Hindu Mahasabha Ganesh | 30 ಅಡಿ ಎತ್ತರದ ‘ಉಗ್ರ ನರಸಿಂಹ’ ವೀಕ್ಷಿಸಲು‌ ಜನವೋ ಜನ, ಶಿವಮೊಗ್ಗ ನಗರ ಕೇಸರಿಮಯ, ಈ‌‌ ಸಲದ‌ ಘೋಷಣೆ ಏನು?

Hindu mahasabha Ganesh

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗುರುವಾರ (ಸೆ.28) ಶಿವಮೊಗ್ಗ ಹಿಂದೂ ಮಹಾಸಭಾ ಗಣೇಶ (Hindu mahasabha Ganesh) ವಿಸರ್ಜನಾ ಪೂರ್ವ ಮೆರವಣಿಗೆಗೆ ಶಿವಮೊಗ್ಗ ನಗರ ಸಂಪೂರ್ಣ ಸಿದ್ಧಗೊಂಡಿದೆ. ನಗರದ ಬಹುತೇಕ ಎಲ್ಲ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ತೋರಣಗಳು, ಭಗವಾಧ್ವಜಗಳು, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.

Ganesh Narasimha
ಗಾಂಧಿ ಬಜಾರ್ ಪ್ರವೇಶ ದ್ವಾರದ ಅಲಂಕಾರ.

READ |  ಹಿಂದೂ ಮಹಾಸಭಾ ಗಣಪತಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ತಿಳಿಯಲೇಬೇಕಾದ ಎಂಟು ಅಂಶಗಳು

ಪ್ರವೇಶ ದ್ವಾರದಲ್ಲಿ 30 ಅಡಿ ಮೂರ್ತಿ
ಗಾಂಧಿ ಬಜಾರ್ ಕಣ್ಣು ಹಾಯಿಸಿದಷ್ಟು ದೂರ ಕೇಸರಿಮಯವಾಗಿದೆ. ಗಾಂಧಿ ಬಜಾರಿನ ಪ್ರಮುಖ ದ್ವಾರದಲ್ಲಿಯೇ ಗಮನಸೆಳೆಯುವ ಉಗ್ರ ನರಸಿಂಹನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಸುಮಾರು 30 ಅಡಿ ಎತ್ತರದ ಈ ಮೂರ್ತಿ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ.
ಪ್ರತಿ ವರ್ಷವೂ ಹಿಂದೂ ಸಂಘಟನೆಯ ಮಹಾ ಮಂಡಳಿಯ ವಿಶೇಷ ಅಲಂಕಾರಗಳನ್ನು ಇಲ್ಲಿ ಮಾಡುತ್ತಾ ಬಂದಿದೆ. ಕಳೆದ ಬಾರಿ ಗೀತೋಪದೇಶದ ಸ್ತಬ್ದ ಚಿತ್ರ ಮಾಡಲಾಗಿತ್ತು. ಈ‌ ಬಾರಿಯ ವಿಶೇಷವೆಂದರೆ ಇದು ಕೇವಲ ಸ್ತಬ್ಧ ಚಿತ್ರವಲ್ಲದೆ ರೋಬೋಟ್ ಮೂಲಕ ಇದನ್ನು ಚಲನಸ್ಥಿತಿಯಲ್ಲಿ ಇಡಲಾಗಿದೆ. ಈ ಮೂರ್ತಿಯು ನೋಡುಗರ ಗಮನ ಸೆಳೆಯುತ್ತಿದೆ. ಸುಮಾರು 20ಕ್ಕೂ ಹೆಚ್ಚು ಕಲಾವಿದರು 3 ತಿಂಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ‌‌‌.

Hindu mahasabha ganesha 3
ಈ ಹಿಂದಿನ ವರ್ಷಗಳ ಥೀಮ್ಸ್

ಈ ಸಲದ‌ ಅಲಂಕಾರ ವಿಶೇಷಗಳೇನು?

  • ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬಂಟಿಂಗ್ಸ್, ಕೇಸರಿ ತೋರಣಗಳ ಅಲಂಕಾರ
  • ಗಾಂಧಿಬಜಾರಿನ ಪ್ರಮುಖ ದ್ವಾರದಲ್ಲಿಯೇ ಗಮನಸೆಳೆಯುವ 30 ಅಡಿ ಎತ್ತರದ‌ ಉಗ್ರ ನರಸಿಂಹನ ಮೂರ್ತಿ
  • ಅಮೀರ್ ಅಹಮದ್ ವೃತ್ತದಲ್ಲಿ ಚಂದ್ರಯಾನ ರಾಕೆಟ್‌ ಪ್ರತಿಕೃತಿ ಸ್ಥಾಪನೆ
  • ನಗರದ ಆಯಕಟ್ಟಿನ ಸ್ಥಳಗಳಲ್ಲಿ ಆಂಜನೇಯ, ಛತ್ರಪತಿ‌ ಶಿವಾಜಿ ಪ್ರಮುಖ ಪ್ರತಿಮೆಗಳ ಪ್ರತಿಷ್ಠಾಪನೆ
  • ನೆಹರೂ ರಸ್ತೆಯಲ್ಲಿ ‌ಪರಶುರಾಮ, ಶ್ರೀರಾಮ ಮತ್ತು ಶ್ರೀಕೃಷ್ಣನ ಚಿತ್ರವಿರುವ ಕಮಾನು
  • ಅಶೋಕ ವೃತ್ತದಲ್ಲಿ ಜ್ಞಾನವ್ಯಾಪಿ ಮಂದಿರದ ಚಿತ್ರವಿರುವ ದ್ವಾರ ನಿರ್ಮಾಣ
HIndu mahasabha ganesh security
ಆರ್.ಎ.ಎಫ್, ಪೊಲೀಸರ ಪಥ ಸಂಚಲನ.

ಹಿಂದೂ ಧರ್ಮ ಉಳಿಯಬೇಕು ಎಂಬ ದೃಷ್ಟಿಯಿಂದ ಈ ಬಾರಿಯ ಗಣಪತಿ ಹಬ್ಬದಲ್ಲಿ ಹಿಂದೂ ಸಂಘಟನಾ ಕೇಸರಿ ಅಲಂಕಾರ ಸಮಿತಿಯು ವಿಶೇಷ ಅಲಂಕಾರಗಳನ್ನು ಮಾಡಿದೆ. ದುಷ್ಟ ಶಕ್ತಿಗಳು ಅಳಿಯಬೇಕು. ಶಿಷ್ಟ ಶಕ್ತಿಗಳು ಉಳಿಯಬೇಕು. ಹಿಂದೂ ಧರ್ಮ ಮೆರೆಯಬೇಕು ಎಂಬ ಉದ್ದೇಶದಿಂದಲೇ ಈ ಬಾರಿ ಇಡೀ ನಗರದಲ್ಲಿ ಕೇಸರಿ ಅಲಂಕಾರವನ್ನು ಮಾಡಲಾಗಿದೆ. ಜೊತೆಗೆ ಗಾಂಧಿಬಜಾರಿನಲ್ಲಿ ಉಗ್ರ ನರಸಿಂಹನ ವಿಶೇಷ ಮೂರ್ತಿಯನ್ನು ನಿರ್ಮಿಸಲಾಗಿದೆ. ಚಂದ್ರಯಾನದ ರಾಕೆಟ್ ಪ್ರತಿಕೃತಿ ನಿರ್ಮಿಸಲಾಗಿದೆ. ಹಿಂದೂ ಕಾರ್ಯಕರ್ತರು ಹಗಲು- ರಾತ್ರಿ ಶ್ರಮಪಟ್ಟು ಬಂಟಿಂಗ್ಸ್, ಭಗವಾಧ್ವಜ, ಕೇಸರಿ ತೋರಣ ನಿರ್ಮಿಸಿದ್ದಾರೆ. ಎಲ್ಲ ಹಿಂದೂ ಕಾರ್ಯಕರ್ತರಿಗೆ ಅಭಿನಂದನೆಗಳು. ಹಿಂದೂಗಳೆಲ್ಲರೂ ಈ ಹಬ್ಬದಲ್ಲಿ ಪಾಲ್ಗೊಂಡು ಮೆರವಣಿಗೆ ಯಶಸ್ವಿಗೊಳಿಸಬೇಕು.
ದೀನದಯಾಳ್, ವಿಶ್ವ ಹಿಂದೂ ಪರಿಷತ್ ಪ್ರಮುಖ

ಉಗ್ರ ನರಸಿಂಹನ ವೀಕ್ಷಿಸಲು ಜನವೋ ಜನ
ಮೂವತ್ತು ಅಡಿ ಎತ್ತರದ ಉಗ್ರ ನರಸಿಂಹನ‌ನ್ನು ವೀಕ್ಷಿಸಿ ಕಣ್ತುಂಬಿಕೊಳ್ಳಲು ಸಾವಿರಾರು ಜನ ಆಗಮಿಸುತ್ತಿದ್ದಾರೆ. ತಡರಾತ್ರಿವರೆಗೂ ಜನ ಬಂದು ನರಸಿಂಹ ಮೂರ್ತಿಯ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ದಂಪತಿ ಕುಟುಂಬ ಸಹಿತ ಬಂದು ಫೋಟೊ‌ ತೆಗೆಸಿಕೊಂಡರು.‌ಇದು ಮಕ್ಕಳ‌ ಮನಸ್ಸನ್ನು ಗೆದ್ದಿದೆ.
ಗೋಪಿ ವೃತ್ತದಲ್ಲಿ ಡಿಜೆಗೋಸ್ಕರ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ‌ ಸಲ‌ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಗಾಂಧಿ‌ಬಜಾರ್ ಪ್ರವೇಶ ದ್ವಾರದಲ್ಲಿ ‘ಜಗವ ಗೆಲ್ಲುವ ಬಲ’ ಎಂದು ಬರೆಯಲಾಗಿದೆ. ಕಳೆದ‌ ಸಲ ‘ಸಂಭವಾಮಿ ಯುಗೇ ಯುಗೇ’ ಎಂದು‌ ಬರೆಸಲಾಗಿತ್ತು.

Book My HSRP | ಎಚ್.ಎಸ್.ಆರ್.ಪಿಗೆ ಅರ್ಜಿ ಸಲ್ಲಿಕೆ ಹೇಗೆ, ಏನಿದು ಅತಿ ಸುರಕ್ಷಿತ ನೋಂದಣಿ ಫಲಕ? ಇಲ್ಲಿದೆ ವಿವರ

error: Content is protected !!