Inspector | ಶಿವಮೊಗ್ಗದಲ್ಲಿ 8 ವರ್ಷದ ಹುಡುಗ ಒಂದು ದಿನದ ಇನ್’ಸ್ಪೆಕ್ಟರ್!

dodhpete police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹ್ರದಯ ಸಂಬಂಧಿ ಕಾಯಿಲೆ ಹೊಂದಿರುವ ಎಂಟೂವರೆ ವರ್ಷದ ಬಾಲಕ ಆಜಾನ್ ಖಾನ್ ಅವರು‌ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸಾಂಕೇತಿಕವಾಗಿ ಸಿಪಿಐ (ಸರ್ಕಲ್‌‌ ಇನ್ ಸ್ಪೆಕ್ಟರ್) ಆಗುವ ಮೂಲಕ‌ ಗಮನ ಸೆಳೆದರು.
ಸೂಳೆಬೈಲು ಮೂಲದ ಬಾಳೆಹೊನ್ನೂರು ನಿವಾಸಿ ತಬ್ರೇಜ್ ಖಾನ್ ಅವರ ಮಗ ಆಜಾನ್ ಖಾನ್ ಅವರು ತಮ್ಮ ಕನಸಿನಂತೆ ಖಾಕಿ‌ ತೊಟ್ಟು ನಗೆ ಬೀರಿದರು.
ಇಚ್ಛೆಯಂತೆ ಅವಕಾಶ ಕಲ್ಪಿಸಿದ ಪೊಲೀಸ್ ಇಲಾಖೆ
ಆಜಾನ್ ಖಾನ್ ಚಿಕ್ಕಂದಿನಿಂದಲೂ ಇನ್ ಸ್ಪೆಕ್ಟರ್ ಆಗುವ ಆಸೆ ಇದೆ. ಆದರೆ, ಹುಟ್ಟಿದ ಮೂರು ತಿಂಗಳ ಮಗುವಿದ್ದಾಗಲೇ ಈತನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಅದಕ್ಕಾಗಿ ತಬ್ರೇಜ್ ದಂಪತಿ‌ ಹಲವೆಡೆ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಸಂಪೂರ್ಣ ಆರೋಗ್ಯ ಹೊಂದಬೇಕಾದರೆ ಹೃದಯ ಇಂಪ್ಲಾಂಟೇಶನ್ ಮಾಡಿಸಬೇಕು. ಈ ಕಾರಣದಿಂದ ಮಗನ ಆಸೆ ಈಡೇರಿಸಲು ಅವಕಾಶ ನೀಡಬೇಕು ಎಂದು ಆಜಾನ್ ಖಾನ್ ಪಾಲಕರು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ‌‌‌ ಜಿ.ಕೆ.ಮಿಥುನ್ ಕುಮಾರ್’ರನ್ನು ಮನವಿ ಮಾಡಿದರು. ಅದರಂತೆ, ಬಾಲಕನಿಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಡಲಾಯಿತು.

 

Police

READ | ಶಿವಮೊಗ್ಗದ ಹಲವೆಡೆ ಶೂನ್ಯಕ್ಕೆ ತಲುಪಿದ ಮಳೆ, ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ, ಶಿವಮೊಗ್ಗ-ಎ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಬಾಲರಾಜ್, ಜಿಲ್ಲಾ ಪೊಲೀಸ್ ಕಚೇರಿ ಡಿಸಿಆರ್.ಬಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಡಿ.ಟಿ.ಪ್ರಭು, ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಂಜನ್ ಕುಮಾರ್, ಪೊಲೀಸ್ ಅಧಿಕಾರಿ ಸಿಬ್ಬಂದಿ‌, ಬಾಲಕನ ಪೋಷಕರು ಉಪಸ್ಥಿತರಿದ್ದರು.

Murder | ಸ್ವಾತಂತ್ರ್ಯ ದಿನಾಚರಣೆಯಂದೇ ಭದ್ರಾವತಿಯಲ್ಲಿ ತಡೆದು ನಿಲ್ಲಿಸಿ ಕೊಲೆ, ಮುಂದೇನಾಯ್ತು?

error: Content is protected !!