Arecanut | ಅಡಿಕೆಗೆ ಕನ್ನ ಹಾಕಿದ್ದ ಗ್ಯಾಂಗ್ ಅರೆಸ್ಟ್, ವಶಕ್ಕೆ ಪಡೆದ ಅಡಿಕೆ‌‌‌ ಎಷ್ಟು?

adike

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGAR: ಅಡಿಕೆ (arecanut) ಕಳವು ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
ಹೊಸನಗರ ತಾಲೂಕಿನ ಮಾವಿನಕೊಪ್ಪ ಗ್ರಾಮದ ರವಿರಾಜ(32), ಹೊಸನಗರ ಟೌನ್ ನಿವಾಸಿ ನಾಗರಾಜ್ (31), ಮಾವಿನಕೊಪ್ಪದ ರಾಜೇಶ್ (40) ಎಂಬುವವರನ್ನು ಬಂಧಿಸಿ, ಆರೋಪಿತರಿಂದ ಅಂದಾಜು ₹1.33 ಲಕ್ಷ ಮೌಲ್ಯದ 2 ಕ್ವಿಂಟಾಲ್ 72 ಕೆಜಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 1 ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

READ | ಶಿವಮೊಗ್ಗದಿಂದ ಹೈದ್ರಾಬಾದ್, ಗೋವಾ, ತಿರುಪತಿಗೆ ವಿಮಾನ ಹಾರಾಟಕ್ಕೆ ಹೊಸ ಡೇಟ್ ಘೋಷಣೆ, ವೇಳಾಪಟ್ಟಿ, ದರದ ಮಾಹಿತಿ ಇಲ್ಲಿದೆ

ರಾತ್ರಿ ವೇಳೆ‌ ನಡೆದಿತ್ತು ಕಳ್ಳತನ
ಕಳೆದ 21ರಂದು ರಾತ್ರಿ ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸನಗರ ಟೌನ್ ಸುಮೇಧಾ ವಿವಿದ್ಧೋದ್ದೇಶ ಸೌಹಾರ್ದ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ 2 ಕ್ವಿಂಟಾಲ್ 72 ಕೆಜಿ ಅಡಿಕೆಯನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು. ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಪ್ರಕರಣ‌ ಬೇಧಿಸಿದ ತಂಡ
ಪ್ರಕರಣದಲ್ಲಿ ಕಳವಾದ ಅಡಿಕೆ ಮತ್ತು ಆರೋಪಿತರ ಪತ್ತೆಗಾಗಿ ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ‌ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ, ಹೊಸನಗರ ವೃತ್ತದ ಸಿಪಿಐ ಗುರಣ್ಣ ಹೆಬ್ಬಾರ್ ಮೇಲ್ವಿಚಾರಣೆಯಲ್ಲಿ ಪಿಎಸ್.ಐ ವೈ.ಕೆ.ಶಿವಾನಂದ್ ನೇತೃತ್ವದ ಎಎಸ್ಐ ಸತೀಶ್ ರಾಜ್, ಸಿಬ್ಬಂದಿ ಸುನೀಲ್, ರಂಜಿತ್, ಗಂಗಪ್ಪ, ಮಹೇಶ್ ಅವರುಗಳನ್ನು ಒಳಗೊಂಡ ತಂಡ ತನಿಖೆ ನಡೆಸಿ ಆರೋಪಗಳನ್ನು ಬಂಧಿಸಲು ಯಶಸ್ವಿಯಾಗಿದೆ.

error: Content is protected !!