ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿದೆ ಮಿನರಲ್ ವಾಟರ್ ಘಟಕ, ಅಗರಬತ್ತಿ ಫ್ಯಾಕ್ಟರಿಯಲ್ಲಿ ಎಷ್ಟು ಜನರಿಗೆ ಉದ್ಯೋಗ?

 

 

ಸುದ್ದಿ ಕಣಜ.ಕಾಂ | DISTRICT | KSDL
ಶಿವಮೊಗ್ಗ: ಕರ್ನಾಟಕ ಸೋಪ್ಸ್ ಅಂಡ್ ಡಿಟಜೆರ್ಂಟ್ ಲಿಮಿಟೆಡ್(karnataka soaps and detergents limited)ನಿಂದ ನಗರದಲ್ಲಿ ಶೀಘ್ರದಲ್ಲೇ ಮಿನರಲ್ ವಾಟರ್ ಘಟಕ (Mineral water plant) ಸ್ಥಾಪನೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (madal virupakshappa) ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶ್ರೀಗಂಧ ಕೋಟೆಯಲ್ಲಿ ಕೆಎಸ್‍ಡಿಎಲ್ ಸಂಸ್ಥೆಯ ಅಗರಬತ್ತಿ ಫ್ಯಾಕ್ಟರಿ ಕಾರ್ಯ ನಿರ್ವಹಿಸದೇ ಸ್ಥಗಿತವಾಗಿತ್ತು. ಅಧಿಕಾರ ವಹಿಸಿಕೊಂಡ ಬಳಿಕ ಅಗರಬತ್ತಿ ತಯಾರಿಕೆಯನ್ನು ಪುನರರಾಂಭಿಸಲಾಗುತ್ತಿದೆ. ಪಾಳು ಬಿದ್ದಂತಾಗಿದ್ದ ಜಾಗವನ್ನು ಪುನಶ್ಚೇತನಗೊಳಿಸಲಾಗಿದೆ ಎಂದರು.

READ | ನಾಳೆಯಿಂದ ಎರಡು ದಿನ ಈ ರಸ್ತೆಗಳಲ್ಲಿ ವಾಹನ ಸಂಚಾರ ಕ್ಲೋಸ್, ನಾಲ್ಕು ಪರ್ಯಾಯ ಮಾರ್ಗದ ವ್ಯವಸ್ಥೆ

ನಿತ್ಯ 60 ಬಾಕ್ಸ್ ಅಗರಬತ್ತಿ ಉತ್ಪಾದನೆ
ನಿತ್ಯ 60 ಬಾಕ್ಸ್ ಅಗರಬತ್ತಿ ಉತ್ಪಾದನೆ ಮಾಡಲಾಗುತ್ತಿದೆ. 40 ರಿಂದ 50 ಜನರಿಗೆ ಉದ್ಯೋಗ ನೀಡಲಾಗಿದೆ. ಶೀಘ್ರದಲ್ಲೇ ಸಂಸ್ಥೆಯಿಂದ ಮಿನರಲ್ ವಾಟರ್ ಘಟಕ ಸ್ಥಾಪಿಸಲಾಗುವುದು. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀಗಂಧ ಬೆಳೆಯಲು ರೈತರನ್ನು ಪ್ರೇರೇಪಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲು ಅವಕಾಶವಿದೆ. ಅದಕ್ಕಾಗಿ ಸಂಸ್ಥೆಯ ವತಿಯಿಂದ ಗನ್‍ಮ್ಯಾನ್‍ಗಳನ್ನೂ ಕೂಡಾ ನೀಡಲಾಗುವುದು. ಬ್ಯಾಂಕಿನ ನೆರವು ಪಡೆಯುವ ಮೂಲಕ ತಂತಿ ಬೇಲಿಯ ಸೌಲಭ್ಯವನ್ನು ಕಲ್ಪಿಸಲಾಗುವುದು. 1 ಶ್ರೀಗಂಧದ ಮರ 20 ವರ್ಷ ಬೆಳೆದಿದ್ದರೆ ಅದಕ್ಕೆ 3 ಲಕ್ಷ ರೂಪಾಯಿಯಂತೆ ಹಣ ನೀಡಿ ಕೊಂಡುಕೊಳ್ಳಲಾಗುವುದು ಎಂದರು.

126 ಕೋಟಿ ರೂ. ಲಾಭ

ಸಂಸ್ಥೆಯು ಪ್ರಸಕ್ತ ವರ್ಷ 126 ಕೋಟಿ ರೂಪಾಯಿ ಲಾಭ ಗಳಿಸಿದೆ. ಇದರಲ್ಲಿ 22 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಡಿವಿಡೆಂಟ್ ನೀಡಿದೆ. 3 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ ಎಂದು ಮಾಹಿತಿ ನೀಡಿದರು.

https://www.suddikanaja.com/2021/06/01/water-sports-in-talakalale/

error: Content is protected !!