Ganesh chaturthi | ಶಿವಮೊಗ್ಗದಲ್ಲಿ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೆಗೆ ಟ್ಯಾಂಕರ್, ಎಲ್ಲೆಲ್ಲಿ ವ್ಯವಸ್ಥೆ?

Ganesh in water

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಗೌರಿ(Gowri), ಗಣೇಶ (Ganesh) ಮೂರ್ತಿಗಳ ವಿಸರ್ಜನೆಗೆ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

READ | ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ತಿಳಿಯಲೇಬೇಕಾದ 8 ಅಂಶಗಳು

ಎಲ್ಲೆಲ್ಲಿ ವ್ಯವಸ್ಥೆ?

  • ಸೆ.18ರಂದು ನಿರ್ಮಲ ತುಂಗಾ ಅಭಿಯಾನ ತಂಡ ವತಿಯಿಂದ‌ ಸಂಜೆ 5.30 ಗಂಟೆಯಿಂದ ತಡರಾತ್ರಿವರೆಗೆ ನಗರದ ನೂರಡಿ ರಸ್ತೆ, ನಿರ್ಮಲ ನರ್ಸಿಂಗ್ ಹೋಂ ಪಕ್ಕ ತುಂಗಾ ಚಾನೆಲ್ ಪಕ್ಕದಲ್ಲಿ ಎರಡು ಟ್ಯಾಂಕರ್
  • ಪರ್ಯಾವರಣ ಸಂರಕ್ಷಣಾ ಗತಿವಿಧಿ ಮತ್ತು ವಾಸವಿ ಶಾಲೆ, ಕೋಟೆ ರಸ್ತೆ ಇವರ ವತಿಯಿಂದ ಕೋಟೆ ರಸ್ತೆಯಲ್ಲಿರುವ ವಾಸವಿ ಶಾಲಾ ಆವರಣದಲ್ಲಿ ವಿಶೇಷವಾಗಿ ನಿರ್ಮಿಸಲಾಗಿರುವ ಗೌರಿ, ಗಣೇಶ ವಿಸರ್ಜನಾ ಟ್ಯಾಂಕ್. ಸಂಜೆ 5.00 ರಿಂದ ತಡ ರಾತ್ರಿ ತನಕ. ಮಂಗಳವಾರವೂ ಈ ಸೌಲಭ್ಯ ಇರುತ್ತದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಸಂಚಾರಿ ಟ್ಯಾಂಕರ್ ವಾಹನದ ವ್ಯವಸ್ಥೆಯನ್ನು ಮಾಡಿರುತ್ತದೆ. ಈ ಸಂಚಾರಿ ಟ್ಯಾಂಕ್ ವಾಹನವು ಸಂಜೆ 6 ರಿಂದ 6.30 ರವರೆಗೆ ಹೊಸಮನೆ 5ನೇ ತಿರುವು, ಗಣಪತಿ ದೇವಸ್ಥಾನ ಹತ್ತಿರ. ಸಂಜೆ 6.45 ರಿಂದ 7.15 ರವರೆಗೆ: ಗೋಪಾಳ ಬಸ್ ಸ್ಟ್ಯಾಂಡ್. ರಾತ್ರಿ 7.30 ರಿಂದ 8 ರ ವರೆಗೆ: ಗೋಪಾಲಗೌಡ ಬಡಾವಣೆ ಇನ್ ಕಮ್ ಟ್ಯಾಕ್ಸ್ ಕಚೇರಿ ಹತ್ತಿರ. ರಾತ್ರಿ 8.15 ರಿಂದ 8.45 ರವರೆಗೆ: ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ, ರಾತ್ರಿ 9 ರಿಂದ 9.15 ರವರೆಗೆ ಕಾಶೀಪುರ ಬಸ್ ಸ್ಟ್ಯಾಂಡ್. ರಾತ್ರಿ 9.30 ರಿಂದ 10 ರವರೆಗೆ: ಚೌಡೇಶ್ವರಿ ದೇವಸ್ಥಾನದ ಹತ್ತಿರ, ಲಾಲ್ ಬಹಾದುರ್ ಶಾಸ್ತ್ರಿ ನಗರ.

error: Content is protected !!