ವಿಚಾರಗಳು ಗಮನಕ್ಕೆ ಬರುವುದೇ ವಿರಳ. ಅದಕ್ಕಾಗಿ, ಈ ಒಂದು ಕ್ಲಿಕ್ ನಲ್ಲಿ ಹಲವು ಸುದ್ದಿಗಳನ್ನು ಓದಲು ‘ಸುದ್ದಿ ಕಣಜ‘ ಅನುಕೂಲ ಮಾಡಿಕೊಡಲಿದೆ.

one click many news 1

READ |  ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಐದು ದಿನಗಳಚ್ಟೇ ಬಾಕಿ

News 1 | ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ

SHIMOGA: ಭಾರತೀಯ ಅಂಚೆ ಇಲಾಖೆ (Indian Postal department)ಯು ಕಳೆದ ಸಾಲಿನಂತೆ ಈ ವರ್ಷವು ಸಹ ತ್ರಿವರ್ಣ ಧ್ವಜವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಮಾಡಲಿದೆ.
2023 ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಹೆಮ್ಮೆ ಮತ್ತು ದೇಶಭಕ್ತಿಯೊಂದಿಗೆ ಆಚರಿಸಲು ನಿಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಕೇವಲ ₹25 ಪಾವತಿಸಿ ತ್ರಿವರ್ಣ ಧ್ವಜ ಪಡೆದುಕೊಳ್ಳಬಹುದು. ಆನ್‍ಲೈನ್ www.indiapost.gov.in  ರಲ್ಲಿ ನೊಂದಣಿ ಮಾಡುವುದರ ಮೂಲಕ ಮನೆ ಬಾಗಿಲಿನಲ್ಲಿಯೇ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸುವಂತೆ ಅಂಚೆ ಅಧೀಕ್ಷಕ ಜಿ.ಜಯರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News 2 | ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆ

SHIMOGA: ಅಂತರರಾಷ್ಟ್ರೀಯ ಯುವ ದಿನಾಚರಣೆ (Indian Youth day) ಪ್ರಯುಕ್ತ ಎಚ್‍ಐವಿ/‌‌‌ ಏಡ್ಸ್ (HIV/ AIDS) ಕುರಿತು ಅರಿವು ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಮ್ಯಾರಥಾನ್ ಸ್ಪರ್ಧೆ (Marathon competition)ಯನ್ನು ಏರ್ಪಡಿಸಲಾಗಿದೆ.
ಎಚ್‍ಐವಿ/ ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಎಚ್‍ಐವಿ/ ಏಡ್ಸ್(ತಡೆ)‌ ಕಾಯ್ದೆ 2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ರಾಷ್ಟ್ರೀಯ ಸಹಾಯವಾಣಿ 1097, ಎಸ್‍ಐಟಿ ಇತ್ಯಾದಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ವಿದ್ಯಾರ್ಥಿಗಳಲ್ಲಿ ಎಚ್‍ಐವಿ/ ಏಡ್ಸ್ ಮತ್ತು ರಕ್ತದಾನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಶಿವಮೊಗ್ಗ ತಾಲ್ಲೂಕಿನಲ್ಲಿ ರೆಡ್ ರಿಬ್ಬನ್ ಕ್ಲಬ್(ಆರ್‍ಆರ್‍ಸಿ) ಹೊಂದಿರುವ ಕಾಲೇಜುಗಳ ಎನ್‍ಎಸ್‍ಎಸ್ ಅಧಿಕಾರಿಗಳ ಸಹಯೋಗದೊಂದಿಗೆ ಆ.11ರ ಬೆಳಗ್ಗೆ 7 ಗಂಟೆಗೆ  ಮ್ಯಾರಥಾನ್ ಸ್ಪಧೆ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಓ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕರಿಗಳು, ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು, ಆರೋಗ್ಯ ಇಲಾಖೆ, ಚುನಾಯಿತ ಪ್ರತಿನಿಧಿಗಳು ಇವರ ಉಪಸ್ಥಿತಿಯಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ.
ಮ್ಯಾರಥಾನ್ ನಡೆಯಲಿರುವ ಮಾರ್ಗ
ನೆಹರು ಕ್ರೀಡಾಂಗಣದಿಂದ ಪ್ರಾರಂಭವಾಗಿ ಜೈಲ್ ಸರ್ಕಲ್, ಗೋಪಿ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್‍ನಿಂದ ಮುಂದುವರೆದು ವೀರಭಧ್ರೇಶ್ವರ ಟಾಕೀಸ್ ಮುಖಾಂತರ ನೆಹರು ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿಗಳು ತಿಳಿಸಿದ್ದಾರೆ.

NEWS 3 | ಬಾಲ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ

SHIMOGA: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಂತ್ರಾಲಯ ಭಾರತ ಸರ್ಕಾರದ ವತಿಯಿಂದ 2023 ನೇ ಸಾಲಿನ ರಾಷ್ಟ್ರೀಯ ಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ರಾಷ್ಟ್ರಾದ್ಯಂತ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆ.31 ಕಡೆಯ ದಿನವಾಗಿದೆ. ಜಿಲ್ಲೆಯಲ್ಲಿ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಹಾಗೂ ನೂತನ ಆವಿಷ್ಕಾರಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದ ಮಕ್ಕಳು ಆನ್‍ಲೈನ್ ಲಿಂಕ್ https://awards.gov.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

READ | ಗ್ಯಾರಂಟಿಗಳ‌ ಪರ ನಟ ಪ್ರಕಾಶ್ ರಾಜ್ ಬ್ಯಾಟಿಂಗ್, ಇವರು ಮಾಡಿದ ಐದು ಗಂಭೀರ ಆರೋಪಗಳಿವು

NEWS 4 | ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನ

SHIMOGA: ರೇಷ್ಮೆ ಇಲಾಖೆಯ 2023-24 ನೇ ಸಾಲಿನ ಫಲಾನುಭವಿ ಆಧಾರಿತ ಯೋಜನೆಗಳಿಗೆ ಸಹಾಯಧನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹೊಸ ಹಿಪ್ಪು ನೇರಳೆ ನಾಟಿ ಸಹಾಯಧನ, ಹಿಪ್ಪುನೇರಳೆ ನರ್ಸರಿ ಸ್ಥಾಪನೆ ಮಾಡಲು ಸಹಾಯಧನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ವೆಬ್‍ಸೈಟ್ www.shimoga.nic.in ಮೂಲಕ
ಆ.16 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು ರಿಂದ ಸೆಪ್ಟೆಂಬರ್ 15 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ರೇಷ್ಮೆ ಉಪನಿರ್ದೇಶಕರು, ಶಿವಮೊಗ್ಗ, 100 ಅಡಿ ರಸ್ತೆ, ರಾಜೇಂದ್ರನಗರ, ನಿರ್ಮಲ ನರ್ಸಿಂಗ್ ಹೋಂ ಎದುರು, ಶಿವಮೊಗ್ಗ ಮೊ.ಸಂ: 9845849636, ದೂ.ಸಂ 08182-295637, ರೇಷ್ಮೆ ಸಹಾಯಕ ನಿರ್ದೇಶಕರು, ಮೊ.ಸಂ: 9972911112 ನ್ನು ಸಂಪರ್ಕಿಸಬಹುದೆಂದು ರೇಷ್ಮೆ ಉಪನಿರ್ದೇಶಕರು ತಿಳಿಸಿದ್ದಾರೆ.

One click many news | ಜಿಟಿಟಿಸಿಯಲ್ಲಿ ಡಿಪ್ಲೊಮಾ ತರಬೇತಿಗಾಗಿ ಅರ್ಜಿ, ಲೋಕಾಯುಕ್ತ ಕುಂದು-ಕೊರತೆ ಸಭೆ, ಇ-ಸಂಗ್ರಹಣಾ ಪೋರ್ಟಲ್‍ನಲ್ಲಿ ನೋಂದಣಿ

error: Content is protected !!