Hindu Mahasabha | ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ತಿಳಿಯಲೇಬೇಕಾದ 8 ಅಂಶಗಳು

Hindu mahasabha ganapathi procession 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹಿಂದೂ ಮಹಾಸಭಾ ಗಣಪತಿ (Hindu Mahasabha) ರಾಜಬೀದಿ ಉತ್ಸವವೆಂದರೆ ಎಲ್ಲಿಲ್ಲದ ಕ್ರೇಜ್. ಗಣಪತಿ ಪ್ರತಿಷ್ಠಾಪನೆ ಆಗುವುದಕ್ಕಿಂತಲೂ ಮುಂಚೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುವುದಲ್ಲದೇ ಇತ್ತೀಚೆಗಂತೂ ಥೀಮ್ ಸಾಂಗ್ ಗಳನ್ನು ಬಿಡುಗಡೆ ಮಾಡುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಈ ರಾಜಬೀದಿ ಉತ್ಸವಕ್ಕೆ ಈ ವರ್ಷ ದಿನಾಂಕ ನಿಗದಿಯಾಗಿದ್ದು, ಇದೇ ತಿಂಗಳು 28ರಂದು ನಡೆಯಲಿದೆ.
ಈ ಗಣಪತಿಯ ಬಗ್ಗೆ ಏಕೆ ಇಷ್ಟೊಂದು ಕ್ರೇಜ್? ಇದರ ಬಗ್ಗೆ ತಿಳಿದುಕೊಳ್ಳಬೇಕಾದರೆ ಕೆಳಗಿನ ಅಂಶಗಳನ್ನು ಓದಿ.

READ | ಹಿಂದೂ ಮಹಾಸಭಾ ಗಣೇಶನ ಈ ಸಲದ ಥೀಮ್ ಏನು? ವೈರಲ್ ಆಯ್ತು ವಿಡಿಯೋ

Hindu Mahasabha Ganapathi savarkar

  1. 1939ರ ಸುಮಾರಿಗೆ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಆರಂಭಿಸಲಾಯಿತು. 1941ರಲ್ಲಿ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಆ ಸಮ್ಮೇಳನದಲ್ಲಿ ವೀರ ಸಾವರ್ಕರ್ ಅವರು ಶಿವಮೊಗ್ಗಕ್ಕೆ ಬಂದಿದ್ದರು. ಆಗ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವಂತೆ ತಿಳಿಸಿದ್ದರು.
  2. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವದ ಆಚರಣೆಗಾಗಿಯೇ ಛತ್ರಪತಿ ಶಿವಾಜಿ ಯುವಕರ ಸಂಘ ಹುಟ್ಟಿಕೊಂಡಿತ್ತು.
  3. 1945ರಲ್ಲಿ ಸಾವರ್ಕರ್ ಅವರ ಅನುಮತಿಯೊಂದಿಗೆ ತುಂಗಾ ನದಿ ತೀರದ ಕೋಟೆ ಭೀಮೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಧ್ಯುಕ್ತ ಚಾಲನೆ ನೀಡಲಾಯಿತು.
  4. ಯಾವುದೇ ದೇವರ ಮೆರವಣಿಗೆ ವೇಳೆ ಈಗಿನ ಗಾಂಧಿ ಬಜಾರಿನಲ್ಲಿ ಅನ್ಯಧರ್ಮೀಯರ ಮಂಗಳವಾದ್ಯ ನುಡಿಸುವಂತಿರಲಿಲ್ಲ. ಹೀಗಾಗಿ, 1945 ಮತ್ತು 1946ರಲ್ಲಿ ಮೆರವಣಿಗೆ ವೇಳೆ ಮಂಗಳವಾದ್ಯ ಮೊಳಗಿಸುತ್ತಿರಲಿಲ್ಲ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಹಳೇ ಪ್ರತೀತಿಯನ್ನು ಮುಂದುವರಿಸದೇ ಮೊದಲ ಸಲ ಮಂಗಳವಾದ್ಯ ಮೊಳಗಿಸಲಾಗಿತ್ತು. ಆಗ ಸಂಭವಿಸಿದ ಗಲಾಟೆಯಲ್ಲಿ ಹಿಂದೂ ರಾಷ್ಟ್ರದಳ ಸದಸ್ಯರಾಗಿದ್ದ ಶಿವಮೂರ್ತಿ ಅವರ ಹತ್ಯೆಯಾಯಿತು. (ಈ ಹಿನ್ನೆಲೆಯಲ್ಲಿ ನೆಹರೂ ಕ್ರೀಡಾಂಗಣ ಸಮೀಪದ ವೃತ್ತಕ್ಕೆ ಶಿವಮೂರ್ತಿ ನಾಮಕರಣ ಮಾಡಲಾಯಿತು)
  5. 1977ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೋಟೆ ಭೀಮೇಶ್ವರ ದೇವಾಲಯ ಆವರಣದಲ್ಲಿ ಗಣಪತಿ ಉತ್ಸವಕ್ಕೆ ಅವಕಾಶ ನೀಡಿರಲಿಲ್ಲ. ಈ ಸಂದರ್ಭದಲ್ಲಿ ಮಾರಿ ಗದ್ದುಗೆ ಆವರಣ, ಆನಂತರ ಕೋಟೆ ಪೊಲೀಸ್ ಠಾಣೆಯ ಎದುರಿನ ಸೀತಾರಾಮಯ್ಯ ಕಾಂಪೌಂಡ್ ಆವರಣದಲ್ಲಿ ಗಣಪತಿಯನ್ನು ಅನುಷ್ಠಾನಗೊಳಿಸಲಾಯಿತು. ಎರಡ್ಮೂರು ಸಂದರ್ಭಗಳ ಹೊರತು ಹಿಂದೂ ಮಹಾಸಭಾ ಗಣಪತಿ ಉತ್ಸವ ಶಾಂತಿಯುತವಾಗಿ ನೆರವೇರಿದೆ.
  6. ಗಲಭೆ ಬಳಿಕ ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ವಿಚಾರಣೆ ನಡೆದು 1950ರಲ್ಲಿ ಐತಿಹಾಸಿಕ ತೀರ್ಪೊಂದು ಹೊರಬಿತ್ತು. ಅದರಂತೆ, ಮಂಗಳವಾದ್ಯಕ್ಕೆ ಅವಕಾಶ ನೀಡಲಾಯಿತು.
  7. 1994ರಲ್ಲಿ ಸಂಭವಿಸಿದ ಗಲಭೆಯಿಂದಾಗಿ ಗಣಪತಿ ಪ್ರತಿಷ್ಠಾಪನೆ ಹಾಗೂ ಉತ್ಸವವನ್ನು 1995ರಿಂದ 2002ರವರೆಗೆ ಏಳು ವರ್ಷಗಳ ಕಾಲ ಹಿಂದೂ ಮಹಾಸಭಾ ಸ್ವಯಂ ಪ್ರೇರಣೆಯಿಂದ ನಿಲ್ಲಿಸಲಾಯಿತು.
  8. 2003ರಲ್ಲಿ ಹಿಂದೂ ಮಹಾಸಭಾ- ಹಿಂದೂ ಸಂಘಟನಾ ಮಹಾಮಂಡಳಿಯಾಗಿ ರೂಪಾಂತರಗೊಂಡಿತು.

Hindu mahasabha ganesha 3

error: Content is protected !!