ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರತಿ ವರ್ಷ ಒಂದಿಲ್ಲೊಂದು ಥೀಮ್ ಮೂಲಕ ಗಮನ ಸೆಳೆಯುವ ಹಿಂದೂ ಸಂಘಟನೆಗಳ ಮಹಾಮಂಡಳದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಈ ಸಲ ಯಾವ ಥೀಮ್ ನೀಡಬಹುದು ಎಂಬ ನಿರೀಕ್ಷೆಯಲ್ಲಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಿದ್ಧಪಡಿಸಲಾಗುತ್ತಿರುವ ಮೂರ್ತಿಗಳಿವೆ. ಪೂರ್ಣ ವಿಡಿಯೋ ಶೀಘ್ರವೇ ರಿಲೀಸ್ ಮಾಡುವುದಾಗಿಯೂ ಹೇಳಲಾಗಿದೆ.
READ | ರಾತ್ರೋರಾತ್ರಿ ಸರಣಿ ಕಳವು ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್, ಎಲ್ಲೆಲ್ಲಿ ಕನ್ನ?
ಯಾವ ವರ್ಷ ಏನಿತ್ತು ಥೀಮ್?
2018ರಲ್ಲಿ ರಾಮಮಂದಿರ, 20119ರಲ್ಲಿ ಸಿಂಹಾಸನಾರೂಢ ಶಿವಾಜಿ ಪ್ರತಿಮೆ, 2022ರಲ್ಲಿ ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಯುದ್ಧದಲ್ಲಿ ಮಾರ್ಗದರ್ಶನ ಮಾಡುತ್ತಿದ್ದ ಸನ್ನಿವೇಶಗಳ ಥೀಮ್ ಮಾಡಲಾಗಿತ್ತು. ಇದಕ್ಕೆ ಆಕರ್ಷಕ ಕಲಾಕೃತಿಗಳನ್ನು ಸಿದ್ಧಪಡಿಸಿ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿತ್ತು. ಜತೆಗೆ, ನಗರದುದ್ದಕ್ಕೂ ಫ್ಲೆಕ್ಸ್, ಮೂರ್ತಿಗಳು ಕಣ್ಮನ ಸೆಳೆಯುತ್ತಿದ್ದವು. 2023ರ ಗಣೇಶ ಹಬ್ಬದಲ್ಲಿ “ಈ ಸಲ ಬರಿ ಪ್ರತಿಮೆ ಮಾತ್ರ ಅಲ್ಲ, ಜೊತೆಗೆ ಸ್ವಲ್ಪ ಆಕ್ಷನ್ ಕೂಡ ಇರುತ್ತದೆ” ಎಂದು ಬರೆದು ಹನುಮಂತನ ಚಿತ್ರವನ್ನು ಹಾಕಲಾಗಿದೆ.
ಇದು ಒಂದೆಡೆಯಾದರೆ, ವಿಡಿಯೋ ತುಣಕುಗಳನ್ನು ರಿಲೀಸ್ ಮಾಡಲಾಗಿದ್ದು, ಅದರಲ್ಲಿ ಬೃಹತ್ ಬಿಲ್ಲು ಸೇರಿದಂತೆ ವಿವಿಧ ಕಲಾಕೃತಿಗಳಿವೆ. ಯಾವ ಥೀಮ್ ಆಕರ್ಷಣೆಯ ಕೇಂದ್ರವಾಗಲಿದೆ ಎಂಬ ಕೌತುಕ ಜನರೆದುರು ಇಡಲಾಗಿದೆ. ಸಾರ್ವಜನಿಕರಲ್ಲೂ ಕುತೂಹಲ ಸೃಷ್ಟಿಯಾಗಿದೆ. ಥೀಮ್ ಸಾಂಗ್ ಸಹ ಶೀಘ್ರವೇ ಬಿಡುಗಡೆ ಆಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಲಾಗಿದೆ.