Murder | ಸ್ವಾತಂತ್ರ್ಯ ದಿನಾಚರಣೆಯಂದೇ ಭದ್ರಾವತಿಯಲ್ಲಿ ತಡೆದು ನಿಲ್ಲಿಸಿ ಕೊಲೆ, ಮುಂದೇನಾಯ್ತು?

Crime news

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಯುವಕನೊಬ್ಬನನ್ನು ಚಾಕುದಿಂದ ಇರಿದು ಕೊಲೆ‌ ಮಾಡಿದ ಘಟನೆ ನಗರದ ಭದ್ರಾ ಹಳೆ ಸೇತುವೆ ಮೇಲೆ ಮಂಗಳವಾರ ಸಂಭವಿಸಿದೆ.
ಮೃತನನ್ನು ದೊಡೇರಿಯ ತೋಟವೊಂದರಲ್ಲಿ ಕೆಲಸಗಾರನಾಗಿದ್ದ ನರೇಂದ್ರ (30) ಎಂದು ಗುರುತಿಸಲಾಗಿದೆ. ಆಟೋ ಚಾಲಕ ಹರೀಶ್ ಎಂಬಾತ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಕೊಲೆಗೆ ಖಚಿತ ಕಾರಣ ತಿಳಿದುಬಂದಿಲ್ಲ.

READ | ನಂದಿನಿ ಸಹಿ ಉತ್ಸವ, ಶೇ.20ರಷ್ಟು ರಿಯಾಯಿತಿ, ಯಾವ ಉತ್ಪನ್ನಗಳಿಗೆ ಅನ್ವಯ?

ನರೇಂದ್ರ ಎಂಬಾತ ಮಹಿಳೆಯೊಬ್ಬಳ ಜತೆ ಆಟೋದಲ್ಲಿ ಹೋಗುವಾಗ ಹರೀಶ್ ನಾಯ್ಡ್ ಅಡ್ಡಗಟ್ಟಿದ್ದಾನೆ. ನಂತರ ಆತನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದು, ಚಾಕು ಇರಿದಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚಾಕು ಇರಿದಾಗ ತೀವ್ರ ಗಾಯಗೊಂಡಿದ್ದ ನರೇಶ್ ಎಂಬಾತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚುವರಿ‌ ಚಿಕಿತ್ಸೆಗೆಂದು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಹಳೇನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Independence day | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಾರಿದ ತ್ರಿವರ್ಣ ಧ್ವಜ, ಸೂಪರ್ ಮಹಿಳೆ ಕಾರ್ಯಕ್ರಮಕ್ಕೆ ಚಾಲನೆ, ಜಿಲ್ಲೆಯಲ್ಲಿ ಏನೇನು ವಿಶೇಷ?

error: Content is protected !!