Wushu tournament | ಖೇಲೋ ಇಂಡಿಯಾ ಮಹಿಳಾ ವುಶು ಕ್ರೀಡಾಕೂಟದಲ್ಲಿ ಶಿವಮೊಗ್ಗದವರೂ ಭಾಗಿ, ಎಲ್ಲಿ ನಡೆಯಲಿದೆ? ಏನು ವಿಶೇಷ?

Sports news

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India) ಮಹಿಳೆಯರಿಗಾಗಿ ಖೇಲೋ ಇಂಡಿಯಾ ಮಹಿಳಾ ವುಶು ಕ್ರೀಡಾಕೂಟವನ್ನು (wushu game) ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆ.29ರಂದು ಆಯೋಜಿಸಿದೆ ಎಂದು ಶಿವಮೊಗ್ಗ ಜಿಲ್ಲಾ ವುಶು ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷ ಅಬ್ದುಲ್ ಘನಿ ಹೇಳಿದರು.

READ | ಅನ್ನ ಭಾಗ್ಯ ಯೋಜನೆ ಅಡಿ ಶಿವಮೊಗ್ಗದಲ್ಲಿ ಒಂದೇ ತಿಂಗಳಲ್ಲಿ ಕೋಟಿ- ಕೋಟಿ ಹಣ ಫಲಾನುಭವಿಗಳ‌ ಖಾತೆಗೆ ಜಮಾ!

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವುಶು ಕ್ರೀಡೆ ರಾಷ್ಟ್ರೀಯ ಕ್ರೀಡೆಯಾಗಿದೆ. ಆ.29ರಂದು ನಡೆಯುವ ಈ ಕ್ರೀಡಾಕೂಟದಲ್ಲಿ 25 ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ವಿವಿಧ ಶಾಲೆಗಳಿಂದ 18 ಯುವತಿಯರು ಭಾಗಿಯಾಗಲಿದ್ದಾರೆ. ಈ ಕ್ರೀಡಾಕೂಟವನ್ನು ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಉದ್ಘಾಟಿಸಲಿದ್ದಾರೆ ಎಂದರು.
ಉನ್ನತ ವ್ಯಾಸಂಗಕ್ಕೆ ಮೀಸಲಾತಿ
ಈ ಕ್ರೀಡೆಗೆ ರಾಷ್ಟ್ರೀಯ ಪ್ರಾಧಾನ್ಯತೆ ಸಿಕ್ಕಿದೆ ಅಂತರರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳಿಗೆ ಉನ್ನತ ವ್ಯಾಸಂಗಕ್ಕೆ ಮೀಸಲಾತಿಯೂ ಸಿಗುತ್ತದೆ. ಜಿಲ್ಲೆಯಲ್ಲಿ ನಮ್ಮ ಸಂಸ್ಥೆ ಇದನ್ನು ಉತ್ತಮವಾಗಿ ಪೋಷಿಸುತ್ತಿದೆ. ಇದರಲ್ಲಿ ಭಾಗಿಯಾಗುವ ಜಿಲ್ಲಾ ಕ್ರೀಡಾಪಟುಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದರು.
ಸಂಸ್ಥೆಯ ಪದಾಧಿಕಾರಿಗಳಾದ ಮುಖೀಬ್ ಅಹ್ಮದ್ ದರ್ವೇಶ್, ಮಹ್ಮದ್ ಇರ್ಫಾನ್. ಜ್ಯೋತಿ ಹರಳಪ್ಪ, ವಸೀಖ್ ರೆಹಮತ್, ನಜೀಮ್ ಅಹ್ಮದ್, ಮಹ್ಮದ್ ಅಲ್ಲಾಭಕ್ಷಿ, ರಾಜ್‌ ಕುಮಾರ್ ಇದ್ದರು.

ಪತ್ನಿ ಸಾವಿನ ಬೆನ್ನಲ್ಲೇ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ನಿಧನ, ದೇಶವೇ ಕಂಬನಿ

error: Content is protected !!