One click many news | ಪೊಲೀಸರೊಂದಿಗೆ ಕೆಲಸ ಮಾಡಲು ಸಾರ್ವಜನಿಕರಿಗೂ ಅವಕಾಶ, ಕೂಡಲೇ ಹೆಸರು‌ ನೋಂದಾಯಿಸಿ

one click many news 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮುಂಬರುವ ಗಣೇಶ ಹಬ್ಬದ (Ganesh Festival) ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ ಸಾರ್ವಜನಿಕರು/ ಸಂಘ ಸಂಸ್ಥೆಯವರು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಹೆಸರು ಮತ್ತು ವಿಳಾಸದ ವಿವರವನ್ನು ಸೆಪ್ಟೆಂಬರ್ 5ರೊಳಗೆ ನೋಂದಾಯಿಸಿಕೊಳ್ಳಲು ಪೊಲೀಸರು ಕೋರಿದ್ದಾರೆ.

VIDEO REPORT | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಲ್ಯಾಂಡ್, ಹೇಗಿತ್ತು ಮೊದಲ ಫ್ಲೈಟ್ ಲ್ಯಾಂಡಿಂಗ್ ದೃಶ್ಯ?

ನೋಂದಣಿ ನವೀಕರಿಸಲು ಸೂಚನೆ

SHIMOGA: ಸಹಕಾರ ಇಲಾಖೆಯು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960 ಕಲಂ 13 ರಂತೆ ನೋಂದಣಿಯಾದ ಪ್ರತಿಯೊಂದು ಸಂಘ-ಸಂಸ್ಥೆಗಳು ಪ್ರತಿವರ್ಷ ನವೀಕರಣಗೊಳಿಸಿಕೊಳ್ಳುವುದು ಕಡ್ಡಾಯ. ಅನೇಕ ಸಂಘ-ಸಂಸ್ಥೆಗಳು 5 ವರ್ಷಗಳಿಗೂ ಮೇಲ್ಪಟ್ಟು ನವೀಕರಿಸದೇ ಇರುವುದರಿಂದ ಇಂತಹ ಸಂಘ-ಸಂಸ್ಥೆಗಳ ಹಿತದೃಷ್ಠಿಯಿಂದ ಕೂಡಲೇ ಪ್ರತಿ ವರ್ಷಕ್ಕೆ ₹3,000 ದಂಡ ಪಾವತಿಸಿ ನವೀಕರಿಸಿಕೊಳ್ಳುವುದು.
ಇಂತಹ ಸಂಘ ಸಂಸ್ಥೆಗಳು ಜೂನ್ 30, 2024 ರೊಳಗಾಗಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ಸೂಕ್ತ ದಾಖಲೆ ಮತ್ತು ಮಾಹಿತಿಗಳೊಂದಿಗೆ ಫೈಲಿಂಗ್ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

READ | ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಸರ್ಕಾರ ಮಹತ್ವ ಘೋಷಣೆ, ಏನದು?

ಕಾಣೆಯಾದವರ ಬಗ್ಗೆ ಮಾಹಿತಿ ನೀಡಲು ಮನವಿ

SAGAR: ಸಾಗರ ಟೌನ್ 4ನೇ ಕ್ರಾಸ್ ಎಸ್‍ಎನ್ ನಗರ ವಾಸಿ ಸ್ವಾಮಿ ಎಂಬ 80 ವರ್ಷದ ವ್ಯಕ್ತಿ 2017 ರ ಡಿಸೆಂಬರ್ 5 ರಂದು ಮನೆಯಿಂದ ಹೋದವರು ಈವರೆಗೂ ವಾಪಸ್ ಬಂದಿಲ್ಲ. ಈತ 168 ಮೀ. ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ನೀಲಿ ಶರ್ಟ್ ಮತ್ತು ಗೆರೆ ಇರುವ ಪಂಚೆ ಧರಿಸಿರುತ್ತಾರೆ.
ಇನ್ನೊಂದು ಪ್ರಕರಣದಲ್ಲಿ ಸಾಗರ ಟೌನ್ ಬಸವನಹೊಳೆ ಜಂಬಗಾರು ವಾಸಿ ದುರ್ಗಪ್ಪ ಎಂಬ 65 ವರ್ಷದ ವ್ಯಕ್ತಿ 2022 ರ ಅಕ್ಟೋಬರ್ 11 ರಂದು ಮನೆಯಿಂದ ಹೋದವರು ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 175 ಮೀ. ಎತ್ತರ, ಗೋಧಿ ಮೈಬಣ್ಣ, ಉದ್ದ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಅಂಗಿ ಪಂಚೆ ಧರಿಸಿರುತ್ತಾರೆ.
ಈ ಇಬ್ಬರು ವ್ಯಕ್ತಿಗಳ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆ ದೂ.ಸಂ.: 08183-226067/ 9480803360, ಎಎಸ್‍ಪಿ ಸಾಗರ 08183-226082, ಶಿವಮೊಗ್ಗ 08182-262400 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Malnad agriculture | ಮಲೆನಾಡಿನ ಬೆಳೆಗಳ ಮೇಲೆ ಬರದ ಛಾಯೆ, ಅನ್ನದ ಬಟ್ಟಲಿಗೆ ಬೆಂಕಿ!

error: Content is protected !!