Shimoga airport | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಶೀಘ್ರ ರಾತ್ರಿ ವಿಮಾನ ಸಂಚಾರ ಆರಂಭ, ಏನಿದರ ಪ್ರಯೋಜನ?

night land flight

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿಗೆ ಮತ್ತೊಂದು ಗುಡ್ ನ್ಯೂಸ್. ಶಿವಮೊಗ್ಗ ವಿಮಾನ ನಿಲ್ದಾಣ(shimoga airport)ದಿಂದ ಶೀಘ್ರವೇ ರಾತ್ರಿ ವಿಮಾನ ಸಂಚಾರ ಆರಂಭವಾಗಲಿದೆ. ಅದಕ್ಕಾಗಿ ಎಲ್ಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

VIDEO REPORT

READ | ಶಿವಮೊಗ್ಗದಿಂದ ಇನ್ನೂ ಮೂರು ಮಹಾನಗರಗಳಿಗೆ ಫ್ಲೈಟ್ ಸೇವೆ, ಯಾವಾಗಿಂದ ಆರಂಭ?

ನೈಟ್ ಲ್ಯಾಂಡಿಂಗ್’ಗೆ‌ ತೊಡಕು ನಿವಾರಣೆ
ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಯೋಜನೆಯಂತೆ ಈಗಾಗಲೇ ಕಾಮಗಾರಿಗಳು ಭರದಿಂದ ಸಾಗಿವೆ. ಹೀಗಾಗಿ, ಸಂಸದ ಬಿ.ವೈ.ರಾಘವೇಂದ್ರ ಅವರು ವಿಮಾನಯಾನ ಸಚಿವಾಲಯಕ್ಕೆ ಕೋರಿರುವಂತೆ ಇನ್ನಷ್ಟು ಮಾರ್ಗಗಳಿಗೆ ವಿಮಾನ ಹಾರಾಟ ಆರಂಭವಾಗಲಿದೆ.
ವಿಮಾನ ನಿಲ್ದಾಣದ ಮೂಲ ಯೋಜನೆಯಲ್ಲಿ ನೈಟ್ ಲ್ಯಾಂಡಿಂಗ್ (night landing) ಸೌಲಭ್ಯದ ಬಗ್ಗೆ ಪ್ರಸ್ತಾಪ ಇರಲಿಲ್ಲ. ಹಲವು ಎಡರುತೊಡರುಗಳನ್ನು ದಾಟಿ ಯಡಿಯೂರಪ್ಪ ‌ಸಿಎಂ ಆದ ಬಳಿಕ ಕಾಮಗಾರಿಗೆ ಮರು‌ಜೀವ ಸಿಕ್ಕಿತ್ತು. ಆಗ ನೈಟ್ ಲ್ಯಾಂಡಿಂಗ್ ಸಹ ಸೇರಿಸಲಾಯಿತು. ಆದರೆ, ಅದಕ್ಕೆ ಅಗತ್ಯವಿರುವ ಇನ್ನಷ್ಟು ಜಾಗ ಬೇಕಿತ್ತು. ಅಕೇಶಿಯಾ ಮತ್ತು ನೀಲಗಿರಿ ಬೆಳಸಿದ್ದ ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದ ಭೂಮಿಯನ್ನು ಪಡೆದು ಒಪ್ಪಿಗೆಯ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಎರಡನೇ ಹಂತದ ಒಪ್ಪಿಗೆಯೂ ಸಿಕ್ಕಿದ ಬಳಿಕ ಮರ ಕಡಿತಲೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ರನ್ ವೇ ಕಾಮಗಾರಿ ಮುಗಿಯಲಿದ್ದು, ರಾತ್ರಿ ಹೊತ್ತಲ್ಲೂ ವಿಮಾನಗಳು ಹಾರಾಟ ಆರಂಭಿಸಲಿವೆ.

error: Content is protected !!