Railway Ticket | ಶಿವಮೊಗ್ಗದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕಿಂಗ್ ಗ್ಯಾಂಗ್ ಪತ್ತೆ, ಮೂವರು ಅರೆಸ್ಟ್, ಎಲ್ಲೆಲ್ಲಿ ದಾಳಿ?

Train

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರೈಲ್ವೆ ಪ್ರಯಾಣಿಕರಿಗೆ (Railway Passengers) ಆಗುತ್ತಿರುವ ಅನಾನುಕೂಲತೆಗಳು ಮತ್ತು ಶೋಷಣೆಯನ್ನು ಗಮನದಲ್ಲಿರಿಸಿಕೊಂಡು ಮೈಸೂರು ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ವತಿಯಿಂದ ತಾಳಗುಪ್ಪ(Talaguppa)ದಲ್ಲಿ ಅನಧಿಕೃತ ರೈಲ್ವೆ ಟಿಕೆಟ್ ಬುಕ್ (Railway ticket booking) ಮಾಡುವ ಟ್ರಾವೆಲ್ ಏಜೆಂಟ್‍(travel agent)ರ ವಿರುದ್ಧ ದಾಳಿ ನಡೆಸಿ 3 ಆರೋಪಿಗಳನ್ನು ಬಂಧಿಸಲಾಗಿದೆ.

VIDEO REPORT

READ | ಲಿಫ್ಟ್ ನೀಡುವುದಾಗಿ ಕರೆದೊಯ್ದು ದರೋಡೆ, 24 ಗಂಟೆಯಲ್ಲೇ ಆರೋಪಿಗಳು ಅಂದರ್

ಮೂರು ಕಡೆ ದಾ‌ಳಿ‌‌‌ ಮೂವರ ಬಂಧನ
ವಿಶೇಷ ದಾಳಿ ವೇಳೆ ತಾಳಗುಪ್ಪದ 3 ಜನ ಗಣೇಶ್ ರಾಮ್ ನಾಯಕ್(31) (ಶ್ರೀ ರೇಣುಕಾ ಸೈಬರ್ ಸೆಂಟರ್), ರೇವಣ್ಣಪ್ಪ(36) (ಶ್ರೀ ಸಂವಹನ ಮೊಬೈಲ್ ಮಾರಾಟ) ಮತ್ತು ಪ್ರಶಾಂತ್ ಹೆಗಡೆ(46) (ಆರ್ಯ ಸೈಬರ್ ವಲಯ) ಇವರನ್ನು ಬಂಧಿಸಲಾಗಿದೆ.

one click many news logo

ರೈಲ್ವೆ ಪ್ರಯಾಣಿಕರನ್ನು ಗುರಿಯಾಗಿಸುವ ಅನಧಿಕೃತ ಟ್ರಾವೆಲ್ ಏಜೆಂಟ್‍ಗಳ ವಿರುದ್ಧ ಇಂತಹ ಬೃಹತ್ ದಾಳಿಗಳನ್ನು ಮುಂದುವರಿಸಲಾಗುವುದು. ಪ್ರಯಾಣಿಕರಿಗೆ ಆಗುವ ಅನಾನುಕೂಲದಿಂದ ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುವುದು. ಇಂತಹ ಟ್ರಾವೆಲ್ ಏಜೆಂಟ್‍ಗಳೊಂದಿಗೆ ಜಾಗರೂಕರಾಗಿರಿ ಮತ್ತು ಅವರ ದುರಾಸೆಗೆ ಬೀಳದಂತೆ ಪ್ರಯಾಣಿಕರು ಎಚ್ಚರ ವಹಿಸಬೇಕು.
ಶಿಲ್ಪಿ ಅಗರ್ವಾಲ್ (ಐಆರ್‍ಎಎಸ್), ಮೈಸೂರು ರೈಲ್ವೆ ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್

ಅನಾನುಕೂಲತೆ ತಪ್ಪಿಸಲು ದಾಳಿ
ಮುಂಬರುವ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಪ್ರಯಾಣಿಕರಿಗೆ ಆಗುವ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಮೈಸೂರು ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ವತಿಯಿಂದ ಅನಧಿಕೃತ ರೈಲ್ವೆ ಟಿಕೆಟ್ ಬುಕ್ ಮಾಡುವ ಟ್ರಾವೆಲ್ ಏಜೆಂಟ್ ವಿರುದ್ಧ ಯೋಜನೆ ರೂಪಿಸಿದೆ.

READ | ಗೌರಿ-ಗಣೇಶ, ಈದ್ ಮಿಲಾದ್ ಹಿನ್ನೆಲೆ ಪೊಲೀಸರ ಪ್ರಮುಖ ಸಭೆ, ಸಾರ್ವಜನಿಕರಿಗೆ ಎಸ್.ಪಿ ನೀಡಿದ 10 ಸೂಚನೆಗಳೇನು?

ಆರ್‍.ಫಿಎಫ್ ಮೈಸೂರು ವಿಭಾಗೀಯ ಭದ್ರತಾ ಆಯುಕ್ತ (ಐಆರ್‍.ಪಿಎಫ್‍ಎಸ್‌) ಜೆ.ಕೆ. ಶರ್ಮಾ ನಿರ್ದೇಶನದಂತೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ತಂಡದಲ್ಲಿ ಅಪರಾಧ ನಿರೀಕ್ಷಕ ಎಂ.ನಿಶಾದ್, ಸಬ್ ಇನ್ಸ್‍ಪೆಕ್ಟರ್ ಬಿ.ಚಂದ್ರಶೇಖರ್, ಸಹಾಯಕ ಸಬ್ ಇನ್ಸ್‍ಪೆಕ್ಟರ್‍ ಗಳಾದ ವೆಂಕಟೇಶ್, ಈಶ್ವರ್ ರಾವ್, ಹೆಡ್ ಕಾನ್‍ಸ್ಟೆಬಲ್ ಡಿ.ಚೇತನ್ ಮತ್ತು ಸಿಬ್ಬಂದಿ ವತಿಯಿಂದ ಶಿವಮೊಗ್ಗದ ವ್ಯಾಪ್ತಿಯಲ್ಲಿ ಬೃಹತ್ ದಾಳಿಗಳನ್ನು ಯೋಜಿಸಿ ಕಾರ್ಯಗತಗೊಳಿಸಲಾಯಿತು.
ಅನಧಿಕೃತ ಟಿಕೆಟ್ ಬುಕಿಂಗ್ ಗ್ಯಾಂಗ್
3 ಸೈಬರ್ ವಲಯಗಳ ಮೇಲೆ ದಾಳಿ ನಡೆಸಿ ಅನಧಿಕೃತ ಟಿಕೆಟಿಂಗ್ ಬುಕ್ ಮಾಡುವ ಗ್ಯಾಂಗ್ ಗಳನ್ನು ಪತ್ತೆ ಹಚ್ಚಲಾಯಿತು. ಪ್ರಯಾಣಿಕರಿಗೆ ವಿಪರೀತ ಶುಲ್ಕ ವಿಧಿಸುವ ಮೂಲಕ ಇ-ಟಿಕೆಟ್‍ಗಳನ್ನು ಉತ್ಪಾದಿಸಲು ಬಳಸುತ್ತಿದ್ದ ಒಟ್ಟು ₹2.5 ಲಕ್ಷ ಮೌಲ್ಯದ ರೈಲ್ವೆ ಇ-ಟಿಕೆಟ್‍ಗಳು ಮತ್ತು ₹1.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್, ಪ್ರಿಂಟರ್, ಮೊಬೈಲ್ ಫೋನ್‍ಗಳಂತಹ ಗ್ಯಾಜೆಟ್‍ಗಳನ್ನು ವಶಪಡಿಸಿಕೊಳ್ಳಲಾಯಿತು. ಹಬ್ಬ ಹರಿದಿನದಂತಹ ಒತ್ತಡದ ಸಮಯದಲ್ಲಿ ಬೇರೆ ಬೇರೆ ಪೋನ್ ಸಂಖ್ಯೆಗಳಿಗೆ ಲಿಂಕ್ ಆದ ಬಹುವ್ಯಕ್ತಿ ಐಡಿಗಳನ್ನು ಸೃಜಿಸುವ ಮತ್ತು ಅನಧಿಕೃತವಾಗಿ ಇ-ಟಿಕೆಟ್ ಜನರೇಟ್ ಮಾಡಿ ಜನರಿಂದ ಹೆಚ್ಚಿನ ಕಮಿಷನ್‍ನನ್ನು ಚಾರ್ಜ್ ಮಾಡುವುದು ಈ ಗ್ಯಾಂಗ್‍ಗಳ ಕೆಲಸವಾಗಿದೆ.

Gruha Jyothi scheme | ಗೃಹ ಜ್ಯೋತಿ ಯೋಜನೆಗೆ ನೋಂದಣಿ ಹೇಗೆ, ಯಾರಿಗೆ ಯೋಜನೆ ಲಾಭ? ಏನೆಲ್ಲ ಷರತ್ತುಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!